ಶುಕ್ರ ಬಹಳ ಮುಖ್ಯವಾದ ಗ್ರಹ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಶುಕ್ರನನ್ನ ಸಂಪತ್ತು ಹಾಗೂ ಐಶ್ವರ್ಯದ ಗ್ರಹ ಎಂದು ಸಹ ಹೇಳುತ್ತಾರೆ. ಈ ಶುಕ್ರನ ರಾಶಿ ಬದಲಾವಣೆ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ಶುಕ್ರ 6 ಏಪ್ರಿಲ್ 2023 ರಂದು ತನ್ನದೇ ಆದ ವೃಷಭ ರಾಶಿಯಲ್ಲಿ ಸಾಗಲಿದೆ. ಮೇ 2ರವರೆಗೆ ಇಲ್ಲೇ ಇರಲಿದ್ದಾನೆ. ಇದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.
ಮೇಷ ರಾಶಿ: ಶುಕ್ರನ ಈ ಸಂಚಾರ ಮೇಷ ರಾಶಿಯವ ಬದುಕಿನಲ್ಲಿ ಹೊಸ ದಾರಿ ತೋರಿಸುತ್ತದೆ. ಈ ಸಮಯದಲ್ಲಿ ಎಲ್ಲಾ ಕನಸುಗಳು ನನಸಾಗುತ್ತದೆ. ನೀವು ತೆಗೆದುಕೊಂಡ ನಿರ್ಧಾರ ಮುಂದಿನ ದಿನಗಳಲ್ಲಿ ಲಾಭ ನೀಡುತ್ತದೆ. ಆರ್ತಿಕವಾಗಿ ಸಹ ನಿಮ್ಮ ಶಕ್ತಿ ಹೆಚ್ಚಾಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಜೀವನದಲ್ಲಿ ಪ್ರತಿ ಘಟ್ಟದಲ್ಲೂ ಶುಕ್ರನ ಕಾರಣದಿಂದ ಯಶಸ್ಸು ಸಿಗುತ್ತದೆ. ಆದರೆ ಈ ಸಮಯದಲ್ಲಿ ಯಾವುದೇ ಹೊಸ ಕೆಲಸ ಮಾತ್ರ ಇವರು ಆರಂಭಿಸಬಾರದು. ಉಳಿದಂತೆ ಆರ್ಥಿಕವಾಗಿ ನಿಮಗೆ ಈ ಶುಕ್ರ ಸಂಚಾರೆ ಬಹಳ ಪ್ರಯೋಜನಕಾರಿ. ಜೀವನದಲ್ಲಿ ಅನೇಕ ಅವಕಾಶಗಳು ನಿಮ್ಮನ್ನ ಹುಡುಕಿ ಬರಲಿದೆ.
ಕಟಕ ರಾಶಿ: ಈ ಸಮಯದಲ್ಲಿ ಶುಕ್ರನ ಕಾರಣದಿಂದ ಕಟಕ ರಾಶಿಯವರ ಆದಾಯ ಹೆಚ್ಚಾಗಲಿದೆ. ನಿಮ್ಮ ಹಳೆಯ ಹೂಡಿಕೆ ನಿಮಗೆ ಲಾಭ ನೀಡುತ್ತದೆ. ಯಾವುದಾದರೂ ಕೆಲಸ ಬಹಳ ದಿನಗಳಿಂದ ನಿಂತಿದ್ದರೆ ಈ ಸಮಯದಲ್ಲಿ ಅದೂ ಕೂಡ ಪೂರ್ಣಗೊಳ್ಳುತ್ತದೆ. ನೀವು ಹೊಸ ವ್ಯಾಪಾರ ಆರಂಭಿಸಲು ಇದು ಸೂಕ್ತವಾದ ಸಮಯ ಎಂದರೆ ತಪ್ಪಲ್ಲ.
ಕನ್ಯಾರಾಶಿ: ಈ ಶುಕ್ರ ಸಂಚಾರದಿಂದ ಕನ್ಯಾ ರಾಶಿಯವರ ಬಾಳು ಬಂಗಾರವಾಗಲಿದೆ. ನಿಮಗೆ ಹೊಸ ಹೊಸ ಅವಕಾಶಗಳು ಈ ಸಮಯದಲ್ಲಿ ಸಿಗುತ್ತದೆ. ಆರ್ಥಿಕವಾಗಿ ಇಷ್ಟು ದಿನ ಎದುರಿಸಿದ್ದ ಸಮಸ್ಯೆಗಳಿಗೆ ಈಗ ಮುಕ್ತಿ ಸಿಗಲಿದೆ. ಅವಿವಾಹಿತರಿಗೆ ಮದುವೆ ಭಾಗ್ಯ ಸಿಗಲಿದೆ.
ಮಕರ ರಾಶಿ: ಈ ಶುಕ್ರ ಸಂಚಾರದಲ್ಲಿ ಮಕರ ರಾಶಿಯವರಿಗೆ ಸಹ ಬಹಳ ಲಾಭವಾಗಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ದೊಡ್ಡ ಬದಲಾವಣೆ ಆಗಲಿದ್ದು, ನಿಮ್ಮ ಗೌರವ ಹೆಚ್ಚಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಸುಧಾರಿಕೆ ಆಗಲಿದ್ದು, ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಇನ್ನು ಆರ್ಥಿಕವಾಗಿ ಸಹ ಈ ಸಮಯದಲ್ಲಿ ಹಲವು ಪ್ರಯೋಜನ ಸಿಗಲಿದೆ.
ಕುಂಭ ರಾಶಿ: ಈ ಶುಕ್ರನ ಕಾರಣದಿಂದ ಕುಂಬ ರಾಶಿಯವರ ಅದೃಷ್ಟ ಹೆಚ್ಚಾಗುತ್ತದೆ. ಕೆಲಸದಲ್ಲಿ ಹೊಸ ಹೊಸ ಅವಕಾಶಗಳು ನಿಮಗೆ ಸಿಗಲಿದೆ. ನೀವು ಆರಂಭಿಸುವ ಪ್ರತಿ ಕೆಲಸದಲ್ಲಿ ದೊಡ್ಡ ಲಾಭ ನಿಮ್ಮನ್ನ ಹುಡುಕಿಬರಲಿದೆ. ವ್ಯಾಪಾರದಲ್ಲಿಯೂ ನಿಮಗೆ ಲಾಭವಾಗಲಿದೆ.
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)