Stock Market | ಶೇರುಪೇಟೆಯಲ್ಲಿ ಏರಿಳಿತ ಮುಂದುವರಿದಿದೆ. ಅಂತರರಾಷ್ಟ್ರೀಯ ಮತ್ತು ದೇಶೀಯ ಪರಿಸ್ಥಿತಿಗಳು ಇದಕ್ಕೆ ಕಾರಣವೆಂದು ಹೇಳಬಹುದು. ಒಂದು ಕಡೆ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಹೊರ ಬರುತ್ತಿದ್ರೆ, ಮತ್ತೊಂದೆಡೆ ಕಂಪನಿಗಳು ನವೀಕರಣ ಕಾರ್ಯದಲ್ಲಿ ತೊಡಗಿಕೊಂಡಿವೆ. (ಸಾಂದರ್ಭಿಕ ಚಿತ್ರ)
ಮಾರುಕಟ್ಟೆಯಲ್ಲಿ ಬ್ರೋಕರೇಜ್ ಸಂಸ್ಥೆಗಳು ಬಹು ಷೇರುಗಳನ್ನು ಖರೀದಿಸಲು ಶಿಫಾರಸು ಮಾಡುತ್ತವೆ. ಈ ಶೇರುಗಳಲ್ಲಿ ಶೇ.39 ಪ್ರತಿಶತದಷ್ಟು ಆದಾಯವನ್ನು ಪಡೆಯುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಅದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ)
ಪ್ರಮುಖ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್, ಇತ್ತೀಚೆಗೆ ರಿಯಲ್ ಎಸ್ಟೇಟ್ ಕಂಪನಿ ಒಬೆರಿಯೊ ರಿಯಾಲ್ಟಿ ಖರೀದಿಸಲು ಶಿಫಾರಸು ಮಾಡಿದೆ. ಈ ಷೇರಿನ ಬೆಲೆ 1,100 ರೂಪಾಯಿವರೆಗೂ ತಲುಪುವ ನಿರೀಕ್ಷೆಯಿದೆ. ಫೆಬ್ರವರಿ 10 ರಂದು ಈ ಷೇರಿನ ಬೆಲೆ ರೂ. 859 ನಲ್ಲಿದೆ. ಅಂದರೆ ಹೂಡಿಕೆದಾರರು ಶೇ.28ರಷ್ಟು ಲಾಭ ಪಡೆಯಬಹುದು. (ಸಾಂದರ್ಭಿಕ ಚಿತ್ರ)
ಮೋತಿಲಾಲ್ ಓಸ್ವಾಲ್ ಸಹ ಎಂಡ್ಯೂರೆನ್ಸ್ ಟೆಕ್ನಾಲಜಿ ಷೇರುಗಳಲ್ಲಿ ಬುಲಿಶ್ ಆಗಿದ್ದಾರೆ. ಈ ಷೇರಿನ ಬೆಲೆ 1625 ರೂಪಾಯಿ ತಲುಪುತ್ತದೆ ಎಂದು ಈ ಬ್ರೋಕರೇಜ್ ಸಂಸ್ಥೆ ಅಂದಾಜಿಸಿದೆ. ಫೆಬ್ರವರಿ 10 ರಂದು ಷೇರಿನ ಬೆಲೆ 1375 ರೂಪಾಯಿ ಇತ್ತು. ಅಂದರೆ ಶೇರುಗಳ ಬೆಲೆ ಶೇ.18ರಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. (ಸಾಂದರ್ಭಿಕ ಚಿತ್ರ)
ICICI ಸೆಕ್ಯುರಿಟೀಸ್ ಹೇಳುವಂತೆ ರೈಲ್ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾದ ಷೇರಿನ ಬೆಲೆ 145 ರೂಪಾಯಿ ಆಗಬಹುದು. ಫೆಬ್ರವರಿ 10 ರಂದು ಷೇರಿನ ಬೆಲೆ 115 ರೂಪಾಯಿಯಿದೆ. ಅಂದರೆ ಈ ಪಾಲು ಶೇ.26ರಷ್ಟು ಹೆಚ್ಚು ತಲುಪುವ ನಿರೀಕ್ಷೆ ಇದೆ. (ಸಾಂದರ್ಭಿಕ ಚಿತ್ರ)
ಮಹಾನಗರ ಗ್ಯಾಸ್ ಶೇರು ಸಹ ಏರಿಕೆಯಾಗುವ ನಿರೀಕ್ಷೆಗಳಿವೆ. ಮಹಾನಗರ ಗ್ಯಾಸ್ ಶೇರು ಬೆಲೆ 1,050 ರೂಪಾಯಿ ತಲುಪುವ ನಿರೀಕ್ಷೆಗಳಿವೆ. ಫೆಬ್ರವರಿ 10 ರಂದು ಈ ಶೇರಿನ ಬೆಲೆ 901 ರೂ.ಗಳಿದ್ದು, ಶೇ.17ರಷ್ಟು ಹೆಚ್ಚಾಗಬಹುದು. (ಸಾಂದರ್ಭಿಕ ಚಿತ್ರ)
ಫಿನೋ ಪೇಮೆಂಟ್ಸ್ ಬ್ಯಾಂಕ್ ಕೂಡ ಬುಲಿಶ್ ಸ್ಟಾಕ್ಗಳ ಪಟ್ಟಿಯಲ್ಲಿದೆ. ICICI ಸೆಕ್ಯುರಿಟೀಸ್ ಪ್ರಕಾರ, ಈ ಶೇರಿನ ಬೆಲೆ 325 ರೂ. ಆಗಬಹುದು. ಫೆಬ್ರವರಿ 10 ರಂದು ಈ ಶೇರುಗಳ ಬೆಲೆ 234 ರೂಪಾಯಿ ಇತ್ತು. ಶೇ.39ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. (ಸಾಂದರ್ಭಿಕ ಚಿತ್ರ)
ಶೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸುವವರು ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ. ಇಲ್ಲದಿದ್ದರೆ ಹಣವನ್ನು ಕಳೆದುಕೊಳ್ಳಬೇಕಾಗುತ್ತಿದೆ. ಈ ಲೇಖನ ಬ್ರೋಕರೇಜ್ ಸಂಸ್ಥೆಗಳು ನೀಡಿದ ಮಾಹಿತಿಯಾಧರಿತವಾಗಿದೆ. ನ್ಯೂಸ್ 18 ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. (ಸಾಂದರ್ಭಿಕ ಚಿತ್ರ)