ವಿಜಯಪುರ: ಇದೇನಿದು ಕೋಲಿನಲ್ಲಿ ಬಾವಲಿಯಂತೆ ನೇತಾಡ್ತಿರೋ ವಸ್ತು ಯಾವುದು ಅಂತಾ ನೋಡ್ತಿದ್ದೀರ? ಇದು ಯಾವುದೋ ಪ್ರಾಣಿನೋ, ಪಕ್ಷಿನೋ ಅಲ್ಲ. ಬದಲಿಗೆ ಪುಟ್ಟ ಪುಟ್ಟದಾದ ಜೇನುತುಪ್ಪದ (Honey) ಗೂಡುಗಳು. ಹೌದು, ಗುಮ್ಮಟ ನಗರಿಯ (Vijayapura News) ಯುವಕನೊಬ್ಬ ಇದನ್ನೇ ವ್ಯಾಪಾರವಾಗಿ ಮಾಡಿಕೊಂಡಿದ್ದಾರೆ. ಬರೇ ಪುಟ್ಟ ಪುಟ್ಟ ಜೇನುಗೂಡುಗಳಿಂದ (Money From Honey) ದಿನವೊಂದಕ್ಕೆ ಸಾವಿರಾರು ರೂಪಾಯಿ ಕಮಾಯಿ ಮಾಡ್ತಿದ್ದಾರೆ.
ಯೆಸ್, ಹೀಗೆ ಹೆದ್ದಾರಿಗಳಲ್ಲಿ ಜೇನು ತುಪ್ಪದ ಗೂಡುಗಳನ್ನ ಹಿಡಿದುಕೊಂಡು ಹೊರಟಿರುವ ಇವರು ವಿಜಯಪುರ ನಗರದ ಆನಂದ್ ಅಂತ. ಇವರು ನೈಸರ್ಗಿಕವಾಗಿ ಸಿಗುವ ಜೇನು ತುಪ್ಪವನ್ನ ತಂದು ಹೆದ್ದಾರಿ ಪಕ್ಕದಲ್ಲೇ ವ್ಯವಹಾರ ನಡೆಸುತ್ತಾರೆ. ಹೆದ್ದಾರಿ ಪಕ್ಕದಲ್ಲೇ ಮಾರ್ಕೆಟಿಂಗ್ ಮಾಡುವ ಇವರು ಒಂದು ಕೆಜಿ ತುಪ್ಪವನ್ನ ಒಂದು ಸಾವಿರ ರೂಪಾಯಿಗೆ ಮಾರಾಟ ಮಾಡ್ತಾರೆ.
ಕಡುಬಡವರಿಗೆ ಜೇನು ಉಚಿತ!
ಹೀಗೆ ಹೆದ್ದಾರಿಯಲ್ಲಿ ಹೋಗೋರು ಕೂಡಾ ಶುದ್ಧ ಜೇನುತುಪ್ಪ ಪಡೆದು ಮುಂದೆ ಸಾಗ್ತಾರೆ. ಇನ್ನೇನಾದ್ರೂ ಕಡು ಬಡರೋಗಿಗಳಿಗೆ ಜೇನು ಅಗತ್ಯವಿದ್ದರೆ ಉಚಿತವಾಗಿಯೂ ನೀಡುವ ಮೂಲಕ ಈ ಯುವಕ ಮಾನವೀಯತೆ ಮೆರೆಯುತ್ತಾರೆ.
ಇದನ್ನೂ ಓದಿ: Vijayapura: ವಿಜಯಪುರದಲ್ಲಿ ಇಸ್ರೇಲ್ ಮಾದರಿ ಕೃಷಿ! ಯಶಸ್ಸು ಕಂಡ ಐಟಿ ಉದ್ಯೋಗಿ
ತಿಂಗಳಿಗೆ ಲಕ್ಷಕ್ಕೂ ಹೆಚ್ಚು ಆದಾಯ!
ಹೂವಿನ ತೋಟದಲ್ಲಿ, ಹಳ್ಳಕೊಳ್ಳಗಳ ಸಮೀಪದಲ್ಲಿ ಈ ಚಿಟ್ಟ ಜೇನುಗಳು ಜನವರಿ ತಿಂಗಳಿಂದ ಮಾರ್ಚ್ ತಿಂಗಳವರೆಗೆ ಕಾಣಿಸಿಕೊಳ್ಳುತ್ತವೆ. ಅವುಗಳನ್ನ ಹುಡುಕಿಕೊಂಡು ಈ ಆನಂದ ತೆರಳುತ್ತಾರೆ. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಜೇನು ಹುಳುಗಳಿಗೆ ಹಾನಿಯಾಗದಂತೆ ಬಿಡಿಸಿ ತಂದು ರಸ್ತೆ ಪಕ್ಕದಲ್ಲಿ ಮಾರಾಟ ಮಾಡ್ತಾರೆ. ವರ್ಷದಲ್ಲಿ ಮೂರು ತಿಂಗಳು ಮಾತ್ರ ಈ ಕೆಲಸ ಮಾಡುವ ಆನಂದ್ ಬೇಡಿಕೆ ಇದ್ದರೆ ಮಾತ್ರ ಜೇನು ಸಂಗ್ರಹಿಸುತ್ತಾರೆ. ಹೀಗೆ ಜೇನು ಮಾರಾಟ ಮಾಡಿಯೇ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ಆದಾಯ ಗಳಿಸ್ತಾರೆ ಆನಂದ್!
ಇದನ್ನೂ ಓದಿ: Anubhava Mantapa: ಅನುಭವ ಮಂಟಪದ ಹೊಸ ನೋಟವನ್ನು ನೀವೂ ಅನುಭವಿಸಿ!
ಜೇನುತುಪ್ಪ ಗರ್ಭಿಣಿಯರು, ಬಾಣಂತಿಯರಿಗೆ, ಶಿಶುಗಳಿಗೆ, ಮತ್ತು ಹೃದಯ ಕಾಯಿಲೆ ಇರುವವರಿಗೆ ಬಹಳಷ್ಟು ಉಪಯುಕ್ತವಾಗಿದೆ. ಹೀಗಾಗಿ ಜನ ಕೂಡಾ ಶುದ್ಧ ತುಪ್ಪವನ್ನ ಅದೆಷ್ಟೇ ಹಣ ಕೊಟ್ಟಾದರೂ ಖರೀದಿಸ್ತಾರೆ. ಒಟ್ಟಾರೆ ಈ ಯುವಕನ ಜೇನುತುಪ್ಪದಿಂದಲೇ ತನ್ನ ಜೀವನ ಕಟ್ಟಿಕೊಂಡಿದ್ದಾರೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ