ಈ ವರ್ಷದ ಮೊದಲು ಸೂರ್ಯ ಗ್ರಹಣ ಏಪ್ರಿಲ್ 20ರಂದು ಸಂಭವಿಸುತ್ತಿದ್ದು, ಅದರಿಂದ ಅನೇಕ ರಾಶಿಗಳ ಜೀವನದಲ್ಲಿ ಬದಲಾವಣೆ ಆಗಲಿದೆ. ಕೆಲವರಿಗೆ ಇದರಿಂದ ಲಾಭವಾದರೆ, ಇನ್ನು ಕೆಲವರಿಗೆ ನಷ್ಟವಾಗುತ್ತದೆ.
ಈ ಬಾರಿಯ ಸೂರ್ಯ ಗ್ರಹಣ ಮೇಷ ರಾಶಿಯಲ್ಲಿ ಸಂಭವಿಸಲಿದೆ. ರಾಹುವು ಪ್ರಸ್ತುತ ಮೇಷ ರಾಶಿಯಲ್ಲಿದೆ, ಹಾಗೆಯೇ ಗುರು ಗ್ರಹವು ಏಪ್ರಿಲ್ 22 ರಂದು ಮೇಷ ರಾಶಿಗೆ ಪ್ರವೇಶ ಮಾಡುತ್ತದೆ. ಅದರಿಂದಾಗಿ ಈ ಸೂರ್ಯ ಗ್ರಹಣದ ನಂತರ ಈ ಯೋಗ ರೂಪುಗೊಳ್ಳುತ್ತದೆ.
ಈ ಯೋಗದ ಪ್ರಭಾವವು ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಆದರೆ ಮುಖ್ಯವಾಗಿ ಈ ಸೂರ್ಯಗ್ರಹಣದಿಂದ ಅನೇಕ ರಾಶಿಗಳು ಸಮಸ್ಯೆಯನ್ನು ಅನುಭವಿಸುತ್ತವೆ. ಅವರ ಜೀವನದಲ್ಲಿ ಸಾಲಾಗಿ ಸಮಸ್ಯೆಗಳು ಬರುತ್ತದೆ.
ಮೇಷ ರಾಶಿ: ಸೂರ್ಯಗ್ರಹಣವು ನಿಮಗೆ ಸ್ವಲ್ಪ ಹಾನಿಕಾರಕವಾಗಿರಲಿದೆ. ಆದ್ದರಿಂದ, ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಅಲ್ಲದೇ ಈ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಾಗುತ್ತದೆ. ಹಾಗೆಯೇ ಯಾರಿಗೂ ಸಾಲ ಕೊಡಬೇಡಿ. ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ವೃಷಭ ರಾಶಿ: ಈ ರಾಶಿಯವರಿಗೆ ಸೂರ್ಯಗ್ರಹಣ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಏಕೆಂದರೆ ಈ ಗ್ರಹಣವು ನಿಮ್ಮ ಜಾತಕದ 12ನೇ ಮನೆಯಲ್ಲಿ ಸಂಭವಿಸಲಿದೆ. ಅದಕ್ಕಾಗಿಯೇ ಈ ಸಮಯದಲ್ಲಿ ಪ್ರಯಾಣದಿಂದ ತೊಂದರೆ ಉಂಟಾಗಬಹುದು. ಅಲ್ಲದೇ, ಕೆಲವು ಅನಗತ್ಯ ಖರ್ಚುಗಳು ಉಂಟಾಗಬಹುದು. ನಿಮಗೆ ಆರ್ಥಿಕವಾಗಿ ಸಮಸ್ಯೆ ಆಗುವ ಸಾಧ್ಯತೆ ಇದೆ.
ಕನ್ಯಾರಾಶಿ: ಸೂರ್ಯಗ್ರಹಣವು ನಿಮಗೆ ಹಾನಿಕಾರಕವಾಗಲಿದೆ. ಈ ಗ್ರಹಣವು ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಸಂಭವಿಸಲಿದೆ. ಆದ್ದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಕೆಲಸದಲ್ಲಿ ಸಹ ಸಮಸ್ಯೆ ಆಗುತ್ತದೆ. ವಿಶೇಷವಾಗಿ ರಾಹು ಮತ್ತು ಸೂರ್ಯ ದಶಾ ನಡೆಯುತ್ತಿರುವುದರಿಂದ ಒತ್ತಡ ಹೆಚ್ಚಾಗಬಹುದು.
ವೃಶ್ಚಿಕ: ಸೂರ್ಯಗ್ರಹಣದಿಂದ ನೀವು ಸಹ ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಗ್ರಹಣವು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಸಂಭವಿಸಲಿದ್ದು, ಇದರಿಂದ ನಂಬಿದವರು ಮೋಸ ಮಾಡುತ್ತಾರೆ. ಇನ್ನು ಸುಮಾರು 10 ರಿಂದ 15 ದಿನಗಳವರೆಗೆ ಕಚೇರಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಬೇಡಿ. ಅಲ್ಲದೇ ಹಣ ಹೂಡಿಕೆ ಕೂಡ ಮಾಡಬೇಡಿ.
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)