ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೊಸವರ್ಷದ ಆರಂಭಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. ಈ ಯುಗಾದಿ ಹೊಸವರ್ಷದಲ್ಲಿ ನಿಮ್ಮ ದಿನಗಳು ಹೇಗಿರಲಿದೆ, ಯಾವ ರಾಶಿಗೆ ಶುಭ ಲಾಭ, ಯಾರಿಗೆ ಸಂಕಷ್ಟ ಎಂಬುದನ್ನ ತಿಳಿದುಕೊಳ್ಳುವ ತವಕ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಸಿಂಹ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂಬುದು ಇಲ್ಲಿದೆ.
ಕೆಲವೊಂದು ರಾಶಿಗಳ ಬದುಕಿನಲ್ಲಿ ಯುಗಾದಿ ಬೆಲ್ಲವನ್ನು ತಂದರೆ, ಇನ್ನೂ ಕೆಲವರಿಗೆ ಬೇವಾಗಿರುತ್ತದೆ. ಜ್ಯೋತಿಷ್ಯದ ಪ್ರಕಾರ ಈ ಯುಗಾದಿ ಹಲವು ರಾಶಿಗಳಿಗೆ ಉತ್ತಮ ಫಲಿತಾಂಶ ನೀಡುತ್ತದೆ.
ಈ ಸಂವತ್ಸರ ನಿಮಗೆ ಬಹುಪಾಲು ಶುಭ ಫಲಗಳೇ ಅನುಭವಕ್ಕೆ ಬರಲಿದೆ. ಭಾಗ್ಯದ ಗುರು ಎಲ್ಲಾ ವಿಚಾರಗಳಲ್ಲೂ ನಿಮಗೆ ಶ್ರೀರಕ್ಷೆಯಾಗಲಿದ್ದು, ಅನಿರೀಕ್ಷಿತವಾದ ಭೂಮಿವೇಶನ ಖರೀದಿ ಅಥವಾ ಭೂ ವ್ಯವಹಾರದಿಂದ ಲಾಭವಾಗುವ ಸಾಧ್ಯತೆ ಇದೆ.
ರಾಜಕೀಯದಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯ ಯೋಗವಿದೆ ರಾಜಕಾರಣಿಗಳ ಸಂಪರ್ಕ ಅಧಿಕವಾಗಲಿದೆ. ಧರ್ಮ ದೇವರು ಗುರು ಹಿರಿಯರು ನಮಗೆ ಶ್ರದ್ಧ ವಿಶ್ವಾಸಗಳು ಜಾಸ್ತಿಯಾಗಲಿದ್ದು, ಆಧ್ಯಾತ್ಮಿಕವಾಗಿ ಹೆಚ್ಚು ಸಮಯವನ್ನು ಕಳೆಯುತ್ತೀರಿ.
ಈ ಸಮಯದಲ್ಲಿ ನಿಮಗೆ ಬಂಧು ಬಾಂಧವರು ನಿಮಗೆ ನಿರಂತರವಾಗಿ ಸಹಾಯವನ್ನೇ ಮಾಡಲಿದ್ದಾರೆ. ನಿಮ್ಮ ಕರ್ತವ್ಯಗಳ ಬಗ್ಗೆ ನಿಮಗೆ ಅತೀವವಾದ ಭಕ್ತಿ ಬೆಳೆಯಲಿದೆ. ಇದರಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ನಿಮಗೆ ಸಿಗಲಿದೆ.
ಆದರೂ ಕುಟುಂಬದ ವಿಚಾರದಲ್ಲಿ ಹೆಂಡತಿ ಮಕ್ಕಳಿಂದ ಸ್ವಲ್ಪ ಕಿರಿಕಿರಿಗಳೇ ನಿಮಗೆ ಮುಂದುವರೆಯಲಿದೆ. ಆಸ್ಪತ್ರೆ ಸಹವಾಸ ತಪ್ಪುವ ಸಾಧ್ಯತೆ ಇಲ್ಲ. ಇದರಿಂದ ನಿಮಗೆ ಖರ್ಚು ಹೆಚ್ಚಾಗುತ್ತದೆ. ಹಾಗಾಗಿ ಸ್ವಲ್ಪ ಹಣದ ಬಳಕೆಯ ಬಗ್ಗೆ ಗಮನ ಇರಲಿ.
ಈ ಯುಗಾದಿ ನಂತರ ಮಾನಸಿಕವಾಗಿ ನಿಮಗೆ ಸಮಾಧಾನ ಇರುವುದಿಲ್ಲ. ವರ್ಷದ ಅರ್ಧದ ನಂತರ ಇಷ್ಟದವರಿಂದಲೇ ನಿಮಗೆ ವಂಚನ ಭೀತಿ ಇರುತ್ತದೆ. ಹಾಗಾಗಿ ಯಾರನ್ನೂ ನಂಬಬೇಡಿ. ರಾಜ ಸನ್ಮಾನ ಯೋಗವಿರುತ್ತದೆ