ಯಾದಗಿರಿ: ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಸಾರಿಗೆ ಸಂಸ್ಥೆಗಳಿಗೆ ಬೇಡಿಕೆ ತಕ್ಕಂತೆ ಹೆಚ್ಚಿನ ನೂತನ ಬಸ್ಗಳನ್ನ ಪೂರೈಕೆ ಮಾಡಬೇಕು. ಆದರೆ, ಸರ್ಕಾರ ಹೆಚ್ಚಿನ ಬಸ್ಗಳನ್ನ ನೀಡಿಲ್ಲ. ಬಸ್ಗಳ ಕೊರತೆ ನೆಪವೊಡ್ಡಿ ಸಾರಿಗೆ ಸಂಸ್ಥೆ ಆರ್ಡಿನರ್ ಬಸ್ಗಳನ್ನು ಓಡಿಸುವ ಕೆಲಸ ಮಾಡುತ್ತಿದೆ. ಕಲ್ಯಾಣ ಕರ್ನಾಟಕ (Kalyana Karnataka) ಸಾರಿಗೆ ನಿಗಮವು ಪ್ರಯಾಣಿಕರನ್ನ ಏಮಾರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಯಾಣಿಕರು ಆರ್ಡಿನರಿ ಬಸ್ನಲ್ಲಿ (Ordinary Bus Ticket Charge) ಪ್ರಯಾಣಿಸುತ್ತಿದರೂ, ಸಾರಿಗೆ ನಿಗಮವು ಎಕ್ಸ್ಪ್ರೆಸ್ ಟಿಕೆಟ್ ಚಾರ್ಜ್ ಮಾಡುತ್ತಿದೆ. ಇದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಯಾದಗಿರಿಯಿಂದ ಕಲಬುರಗಿಗೆ 90 ಕಿ.ಮೀ ಅಂತರವಿದೆ. ರಾಜಹಂಸ ಡಿಲೆಕ್ಸ್ ಬಸ್ ದರ 101 ರೂಪಾಯಿ ನಿಗದಿ ಮಾಡಲಾಗಿದೆ. ಆರ್ಡಿನರಿ ಬಸ್ಗಳಿಗೆ ಸಾರಿಗೆ ಸಂಸ್ಥೆಯು ನಿಯಮದ ಪ್ರಕಾರ 80 ರೂಪಾಯಿ ಟಿಕೆಟ್ ನಿಗದಿ ಮಾಡಿ ಬಸ್ ಓಡಿಸಬೇಕು. ಆದರೆ ಆಗ್ತಿರೋದೇ ಬೇರೆ!
ವಿಧಿಸಲಾಗುತ್ತಿರೋ ಟಿಕೆಟ್ ಚಾರ್ಜ್ ಎಷ್ಟು?
ಯಾದಗಿರಿಯಿಂದ ಕಲಬುರಗಿಗೆ ತೆರಳುವ ಆರ್ಡಿನರಿ ಬಸ್ಗಳಿಗೂ ಎಕ್ಸ್ಪ್ರೆಸ್ ಬಸ್ಗಳಂತೆ 101 ರೂಪಾಯಿ ಟಿಕೆಟ್ ಚಾರ್ಜ್ ನಿಗದಿ ಮಾಡಲಾಗಿದೆ. ತಡೆರಹಿತ ಬಸ್ಗಳೆಂದು ಹೇಳಿ ಎಲ್ಲಾ ಕಡೆ ಬಸ್ಗಳು ನಿಲುಗಡೆಯಾಗುತ್ತವೆ. ಆರ್ಡಿನರಿ ಬಸ್ ನಾವು ಓಡಿಸುತ್ತಿಲ್ಲ ಎಲ್ಲವೂ ತಡೆರಹಿತ ಬಸ್ ಗಳೆಂದು ಸಾರಿಗೆ ಸಂಸ್ಥೆಯು ಎಕ್ಸ್ಪ್ರೆಸ್ ಟಿಕೆಟ್ ನೀಡುತ್ತಿದೆ" ಅಂತಾರೆ ಸಿದ್ದು ಪ್ರಕಾಶರೆಡ್ಡಿ ಎಂಬ ಪ್ರಯಾಣಿಕರು.
ಇದನ್ನೂ ಓದಿ: Kalaburagi: ಬೆಳೆ ರಕ್ಷಣೆಗೆ ಕಲಬುರಗಿ ರೈತರ ಹೊಸ ಉಪಾಯ!
ಪ್ರತಿದಿನ 1.40 ಲಕ್ಷ ಆದಾಯ
ಯಾದಗಿರಿಯಿಂದ ಕಲಬುರಗಿಗೆ ಎಕ್ಸ್ಪ್ರೆಸ್ ಬಸ್ ಟಿಕೆಟ್ ಪಡೆದು ಆರ್ಡಿನರಿ ಬಸ್ಗಳಲ್ಲಿ ಪ್ರಯಾಣಿಸುವಂತಾಗಿದೆ ಎಂಬುದು ಇನ್ನೋರ್ವ ಪ್ರಯಾಣಿಕ ಸಿದ್ದಾರೂಢ ಅವರ ಅಳಲು. 2020 ಫೆಬ್ರವರಿ ತಿಂಗಳಲ್ಲಿ 101 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ನಿತ್ಯವೂ ಯಾದಗಿರಿಯಿಂದ ಕಲಬುರಗಿಗೆ 82 ಟ್ರಿಪ್ ಬಸ್ ಸಂಚಾರ ಮಾಡುತ್ತವೆ. ಪ್ರತಿದಿನ 1.40 ಲಕ್ಷ ಆದಾಯ ಸಾರಿಗೆ ಸಂಸ್ಥೆಗೆ ಬರುತ್ತಿದೆ.
ಯಾದಗಿರಿ ಜಿಲ್ಲೆಗೆ ನೂತನ 40 ಬಸ್ಗಳ ಬೇಡಿಕೆ ಇದೆ.ಸಾಮಾನ್ಯ ಬಸ್ನಲ್ಲೂ ಎಕ್ಸ್ಪ್ರೆಸ್ ಟಿಕೆಟ್ ಚಾರ್ಜ್ ಮಾಡಲಾಗುತ್ತಿದೆ. ಪ್ರಯಾಣಿಕರಿಂದ ಹಣ ಕೊಳ್ಳೆ ಹೊಡೆಯುವ ಕೆಲಸ ಸಾರಿಗೆ ಸಂಸ್ಥೆಯು ಮಾಡುತ್ತಿದೆಯಾ ಎಂಬ ಅನುಮಾನ ಪ್ರಯಾಣಿಕರಲ್ಲಿ ಮೂಡಿದೆ.
ವರದಿ: ನಾಗಪ್ಪ ಮಾಲಿಪಾಟೀಲ, ನ್ಯೂಸ್ 18 ಯಾದಗಿರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ