ಜಾತಕದಲ್ಲಿ ಶುಭ ಹಾಗೂ ಅಶುಭ ಯೋಗಗಳು ಇದ್ದರೆ ಅದು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲ ಯೋಗಗಳು ಬದುಕಿನಲ್ಲಿ ಸುಖ ಹಾಗೂ ಸಮೃದ್ಧಿ ತಂದರೆ, ಕೆಲ ಯೋಗಗಳು ಕಷ್ಟಗಳನ್ನು ಹೆಚ್ಚು ಮಾಡುತ್ತದೆ.
ಅದರಂತೆ ಒಂದು ಯೋಗವಿದ್ದು, ಆ ಯೋಗವೇ ವಿಷ ಯೋಗ. ಅಪ್ಪಿ-ತಪ್ಪಿ ಈ ಯೋಗ ಇದ್ದರೆ ಕಷ್ಟಗಳು ಹೆಚ್ಚಾಗುತ್ತದೆ. ಒಂದರ ಹಿಂದೆ ಒಂದಂತೆ ಸಮಸ್ಯೆಗಳು ಬರುತ್ತದೆ. ಈ ಯೋಗದಿಂದ ಮುಕ್ತಿ ಪಡೆಯಲು ಕೆಲ ಪರಿಹಾರ ಮಾಡಬೇಕು.
ಶನಿ ಕಟಕ ರಾಶಿಯಲ್ಲಿ ಪುಷ್ಯ ನಕ್ಷತ್ರದ ಸ್ಥಾನದಲ್ಲಿ ಇದ್ದರೆ ಹಾಗೂ ಚಂದ್ರ ಮಕರದಲ್ಲಿ ಶ್ರವಣ ನಕ್ಷತ್ರದಲ್ಲಿದ್ರೆ ಈ ಯೋಗ ರೂಪುಗೊಳ್ಳುತ್ತದೆ. ಅದರ ಜೊತೆಗೆ ಶನಿ ಹಾಗೂ ಚಂದ್ರ ವಿರುದ್ಧ ದಿಕ್ಕಿನಲ್ಲಿ ಅಥವಾ ಸ್ಥಾನದಲ್ಲಿ ಇದ್ದರೂ ಈ ಯೋಗ ಉಂಟಾಗುತ್ತದೆ.
ಈ ಯೋಗ ಹೇಗೆ ರೂಪುಗೊಳ್ಳುತ್ತದೆ? ಇನ್ನು 8ನೇ ಮನೆಯಲ್ಲಿ ರಾಹು ಮತ್ತು ಶನಿ ಇದ್ದರೆ ಹಾಗೂ ಸಾಡೇಸಾತಿಯಲ್ಲಿ ಹುಟ್ಟುವ ಮಕ್ಕಳಿಗೆ ಸಹ ಈ ವಿಷಯೋಗ ಇರುತ್ತದೆ ಎನ್ನಲಾಗುತ್ತದೆ. ಈ ಯೋಗ ಇದ್ದರೆ ಹುಟ್ಟಿದಾಗಿನಿಂದ ಸಾಯುವವರೆಗೂ ಕಷ್ಟಗಳು ಇರುತ್ತದೆ.
ಪ್ರತಿ ಶನಿವಾರ ಕಪ್ಪು ಎಳ್ಳಿನ ಉಂಡೆ ಹಾಗೂ ಕಪ್ಪು ಬಟ್ಟೆಯ ಉಂಡೆಯನ್ನು ಎಳ್ಳಿನ ಎಣ್ಣೆಯಲ್ಲಿ ಹಾಕಿ ದೀಪ ಹಚ್ಚಬೇಕು. ಇದರಿಂದ ಶನಿಯಿಂದ ಉಂಟಾದ ವಿಷ ಯೋಗಕ್ಕೆ ಪರಿಹಾರ ಸಿಗುತ್ತದೆ. ಅಲ್ಲದೇ, ಕಷ್ಟಗಳು ಸಹ ನಿವಾರಣೆ ಆಗುತ್ತದೆ.
ಶನಿವಾರ ಹಾಗೂ ಮಂಗಳವಾರ ಆಜಂನೇಯನ ಆರಾಧನೆ ಮಾಡಬೇಕು. ಇದರ ಜೊತೆಗೆ ಚಂದ್ರನನ್ನ ಸಹ ಪೂಜೆ ಮಾಡಿದರೆ ಈ ಯೋಗದ ಸಮಸ್ಯೆ ನಿವಾರಣೆ ಆಗುತ್ತದೆ. ಅಲ್ಲದೇ, ಪ್ರತಿದಿನ ಬಾವಿಗೆ ಹಾಲನ್ನು ಹಾಕಿ ಪೂಜೆ ಮಾಡಿ.
ಅರಳಿ ಮರದ ಬುಡಕ್ಕೆ ತೆಂಗಿನಕಾಯಿಯನ್ನು ಏಳು ಬಾರಿ ಒಡೆಯುವುದರಿಂದ ನಿಮಗೆ ವಿಷ ಯೋಗದ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ. ಅಲ್ಲದೇ, ಆ ಕಾಯನ್ನು ಅಲ್ಲಿರುವ ಎಲ್ಲರಿಗೂ ಪ್ರಸಾದವಾಗಿ ಕೊಡಬೇಕು.
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)