ಯಾದಗಿರಿ: ಎಲ್ಲಿ ನೋಡಿದ್ರಲ್ಲೀ ಜನವೋ ಜನ, ಸಕಲ ಅಲಂಕೃತಗೊಂಡ ಎತ್ತರದ ತೇರು. ಬಣ್ಣ ಬಣ್ಣದಲ್ಲಿ ಕಂಗೊಳಿಸುತ್ತಿದೆ ಇಡೀ ಊರು! ಕರಿಬಸವೇಶ್ವರ ಜಾತ್ರೆಯ (Yadagiri Karibasaveshwar Jatra) ಝಲಕ್!
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮ ಅದ್ದೂರಿ ಕರಿಬಸವೇಶ್ವರ ರಥೋತ್ಸವಕ್ಕೆ ಸಾಕ್ಷಿಯಾಯಿತು. ಜಾತ್ರೆಯ ಹಿನ್ನೆಲೆಯಲ್ಲಿ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ವೈಭವೋಪೇತವಾಗಿ ನಡೆದ ಪುರವಂತರ ಸೇವೆ
ಜೊತೆಗೆ ಪುರವಂತರ ಸೇವೆಯೂ ವೈಭವೋಪೇತವಾಗಿ ನಡೆಯಿತು. ನಂತರ ಭವ್ಯ ರಥೋತ್ಸವ ನಡೆಯಿತು.
ಇದನ್ನೂ ಓದಿ: Kalyana Karnataka: ಆರ್ಡಿನರಿ ಬಸ್ಗೆ ಎಕ್ಸ್ಪ್ರೆಸ್ ಟಿಕೆಟ್! ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣಿಕರು ಹೀಗಂತಾರೆ
ಕೈ ಕುಸ್ತಿ ಹಾಗೂ ಚೀಲ ಎತ್ತುವ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು
ಯಾದಗಿರಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿ ದೇವರ ದರ್ಶನ ಭಾಗ್ಯ ಪಡೆದರು. ನಂತರ ಕೈ ಕುಸ್ತಿ ಹಾಗೂ ಚೀಲ ಎತ್ತುವ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ನಡೆದವು.
ಇದನ್ನೂ ಓದಿ: Yadgiri: ಮೌನೇಶ್ವರ ಜಾತ್ರೆಯಲ್ಲಿ ಗಾಂಜಾ ನಶೆ!
ಒಟ್ಟಾರೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮ ಅದ್ದೂರಿ ಕರಿಬಸವೇಶ್ವರ ರಥೋತ್ಸವದ ಸಂಭ್ರಮದಲ್ಲಿ ಮಿಂದು ಮುಳುಗೆದ್ದಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ