• Home
  • »
  • News
  • »
  • vijayapura
  • »
  • Good News: ಉದ್ಯೋಗ ಹುಡುಕುತ್ತಿದ್ದೀರಾ? ತಕ್ಷಣ ಹೀಗೆ ಮಾಡಲು ಕೌಶಲ್ಯಾಭಿವೃದ್ದಿ ಅಧಿಕಾರಗಳಿಂದ ಮನವಿ

Good News: ಉದ್ಯೋಗ ಹುಡುಕುತ್ತಿದ್ದೀರಾ? ತಕ್ಷಣ ಹೀಗೆ ಮಾಡಲು ಕೌಶಲ್ಯಾಭಿವೃದ್ದಿ ಅಧಿಕಾರಗಳಿಂದ ಮನವಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ವೆಬ್ ಪೋರ್ಟಲ್‍ನಲ್ಲಿ ರಾಜ್ಯ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯದ ಪ್ರತಿಷ್ಠಿತ ಕಂಪನಿಗಳು ಹೆಸರು ನೋಂದಣಿ ಮಾಡಿಕೊಂಡಿವೆ. ನೀವೂ ಈ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಪಡೆಯಬಹುದಾಗಿದೆ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ ಜಿಲ್ಲೆಯ (Vijayapura News) ನಿರುದ್ಯೋಗ ಯುವಕ-ಯುವತಿಯರು ಉದ್ಯೋಗದ ನೆರವಿಗಾಗಿ ಸ್ಕಿಲ್ ಕನೆಕ್ಟ್ ವೆಬ್ ಪೋರ್ಟಲ್‍ನಲ್ಲಿ (Skill Connect Web Portal)  ತಮ್ಮ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ನ್ಯೂಸ್ 18 ಕನ್ನಡ ಡಿಜಿಟಲ್ ಮೂಲಕ ಜಿಲ್ಲೆಯ ಯುವಕ , ಯುವತಿಯರಿಗೆ ಪ್ರಕಟನೆ ಮೂಲಕ ತಿಳಿಸಿದ್ದಾರೆ.  ಹೌದು, ಉದ್ಯಮಶೀಲತೆ ಮತ್ತು ಉದ್ಯೋಗದ (Job Search) ನೆರವಿಗಾಗಿ ಸ್ಕಿಲ್ ಕನೆಕ್ಟ್ ವೆಬ್ ಪೋರ್ಟಲ್ ಅನಾವರಣಗೊಳಿಸಿದ್ದು ಈ ವೆಬ್ ಪೋರ್ಟಲ್‍ನಲ್ಲಿ ರಾಜ್ಯ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯದ ಪ್ರತಿಷ್ಠಿತ ಕಂಪನಿಗಳು ಹೆಸರು ನೋಂದಣಿ ಮಾಡಿಕೊಂಡಿವೆ. ನೋಂದಣಿಯಾದ ಅಭ್ಯರ್ಥಿಗಳ ಬಯೋಡಾಟಾ ಮತ್ತು ಸ್ವ ವಿವರ ಹಾಗೂ ವಿದ್ಯಾರ್ಹತೆ, ಅನುಭವವನ್ನ ಪರಿಗಣಿಸಲಾಗುತ್ತದೆ.


    ಯಾರು ಹೆಸರು ನೋಂದಣಿ ಮಾಡಬಹುದು?
    ಪದವಿ, ಸ್ನಾತಕೋತ್ತರ, ಐಟಿಐ, ಡಿಪ್ಲೊಮಾ, ಬಿಇ ತೇರ್ಗಡೆಯಾದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಕೌಶಲ್ಯ ಹಾಗೂ ಅನುಭವ ಕುರಿತು ಪೋರ್ಟಲ್‍ನಲ್ಲಿ ಅರ್ಹ ಹುದ್ದೆಗೆ ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳಬಹುದಾಗಿದೆ.


    ನೀವೂ ಅರ್ಹ ಹುದ್ದೆಗಳನ್ನು ಪಡೆದುಕೊಳ್ಳಲು ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಬಹುದಾಗಿದೆ.


    ಇದನ್ನೂ ಓದಿ: ವಾಹನ ಕಳ್ಳತನವಾದರೆ ಹೆದರಬೇಡಿ, ಸುಲಭವಾಗಿ ಹೀಗೆ ಆನ್​ಲೈನ್​ನಲ್ಲೇ FIR ದಾಖಲಿಸಿ!


    ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳ ಕಚೇರಿ, ಮಹಾನಗರ ಪಾಲಿಕೆ ಎದುರು, ಬಾಗಲಕೋಟ ರಸ್ತೆ, ವಿಜಯಪುರದ‌ ಕಚೇರಿಗೆ ಖುದ್ದಾಗಿ ಬೇಟಿ ನೀಡಬಹುದು. ಕಚೇರಿ ಸಮಯ ಬೆಳಗ್ಗೆ ಹತ್ತು ಗಂಟೆಯಿಂದ‌ ಸಂಜೆ 5 ಗಂಟೆ ಒಳಗಾಗಿ ಅಭ್ಯರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆಯಬಹುದು.


    ಇದನ್ನೂ ಓದಿ: Positive Story: ಕೊಂಕಣಿ ಮಾತನಾಡುವ ಅಣಶಿ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕಿ; ಸೌಲಭ್ಯವೇ ಇರದೆಡೆ ಸಾಹಸ


    ಅಥವಾ 08352-297019 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: