ರಾತ್ರಿ ಮಲಗುವಾಗ ಕನಸುಗಳು ಬರುವುದು ಸಹಜ. ಕೆಲವು ಕನಸುಗಳು ತೊಂದರೆ ಕೊಡುತ್ತವೆ. ಕೆಲವು ಕನಸುಗಳು ಭಯ ಹುಟ್ಟಿಸುತ್ತವೆ. ಮತ್ತೆ, ಕೆಲವು ಕನಸುಗಳು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಯಾರೋ ಕನಸಿನಲ್ಲಿ ಸತ್ತರೆ ನಾವು ಹೆಚ್ಚು ತಲೆಕೆಡಿಸಿಕೊಳ್ಳದೇ ಇರಬಹುದು. ಆದರೆ ನಾವು ಕನಸಿನಲ್ಲಿ ಸತ್ತಾಗ?
ಇದು ಒಳ್ಳೆಯ ಸಂಕೇತವಾಗಿದೆ: ನಿಮ್ಮ ಕನಸಿನಲ್ಲಿ ನೀವು ಸತ್ತರೆ, ಭಯಪಡುವ ಅಗತ್ಯವಿಲ್ಲ. ಇದು ಒಳ್ಳೆಯ ಸಂಕೇತ. ನೀವು ಸತ್ತಂತೆ ಕಂಡರೆ, ಅದು ಮಂಗಳಕರ ಹಾಗೂ ಉತ್ತಮ ಆರೋಗ್ಯವನ್ನು ಸೂಚಿಸುತ್ತದೆ.
ಹೊಸ ಆರಂಭ: ನೀವು ಕನಸಿನಲ್ಲಿ ಸತ್ತರೆ, ದೀರ್ಘಾವಧಿಯ ಸಮಸ್ಯೆ ಪರಿಹಾರವಾಗುತ್ತದೆ ಎಂದರ್ಥ. ನೀವು ಹೊಸ ಆರಂಭವನ್ನು ಮಾಡುವುದರ ಸಂಕೇತವಾಗಿದ್ದು, ಹೊಸ ಜೀವನವನ್ನು ಪ್ರಾರಂಭಿಸಲಿದ್ದೀರಿ ಎಂದು ಇದು ಸೂಚಿಸುತ್ತದೆಯಂತೆ.
ದೀರ್ಘಾಯುಷ್ಯದ ಸೂಚನೆ: ನಿಮ್ಮ ಮೃತ ದೇಹವನ್ನು ಕನಸಿನಲ್ಲಿ ಕಂಡರೆ ಅದು ಸಹ ಒಳ್ಳೆಯದು. ನೀವು ಇನ್ನೂ ಎಷ್ಟು ವರ್ಷ ಬದುಕುತ್ತೀರಿ ಎಂಬುದನ್ನು ಇದು ಸೂಚಿಸುತ್ತದೆ. ಹಾಗಾಗಿ ಈ ಕನಸಿಗೆ ಹೆದರುವ ಅವಶ್ಯಕತೆ ಇಲ್ಲ.
ದುಃಖ ಮುಗಿಯುವ ಸೂಚನೆ: ಇದನ್ನು ವಿಜ್ಞಾನದಲ್ಲಿಯೂ ಉಲ್ಲೇಖಿಸಲಾಗಿದೆ. ತಜ್ಞರ ಪ್ರಕಾರ, ನಿಮ್ಮ ಕನಸಿನಲ್ಲಿ ನಿಮ್ಮ ಸಾವು ನೋಡಿದರೆ, ಜೀವನದ ಅನೇಕ ಸಮಸ್ಯೆ ಕೊನೆಗೊಳ್ಳುತ್ತದೆ ಎಂಬುದರ ಸಂಕೇತವಾಗಿದೆ.
ಚಿಂತೆ ದೂರವಾಗುತ್ತದೆ: ಕನಸಿನಲ್ಲಿ ಹಾರುತ್ತಿರುವಾಗ ನೀವು ಸತ್ತ ರೀತಿ ಕಂಡರೆ, ನಿಮ್ಮನ್ನು ಕಾಡುತ್ತಿರುವ ಚಿಂತೆಗಳೆಲ್ಲವೂ ದೂರವಾಗುತ್ತವೆ ಎಂದರ್ಥ. ಹಾಗೆಯೇ, ಮುಂದೆ ಯಾವುದೇ ಕಾರಣಕ್ಕೂ ಚಿಂತೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.
ಅದೃಷ್ಟ ಬದಲಾವಣೆ: ನೀವು ಸಾವಿನ ಕನಸು ಕಂಡಾಗ ಭಯಪಡುವ ಅಗತ್ಯವಿಲ್ಲ. ನಂತರ ಕೆಟ್ಟ ಘಟನೆಗಳು ಸಹ ಆಗುವುದಿಲ್ಲ. ಬದಲಾಗಿ ಸಾವಿನ ಕನಸು ಮಂಗಳ ಗ್ರಹವನ್ನು ಪ್ರತಿನಿಧಿಸುತ್ತದೆ. ಇದು ನಿಮ್ಮ ಅದೃಷ್ಟ ಬದಲಾಗುತ್ತದೆ ಮತ್ತು ಕಷ್ಟಗಳು ಮಾಯವಾಗುತ್ತವೆ ಎಂದರ್ಥ.
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)