ಜೋತಿಷ್ಯದಲ್ಲಿ ಜಾತಕಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತದೆ. ಅದರ ಪ್ರಕಾರವೇ ಮದುವೆ ಸೇರಿದಂತೆ ಅನೇಕ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಜಾತಕದಲ್ಲಿ ಮದುವೆ ಯೋಗ ಸೇರಿದಂತೆ ಜೀವನದ ಎಲ್ಲಾ ಘಟ್ಟಗಳ ಬಗ್ಗೆ ಮಾಹಿತಿ ಇರುತ್ತದೆ.
ಈ ಜಾತಕದ 7ನೇ ಮನೆಯನ್ನು ಮದುವೆಯ ಸ್ಥಾನ ಎಂದು ಹೇಳಲಾಗುತ್ತದೆ. ಆ ಜಾಗದಲ್ಲಿ ಸೂರ್ಯ, ಚಂದ್ರ ಹಾಗೂ ಲಗ್ನದ ಅನುಸಾರ ಮದುವೆಯ ಬಗ್ಗೆ ನಿರ್ಧಾರ ಮಾಡುತ್ತದೆ. ಅದರಂತೆ ಈ 5 ರಾಶಿಯವರದ್ದು ಲವ್ ಮ್ಯಾರೇಜ್ ಆಗುತ್ತಂತೆ.
ಮೇಷ ರಾಶಿ: ಈ ರಾಶಿಯವರದ್ದು ಲವ್ ಮ್ಯಾರೇಜ್ ಗ್ಯಾರಂಟಿಯಂತೆ. ಅದರಲ್ಲೂ ಇವರು ಹತ್ತಿರದ ಸಂಬಂಧಿ ಅಥವಾ ಸ್ನೇಹಿತರಲ್ಲೇ ಯಾರನ್ನಾದರೂ ಇಷ್ಟಪಟ್ಟು ಮದುವೆ ಆಗುತ್ತಾರಂತೆ. ಅಲ್ಲದೇ, ಇಷ್ಟಪಟ್ಟವರನ್ನ ಕಷ್ಟಪಟ್ಟಾದರೂ ಮದುವೆ ಆಗುತ್ತಾರೆ.
ವೃಷಭ ರಾಶಿ: ಈ ರಾಶಿಯವರು ತುಂಬಾ ಹಠಮಾರಿಗಳು. ಅವರು ಅಂದುಕೊಂಡ ಕೆಲಸ ಮಾಡಿಯೇ ಮುಗಿಸುವವರು. ಅದೆಷ್ಟೇ ಕಷ್ಟವಾದರೂ ಸರಿ ಇಷ್ಟಪಟ್ಟ ವ್ಯಕ್ತಿಯನ್ನು ಮದುವೆ ಆಗುವ ಸ್ವಭಾವ ಇವರದ್ದು.
ಮಿಥುನ ರಾಶಿ: ಈ ರಾಶಿಯವರು ಸಹ ಇಷ್ಟಪಟ್ಟ ವ್ಯಕ್ತಿಯನ್ನು ಮದುವೆ ಆಗುತ್ತಾರಂತೆ. ಅಲ್ಲದೇ, ತಾವು ಇದ್ದಂತೆ ಒಪ್ಪಿಕೊಳ್ಳುವ ವ್ಯಕ್ತಿಯನ್ನು ಅವರು ಆಯ್ಕೆ ಮಾಡಿ, ಜೀವನ ಸಂಗಾತಿ ಮಾಡಿಕೊಳ್ಳುತ್ತಾರೆ.
ಧನಸ್ಸು ರಾಶಿ: ಈ ರಾಶಿಯವರಿಗೆ ತಮ್ಮ ಇಷ್ಟದಂತೆ ಜೀವನ ನಡೆಸುವ ಆಸೆ ಇರುತ್ತದೆ. ಅದರಲ್ಲೂ ಸಂಗಾತಿಯ ವಿಚಾರವಾಗಿ ಅವರು ಯಾವುದೇ ಕಾರಣಕ್ಕೂ ಬೇರೆಯವರ ನಿರ್ಧಾರವನ್ನು ಒಪ್ಪುವುದಿಲ್ಲ. ಅವರಿಷ್ಟದ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ.
ಮಕರ ರಾಶಿ: ತಾವು ಪ್ರೀತಿಸಿದ ವ್ಯಕ್ತಿಯನ್ನು ಎಂದಿಗೂ ನಡು ನೀರಿನಲ್ಲಿ ಕೈ ಬಿಡುವುದಿಲ್ಲ. ಅದೆಷ್ಟೇ ಸವಾಲುಗಳು ಎದುರಾದರೂ ಅದನ್ನೆಲ್ಲಾ ಮೀರಿ ಗೆದ್ದು ತೋರಿಸುವ ಶಕ್ತಿ ಇವರಿಗಿದೆ. ಅಲ್ಲದೇ, ಮದುವೆಯ ವಿಚಾರದಲ್ಲಿ ಇವರ ಆಯ್ಕೆಯೇ ಕೊನೆ
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)