ಈ ತಿಂಗಳ ಕೊನೆಯಲ್ಲಿ ಅಂದರೆ ಮಾರ್ಚ್ 30ರಂದು ರಾಮನವಮಿ ಹಬ್ಬ ಇದೆ. ಈ ದಿನ ಶ್ರೀರಾಮ ಜನ್ಮದಿನ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಆ ದಿನ ಗ್ರಹಗಳ ಕಾರಣದಿಂದ ಬಹಳ ವಿಶೇಷ. ಈ ದಿನದಂದು 4 ಯೋಗಗಳು ರೂಪುಗೊಳ್ಳಲಿದ್ದು, ಅದರಿಂದ ಕೆಲ ರಾಶಿಗೆ ಲಾಭವಾಗಲಿದೆ. ಯಾವ ರಾಶಿಗೆ ಇದರಿಂದ ಲಾಭ ಎಂಬುದು ಇಲ್ಲಿದೆ.
ಚೈತ್ರ ನವರಾತ್ರಿಯ ಕೊನೆಯ ದಿನ ಅಂದರೆ ಶುಕ್ಲ ಪಕ್ಷ ನವಮಿಯನ್ನು ಭಗವಾನ್ ಶ್ರೀರಾಮನ ಜನ್ಮದಿನವೆಂದು ಆಚರಿಸಲಾಗುತ್ತದೆ. ಈ ದಿನ ಭಕ್ತರು ವಿವಿಧ ರೀತಿಯಲ್ಲಿ ಶ್ರೀರಾಮನ ಪೂಜೆ ಮಾಡುತ್ತಾರೆ. ಆದರೆ ಈ ಬಾರಿ ಈ ದಿನ ಬಹಳ ವಿಶೇಷ ಎಂದು ಹೇಳಲಾಗುತ್ತಿದೆ.
ಅದಕ್ಕೆ ಕಾರಣ ಈ ದಿನ 4 ಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿರುವುದು. ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ, ಗುರು, ಪುಷ್ಯ ಯೋಗ ರೂಪುಗೊಳ್ಳುತ್ತಿದ್ದು, ಇದರಿಂದ 3 ರಾಶಿಗೆ ಬಹಳ ಲಾಭವಾಗಲಿದೆ. ಅಲ್ಲದೇ ಈ ಬಾರಿ ವಿಷ್ಣುವಿನ ವಾರವಾದ ಗುರುವಾರದಂತೆ ರಾಮ ನವಮಿ ಬಂದಿದ್ದು, ಬಹಳ ಶ್ರೇಷ್ಠವಂತೆ.
ಮೇಷ ರಾಶಿ: ರಾಮ ನವಮಿಯ ನಂತರ ಈ ರಾಶಿಯವರ ಬದುಕಿನಲ್ಲಿ ಬರೀ ಸಂತೋಷ ಮಾತ್ರ ಇರುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ನಿಮ್ಮನ್ನ ಹುಡುಕಿ ಬರುತ್ತದೆ. ಸಾಲದಿಂದ ಸಹ ನಿಮಗೇ ಮುಕ್ತಿ ಸಿಗುತ್ತದೆ. ಆರ್ಥಿಕವಾಗಿ ಲಾಭ ಸಿಗುತ್ತದೆ.
ವೃಷಭ ರಾಶಿ: ಈ ಹಬ್ಬದ ನಂತರ ವೃಷಭ ರಾಶಿಯವರ ಬದುಕು ಬದಲಾಗಲಿದೆ. ಪ್ರತಿ ಕೆಲಸದಲ್ಲಿಯೂ ನಿಮಗೆ ಲಾಭ ಸಿಗಲಿದೆ. ಹೂಡಿಕೆಗಳನ್ನು ಮಾಡಲು ಇದು ಸರಿಯಾದ ಸಮಯ ಎನ್ನಬಹುದು. ಹೊಸ ಯೋಜನೆ ಆರಂಭಿಸಲು ನಿರ್ಧಾರ ಮಾಡಿದ್ದರೆ ನಿಮಗೆ ಪ್ರಯೋಜನ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸಹ ಸುಧಾರಿಸುತ್ತದೆ.
ತುಲಾ ರಾಶಿ: ರಾಮ ನವಮಿ ಹಬ್ಬದ ನಂತರ ಈ ರಾಶಿಯವರಿಗೆ ಬಹಳ ಒಳ್ಳೆಯದಾಗಲಿದೆ. ನಿಮ್ಮ ಕೆಲಸದಲ್ಲಿ ಬೆಳವಣಿಗೆ ಆಗಲಿದೆ. ಜೀವನದಲ್ಲಿ ಸಂತೋಷ ಸಿಗಲಿದೆ. ಕುಟುಂಬದ ಬೆಂಬಲದಿಂದ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ
ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)