Yadgiri: ಮೌನೇಶ್ವರ ಜಾತ್ರೆಯಲ್ಲಿ ಗಾಂಜಾ ನಶೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸ್ವತಃ ಪರಶಿವನೇ ಸಾಧುಗಳಿಗೆ ನೀವು ನನ್ನ ಕಾಣೋಕೆ ಕಾಶಿಗೆ ಹೋಗ್ಬೇಕಂತಿಲ್ಲ, ಇಲ್ಲೇ ನಿಮಗೆ ನಾನು ದರ್ಶನ ಕೊಡ್ತೇನೆ ಅಂದ್ನಂತೆ. ಆವಾಗಿಂದ ಮೌನೇಶ್ವರನ ಕೈಲಾಸ ಕಟ್ಟೆ ಅನ್ನೋ ಹೆಸರು ಈ ಸ್ಥಳಕ್ಕೆ ಬಂದಿದೆ ಅನ್ನುತ್ತೆ ಐತಿಹ್ಯ.

  • Share this:

    ಯಾದಗಿರಿ: ಗಾಂಜಾ ನಶೆಯಲ್ಲಿ ತೇಲಾಡ್ತಿರೋ ನೂರಾರು ಸಾಧುಗಳು, ಸಂತರಿಗೆ ಗಾಂಜಾ ತಂದಕೊಡ್ತಾ ಸೇವೆ ಮಾಡ್ತಿರೋ ಭಕ್ತರು! ಅರೇ! ಇದ್ಯಾವ ಲೋಕ ಅಂದ್ಕೊಂಡ್ರಾ? ಯಾದಗಿರಿ ಜಿಲ್ಲೆಯ (Yadgiri News) ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಸುಪ್ರಸಿದ್ಧ ಮೌನೇಶ್ವರ ಜಾತ್ರೆಯ (Mouneshwar Jatra) ವಿಶೇಷವೇ ಇದು!


    ಕರ್ನಾಟಕ ಒಂದೇ ಅಲ್ದೇ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ನಾನಾ ಕಡೆಯಿಂದ ದಶಕಗಳಿಂದ ನಡೆಯುತ್ತಿರೋ ಈ ಜಾತ್ರೆಗೆ ಸಾಧುಗಳು ಆಗಮಿಸಿದ್ರು.


    ಐದು ದಿನಗಳ ಜಾತ್ರೆ
    ಗಾಂಜಾ ಗಮ್ಮತ್ತಿನ ಮೌನೇಶ್ವರ ಜಾತ್ರೆಯು ಯಾದಗಿರಿಯಲ್ಲಿ ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತೆ. ಮೌನೇಶ್ವರ ದೇವಸ್ಥಾನದ ಬಳಿ ಕುಳಿತು ಸಾಧುಗಳು ಗಾಂಜಾ ಸೇವನೆ ಮಾಡ್ತಾರೆ.


    ಇದನ್ನೂ ಓದಿ: Karwar: ಮೊಟ್ಟೆ ಇಡುವ ಸಮಯ ಬದಲಾಯಿಸಿದ ಕಡಲಾಮೆ!




    ಪರಶಿವನೇ ಹೀಗಂದಿದ್ದ!
    ಸ್ವತಃ ಪರಶಿವನೇ ಸಾಧುಗಳಿಗೆ ನೀವು ನನ್ನ ಕಾಣೋಕೆ ಕಾಶಿಗೆ ಹೋಗ್ಬೇಕಂತಿಲ್ಲ, ಇಲ್ಲೇ ನಿಮಗೆ ನಾನು ದರ್ಶನ ಕೊಡ್ತೇನೆ ಅಂದ್ನಂತೆ. ಆವಾಗಿಂದ ಮೌನೇಶ್ವರನ ಕೈಲಾಸ ಕಟ್ಟೆ ಅನ್ನೋ ಹೆಸರು ಈ ಸ್ಥಳಕ್ಕೆ ಬಂದಿದೆ ಅನ್ನುತ್ತೆ ಐತಿಹ್ಯ.


    ಇದನ್ನೂ ಓದಿ: Puttur: ಕಾರ್ ಬಂಪರ್​ನಲ್ಲಿ 70 ಕಿಲೋ ಮೀಟರ್ ಸಂಚರಿಸಿದ ನಾಯಿಯ ಮಡಿಲು ಸೇರಿದ ಮರಿಗಳು!


    ಒಟ್ಟಾರೆ ಯಾದಗಿರಿಯ ಈ ಮೌನೇಶ್ವರ ದೇವರ ಜಾತ್ರೆಯಲ್ಲಿ ಸಾಧುಗಳು ಗಾಂಜಾ ನಶೆಯಲ್ಲಿ ತೇಲಾಡಿದ್ದು ಭಾರೀ ವೈರಲ್ ಆಗ್ತಿದೆ.

    Published by:ಗುರುಗಣೇಶ ಡಬ್ಗುಳಿ
    First published: