Yadgiri: ಅಬ್ಬೆತುಮಕೂರಿನ ವಿಶ್ವಾರಾಧ್ಯರ ಜಾತ್ರೆಯಲ್ಲಿ ರಾರಾಜಿಸಿದ ಅಪ್ಪು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಲಕ್ಷಾಂತರ ಭಕ್ತರ ಜಯಘೋಷ ನಡುವೆ ಸಂಭ್ರಮದಿಂದ ರಥೋತ್ಸವ ನಡೆಯಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ಕೃತಾರ್ಥರಾದರು. ವಿವಿಧ ಕಲಾತಂಡಗಳ ಕಲಾ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

 • Share this:

  ಯಾದಗಿರಿ: ಕಲ್ಯಾಣ ಕರ್ನಾಟಕದ (Kalyana Karnataka) ಸುಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಜಾತ್ರೆಯು ವೈಭವದಿಂದ ಜರುಗಿತು.ಯಾದಗಿರಿ ತಾಲೂಕಿನ (Yadgiri News) ಅಬ್ಬೆತುಮಕೂರನ ಸಿದ್ದಿ ಪುರುಷ ಶ್ರೀ ವಿಶ್ವಾರಾಧ್ಯರ ಜಾತ್ರೆ ಅಂಗವಾಗಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.


  ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಜಾತ್ರೆಯಲ್ಲಿ ನಟ ಪುನೀತ್ ರಾಜಕುಮಾರ ಅವರ ಭಾವಚಿತ್ರ ರಾರಾಜಿಸಿತ್ತು. ಅಭಿಮಾನಿಗಳು ನೆಚ್ಚಿನ‌ ನಟ ಪುನೀತ್ ರಾಜಕುಮಾರ ಭಾವಚಿತ್ರ ಹಿಡಿದು ಅಭಿಮಾನ ಮೆರೆದರು. ಇದೇ ಸಂದರ್ಭದಲ್ಲಿ ಡಾ.ಗಂಗಾಧರ ಸ್ವಾಮಿಗಳು ರಥಕ್ಕೆ ಪೂಜೆ ಸಲ್ಲಿಸಿದರು.


  ಇದನ್ನೂ ಓದಿ: Kalyana Karnataka: ಆರ್ಡಿನರಿ ಬಸ್​ಗೆ ಎಕ್ಸ್​ಪ್ರೆಸ್ ಟಿಕೆಟ್! ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣಿಕರು ಹೀಗಂತಾರೆ


  ನಂತರ ಲಕ್ಷಾಂತರ ಭಕ್ತರ ಜಯಘೋಷ ನಡುವೆ ಸಂಭ್ರಮದಿಂದ ರಥೋತ್ಸವ ನಡೆಯಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ಕೃತಾರ್ಥರಾದರು. ವಿವಿಧ ಕಲಾತಂಡಗಳ ಕಲಾ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
  ಇದನ್ನೂ ಓದಿ: Yadgiri: ಮೌನೇಶ್ವರ ಜಾತ್ರೆಯಲ್ಲಿ ಗಾಂಜಾ ನಶೆ!


  ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ವಿಶ್ವಾರಾಧ್ಯರ ಕೃಪೆಗೆ ಪಾತ್ರರಾದರು.

  Published by:ಗುರುಗಣೇಶ ಡಬ್ಗುಳಿ
  First published: