ಜ್ಯೋತಿಷ್ಯದ ಪ್ರಕಾರ, ಸಣ್ಣ ಬದಲಾವಣೆ ಸಹ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಗ್ರಹಗಳ ರಾಶಿ ಬದಲಾವಣೆ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಬಹುದು. ಕೆಲ ಗ್ರಹಗಳ ಬದಲಾವಣೆ ಜೀವನವನ್ನು ಹಾಳು ಮಾಡುವ ಶಕ್ತಿ ಹೊಂದಿರುತ್ತದೆ.
ಮಂಗಳ ಗ್ರಹ ಏಪ್ರಿಲ್ 13 ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಮಿಥುನ ರಾಶಿಯ ಅಧಿಪತಿ ಬುಧ. ಎಲ್ಲರಿಗೂ ಗೊತ್ತಿರುವಂತೆ ಬುಧ ಹಾಗೂ ಮಂಗಳ ಗ್ರಹದ ನಡುವೆ ವೈಷಮ್ಯವಿದೆ, ಹಾಗಾಗಿ ಈ ಸಂಚಾರ 4 ರಾಶಿಯವರಿಗೆ ಸಮಸ್ಯೆ ಉಂಟು ಮಾಡಲಿದೆ.
ಮಿಥುನ ರಾಶಿ: ಮಂಗಳ ಗ್ರಹದ ಸಂಚಾರವು ಮಿಥುನ ರಾಶಿಯವರಿಗೆ ತೊಂದರೆದಾಯವಾಗಿರಲಿದೆ. ಈ ಸಂಚಾರ ಲಗ್ನ ಮನೆಯಲ್ಲಿ ಆಗಲಿದ್ದು, ಹಾಗಾಗಿ ಈ ಸಂದರ್ಭದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ನೀವು ಹೊಸ ವ್ಯಾಪಾರಕ್ಕೆ ಕೈ ಹಾಕಬಾರದು. ಅಪ್ಪಿ-ತಪ್ಪಿ ಹೊಸ ಯೋಜನೆ ಆರಂಭ ಮಾಡಿದರೆ ನಷ್ಟ ಖಚಿತ.
ಅಲ್ಲದೇ ಈ ಸಂಚಾರದ ಕಾರಣದಿಂದ ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ಹಾಗೆಯೇ, ಆಸ್ತಿ ಖರೀದಿ ಹಾಗೂ ಹೂಡಿಕೆ ಮಾಡಲು ಇದು ಸರಿಯಾದ ಸಮಯವಲ್ಲ. ಮುಖ್ಯವಾಗಿ ವಿವಾದಗಳು ಹಾಗೂ ಜಗಳಗಳಿಂದ ದೂರ ಇದ್ದರೆ ಉತ್ತಮ.
ವೃಶ್ಚಿಕ: ಈ ರಾಶಿಯವರಿಗೆ ಸಹ ಈ ಮಂಗಳ ಸಂಚಾರದಿಂದ ಕಷ್ಟಗಳು ಬರುತ್ತದೆ. ಮಂಗಳ ಈ ರಾಶಿಯ 8ನೇ ಮನೆಯಲ್ಲಿ ಸಂಚಾರ ಮಾಡಲಿದ್ದು, ಆರೋಗ್ಯದ ವಿಚಾರದಲ್ಲಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ನೀವು ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ವಹಿಸಿದರೆ ಬಹಳ ಉತ್ತಮ.
ಇನ್ನು ಜ್ಯೋತಿಷ್ಯದ ಪ್ರಕಾರ ಈ ಮಂಗಳ ಸಂಚಾರದ ಪರಿಣಾಮದಿಂದ ನಿಮಗೆ ಅಪಘಾತವಾಗುವ ಸಂಭವ ಸಹ ಇದೆ. ಹಾಗಾಗಿ ದೂರ ಪ್ರಯಾಣ ಮಾಡುವುದು ಸೇರಿದಂತೆ ಯಾವುದೇ ಸಮಸ್ಯೆಗೆ ಸಿಲುಕಿಕೊಳ್ಳದಂತೆ ಜಾಗರೂಕರಾಗಿದ್ದರೆ ಬಹಳ ಉತ್ತಮ. ಸಂಸಾರದಲ್ಲಿ ಸಹ ಬಿರುಗಾಳಿ ಸಹ ಬೀಸಲಿದೆ.
ಕಟಕ: ಮಂಗಳ ಗ್ರಹ ನಿಮಗೇ ಸಹ ಸಮಸ್ಯೆ ತರುವುದು ಗ್ಯಾರಂಟಿ. ಆರ್ಥಿಕವಾಗಿ ಈ ಸಮಯದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ. ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಅನಗತ್ಯವಾಗಿ ನಿಮಗೆ ಖರ್ಚು ಹೆಚ್ಚಾಗುತ್ತದೆ. ಇದರ ಜೊತೆ ಆರೋಗ್ಯ ಸಹ ಕೈ ಕೊಡಬಹುದು. ಹಾಗಾಗಿ ಸ್ವಲ್ಪ ಎಚ್ಚರ. ಯಾವುದೇ ವಾದ-ವಿವಾದಗಳಲ್ಲಿ ಸಿಲುಕಿಕೊಳ್ಳಬೇಡಿ.
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)