• Home
  • »
  • News
  • »
  • vijayapura
  • »
  • Youth Festival: ಮೈಸೂರು ದಸರಾ ನೆನಪಿಸಿದ ಯುವಜನೋತ್ಸವ!

Youth Festival: ಮೈಸೂರು ದಸರಾ ನೆನಪಿಸಿದ ಯುವಜನೋತ್ಸವ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ರಾಜ್ಯಾದ್ಯಂತ ಒಟ್ಟು 9 ತೋಟಗಾರಿಕೆ ವಿದ್ಯಾಲಯಗಳ ಎಲ್ಲಾ ಕಾಲೇಜ್​ನ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗಿಯಾಗಿದ್ದಾರೆ.

  • Share this:

    ರಾಜ್ಯದ ಏಕೈಕ ತೋಟಗಾರಿಕೆ ವಿಶ್ವವಿದ್ಯಾಲಯ ಕಲಾ ತಂಡಗಳ ಮೆರವಣಿಗೆ ಮೂಲಕ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಬಾಗಲಕೋಟೆ ನಗರಾದ್ಯಂತ (Bagalakote News) ಮೆರವಣಿಗೆ ಮೂಲಕ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು. ಮೈಚಳಿ ಬಿಟ್ಟು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದ ಯುವಕ-ಯುವತಿಯರು ಸಂಭ್ರಮಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನದಲ್ಲಿ ಯುವಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಯಲ್ಲಿ (University Of Horticultural Sciences, Bagalkot)  ರಾಜ್ಯಾದ್ಯಂತ ಒಟ್ಟು 9 ತೋಟಗಾರಿಕೆ ವಿದ್ಯಾಲಯಗಳ ಎಲ್ಲಾ ಕಾಲೇಜ್​ನ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗಿಯಾಗಿದ್ದಾರೆ.


    ಈ ಬಾರಿಯ ಯುವಜನೋತ್ಸವದಲ್ಲಿ ವಿಭಿನ್ನ ಕಾರ್ಯಕ್ರಮದ ಮೂಲಕ ನಮ್ಮ ನೆಲದ ಸಂಸ್ಕೃತಿ ಮತ್ತು ಪಾರಂಪರಿಕ ಕಲೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಲಾಗಿತ್ತು.


    ಭವ್ಯ ಮೆರವಣಿಗೆಯ ಸಂಭ್ರಮ
    ನಗರದ ಕಾಳಿದಾಸ ವೃತ್ತದಿಂದ ವಿದ್ಯಾಗಿರಿಯ ನೇತಾಜಿ ಹಾಸ್ಟೆಲ್​ವರೆಗೆ ನೂರಾರು ವಿದ್ಯಾರ್ಥಿಗಳು ಕಲಾ ಪ್ರದರ್ಶನ ನೀಡುತ್ತ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ಡೊಳ್ಳು ಕುಣಿತ, ನವಿಲು ಹೆಜ್ಜೆ, ಲಂಬಾಣಿ ವೇಷಭೂಷಣ, ಆದಿವಾಸಿಗಳ ವೇಷ, ಯಕ್ಷಗಾನದ ಕಲೆಯನ್ನು ಅನಾವರಣಗೊಳಿಸಿದರು.


    ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು
    ಒಟ್ಟು ಮೂರು ದಿನಗಳ ಕಾಲ ಯುವಜನೋತ್ಸವ ನಡೆಯಲಿದ್ದು, ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ಬಗೆಯ ಅಲಂಕಾರ ಮಾಡಲಾಗಿತ್ತು. ರಂಗೋಲಿ ಹಾಗೂ ಹೂವುಗಳ ಮೂಲಕ ಚಿತ್ರಗಳನ್ನು ಬಿಡಿಸಲಾಗಿತ್ತು. ಇದೇ ವೇಳೆ ಕಾಲೇಜು ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದಲ್ಲಿದ್ದರು.


    ಇದನ್ನೂ ಓದಿ:  Badami Travel Plan: ಬಾದಾಮಿಯಲ್ಲಿ ಇದನ್ನೆಲ್ಲ ಮಿಸ್ ಮಾಡ್ದೇ ನೋಡಿ


    ಇನ್ನು ಯುವತಿಯರಂತೂ ರಂಗು ರಂಗಿನ ಉಡುಪುಗಳನ್ನ ಧರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.
    ಜಾನಪದ ಸಂಗೀತ, ಸಮೂಹ ಗಾಯನ, ಭಾರತೀಯ ದೇಶಭಕ್ತಿ ಗೀತೆ, ಏಕಪಾತ್ರಾಭಿನಯ, ನಾಟಕ ಪ್ರದರ್ಶನ, ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ನೃತ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು ಉತ್ತಮ ಕಲಾ ಪ್ರದರ್ಶನ ನೀಡಿದ ವಿದ್ಯಾರ್ಥಿಗಳ ತಂಡಕ್ಕೆ ಬಹುಮಾನವನ್ನು ಸಹಾ ನೀಡಲಾಯಿತು.


    ಇದನ್ನೂ ಓದಿ: Real Singham: ಶಾಲಾ ಮಕ್ಕಳ ಪ್ರವಾಸದ ಬಸ್ ತಳ್ಳಿದ PSI, ಇವರೇ ನೋಡಿ ರಿಯಲ್ ಸಿಂಗಂ ಎಂದ ವಿದ್ಯಾರ್ಥಿಗಳು


    ಒಟ್ಟಿನಲ್ಲಿ ಬಾಗಲಕೋಟೆಯಲ್ಲಿ ನಡೆಯುತ್ತಿರುವ ಯುವಜನೋತ್ಸವ ವಿಭಿನ್ನ ಕಾರ್ಯಕ್ರಮದ ಮೂಲಕ ಜನರ ಗಮನಸೆಳೆಯುತ್ತಿದೆ. ನಾಡಿನ ಕಲೆ, ಸಂಸ್ಕೃತಿಯನ್ನ ಉಳಿಸಿ ಬೆಳೆಸುವುದರ ಜೊತೆಗೆ ಯುವಪೀಳಿಗೆ ಪರಿಚಯಿಸುವ ತೋಟಗಾರಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಈ ಕಾರ್ಯ ಶ್ಲಾಘನೀಯವಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: