ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಟ್ಟ ಗ್ರಹಗಳು ಸೇರಿಕೊಂಡರೆ ವಿಪರೀತ ರಾಜಯೋಗ ಉಂಟಾಗುತ್ತದೆ. ಇದು ಯಾರ ಜಾತಕದಲ್ಲಿ ಬೇಕಾದರೂ ರೂಪುಗೊಳ್ಳಬಹುದು. ಈ ಯೋಗವಿರುವ ಜನರು ಅಗಾಧ ಯಶಸ್ಸನ್ನು ಪಡೆಯುತ್ತಾರೆ. ಈ ಬಾರಿ ವಿಪರೀತ ರಾಜಯೋಗದಿಂದಾಗಿ ನಾಲ್ಕು ರಾಶಿಯವರಿಗೆ ಅದೃಷ್ಟ ಒಲಿಯಲಿದೆ.
ಮೇಷ: ಈ ಯೋಗದ ಕಾರಣದಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡೂ ಶಾಂತವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ಬಾಕಿ ಇದ್ದ ಹಣ ಈಗ ಮರಳಿ ಸಿಗಲಿದೆ. ಹಿಂದೆ ಮಾಡಿದ ಹೂಡಿಕೆಗಳು ಈಗ ಲಾಭವನ್ನು ತರುತ್ತವೆ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿರಲಿದೆ.
ಸಿಂಹ: ಈ ಯೋಗದ ಕಾರಣದಿಂದ ನಿಮ್ಮ ಆದಾಯ ಹೆಚ್ಚಾಗುತ್ತದೆ. ಅಲ್ಲದೇ, ಕಾನೂನು ವಿವಾದ ಬಗೆಹರಿಯಲಿದೆ. ಎಲ್ಲಾ ನಿರ್ಧಾರ ನಿಮ್ಮ ಪರವಾಗಿಯೇ ಇರುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭ ಸಹ ನಿಮಗೆ ಸಿಗುತ್ತದೆ. ಈ ಸಮಯದಲ್ಲಿ ನೀವು ಹೊಸ ಉದ್ಯೋಗದ ಹುಡುಕಾಟದಲ್ಲಿದ್ದರೆ, ಉತ್ತಮ ಕೆಲಸ ನಿಮ್ಮದಾಗುತ್ತದೆ.
ತುಲಾ: ನೀವು ಈ ಯೋಗದ ಕಾರಣದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಬಹಳ ದಿನಗಳಿಂದ ಕಾಯುತ್ತಿದ್ದ ಹಣ ಈಗ ನಿಮ್ಮ ಕೈ ಸೇರಲಿದೆ. ಅಲ್ಲದೇ, ಒಳ್ಳೆಯ ಹೊಸ ಕೆಲಸ ಸಿಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಸ್ಮಾರ್ಟ್ ಹೂಡಿಕೆಯು ಉತ್ತಮ ಆದಾಯವನ್ನು ನೀಡುತ್ತದೆ.
ಮಕರ: ನಿಮ್ಮ ಇಷ್ಟಾರ್ಥಗಳು ಈಡೇರುವ ಸಮಯ ಬಂದಿದೆ ಎಂದರೆ ತಪ್ಪಲ್ಲ. ಇದರಿಂದ ನಿಮ್ಮ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. ದಾಂಪತ್ಯ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ಸಹ ಬಗೆಹರಿದು ಸುಖವಾಗಿ ಜೀವನ ನಡೆಸಬಹುದು.
ಈ ಯೋಗದ ಕಾರಣದಿಂದ ಕುಟುಂಬದಲ್ಲಿ ಶುಭಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಆರೋಗ್ಯ ಚೆನ್ನಾಗಿರುವುದರಿಂದ ಮನಸ್ಸು ಸಹ ಖುಷಿಯಾಗುತ್ತದೆ. ಒಟ್ಟಾರೆ ಈ ವಿಪರೀತ ರಾಜಯೋಗದ ಕಾರಣದಿಂದ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಆಗಲಿದೆ.
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)