• Home
  • »
  • News
  • »
  • vijayapura
  • »
  • Bengaluru To Vijayapura: ಬೆಂಗಳೂರಿನಿಂದ ವಿಜಯಪುರ ಇನ್ನಷ್ಟು ಹತ್ತಿರ!

Bengaluru To Vijayapura: ಬೆಂಗಳೂರಿನಿಂದ ವಿಜಯಪುರ ಇನ್ನಷ್ಟು ಹತ್ತಿರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru News: ವಿಜಯಪುರದ ಜನರು ಬೆಂಗಳೂರು ತಲುಪಲು ಈ ರೈಲು ಹೆಚ್ಚಿನ ಸಹಕಾರ ಒದಗಿಸಲಿದೆ. ಹಾಗಾದರೆ ಈ ರೈಲು ಸಂಚಾರದ ಎಲ್ಲ ಮಾಹಿತಿ ಇಲ್ಲಿದೆ ನೋಡಿ.

  • News18 Kannada
  • Last Updated :
  • Bangalore [Bangalore], India
  • Share this:

    ವಿಜಯಪುರ: ಯಶವಂತಪುರ- ವಿಜಯಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲು  (Yeshwantpur Vijayapura Trains) ಸೇವೆಯನ್ನು ವರ್ಷಾಂತ್ಯದವರೆಗೂ ವಿಸ್ತರಣೆ ಮಾಡಲಾಗಿದೆ. ರೈಲು ಪ್ರಯಾಣಿಕರ ಹಿತದೃಷ್ಟಿಯಿಂದ ಕೆಲ ತಿಂಗಳುಗಳ ಹಿಂದೆ ಆರಂಭಿಸಿದ್ದ ಯಶವಂತಪುರ - ವಿಜಯಪುರ -ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್‌ (Yeshwantpur Vijayapura Yeshwantpur Special Express) ರೈಲು ಸೇವೆಯನ್ನ ಈ ವರ್ಷದ ಡಿಸೆಂಬರ್ ಅಂತ್ಯದ ವರೆಗೆ ವಿಸ್ತರಿಸಲಾಗಿದೆ. ಈ (ರೈಲು ಸಂಖ್ಯೆ 06545/06546) ರೈಲಿನ ಸೇವೆ ಸೆಪ್ಟೆಂಬರ್ 30ಕ್ಕೆ ಕೊನೆಯಾಗಬೇಕಿತ್ತು. ಆದರೆ ಪ್ರಯಾಣಿಕರ ಬೇಡಿಕೆ ಆಧರಿಸಿ ಮುಂದಿನ ಮೂರು ತಿಂಗಳು ಹೆಚ್ಚುವರಿ ಓಡಾಟಕ್ಕೆ ನಿರ್ಧರಿಸಲಾಗಿದೆ.


    ಈ ರೈಲು ಸದ್ಯ ಬೆಂಗಳೂರಿನ ಯಶವಂತಪುರದಿಂದ ಪ್ರತಿ ದಿನ ರಾತ್ರಿ 11.45ಕ್ಕೆ ಹೊರಟು ಮರುದಿನ ಮಧ್ಯಾಹ್ನ 1.55ಕ್ಕೆ ವಿಜಯಪುರ ತಲುಪುತ್ತಿದೆ. ಆದರೆ ಅಕ್ಟೋಬರ್ 10ರಿಂದ ಹೊಸ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ರಾತ್ರಿ 9.30ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 11.40ಕ್ಕೆ ವಿಜಯಪುರ ತಲುಪಲಿದೆ.


    ಹೊಸ ವೇಳಾಪಟ್ಟಿ ಹೀಗಿದೆ ನೋಡಿ
    ಅದರಂತೆ ವಿಜಯಪುರದಿಂದ ಪ್ರತಿದಿನ ರಾತ್ರಿ 8ಕ್ಕೆ ಹೊರಡುತ್ತಿದ್ದ ರೈಲು ಹೊಸ ವೇಳಾಪಟ್ಟಿಯಂತೆ ರಾತ್ರಿ 7.45ಕ್ಕೆ ಹೊರಟು ಮರುದಿನ ಬೆಳಿಗ್ಗೆ 11.15ಕ್ಕೆ ಯಶವಂತಪುರ ತಲುಪಲಿದೆ.


    ಇದನ್ನೂ ಓದಿ: Tulja Bhavani Darshan: ತುಳಜಾ ಭವಾನಿಯೇ ಈ ಯಾತ್ರಿಗಳ ಜೊತೆ ನಡೆಯುತ್ತಿದ್ದಾಳೆ!


    ಈ ರೈಲುಗಳ ಓಡಾಟ ಅವಧಿ ಸಹ ವಿಸ್ತರಣೆ
    ಇವುಗಳ ಜತೆಗೆ ಹುಬ್ಬಳ್ಳಿ -ರಾಮೇಶ್ವರ-ಹುಬ್ಬಳ್ಳಿ ಎಕ್ಸ್‌ಪ್ರೆಸ್‌, ಶಿವಮೊಗ್ಗ -ಚೆನ್ನೈ ಎಕ್ಸ್‌ಪ್ರೆಸ್‌ ರೈಲುಗಳ ಓಡಾಟ ಅವಧಿ ಕೂಡ ಸೆಪ್ಟೆಂಬರ್ 30ಕ್ಕೆ ಅಂತ್ಯವಾಗುತ್ತಿದ್ದು, ಪ್ರಯಾಣಿಕರ ಉತ್ತಮ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಈ ಎರಡೂ ರೈಲುಗಳ ಸೇವೆಯನ್ನು ಡಿಸೆಂಬರ್‌ವರೆಗೂ ವಿಸ್ತರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


    ನವದೆಹಲಿಗೆ ಹಜರತ್ ನಿಜಾಮುದ್ದಿನ ಎಕ್ಸ್​ಪ್ರೆಸ್​ ರೈಲು
    ಕಳೆದ‌ ಮೂರು ದಿನಗಳಿಂದ‌ ಹೊಸ ರೈಲು ಹುಬ್ಬಳ್ಳಿಯಿಂದ ನವದೆಹಲಿಗೆ
    ಹಜರತ್ ನಿಜಾಮುದ್ದಿನ ಎಕ್ಸ್​ಪ್ರೆಸ್​ ರೈಲನ್ನ ಬಿಡಲಾಗಿದೆ. ಇದು ಗದಗ ಬಾಗಲಕೋಟೆ ವಿಜಯಪುರ ಮುಖಾಂತರವಾಗಿ ಈ ರೈಲು ಸಂಚರಿಸಲಿದೆ.


    ಇದನ್ನೂ ಓದಿ: Vijayapura: ಹುಲ್ಲುಲಗೋ..ಸಲಾಂಭ್ರಿಗೋ! ಉತ್ತರ ಕರ್ನಾಟಕದಲ್ಲಿ ಚರಗ ಹಬ್ಬದ ಸ್ಪೆಷಲ್ ಇದು


    ಬಾಗಲಕೋಟೆ ಮತ್ತು ವಿಜಯಪುರದಿಂದ ನೇರವಾಗಿ ದೆಹಲಿಗೆ ಯಾವುದೇ ರೈಲು ಸೇವೆ ಇದುವರೆಗೆ ಇರಲಿಲ್ಲ. ಇದರಿಂದಾಗಿ ಪ್ರಯಾಣಿಕರು ಸೋಲಾಪುರಕ್ಕೆ ಹೋಗಿ ಬೇರೆ ರೈಲು ಹಿಡಿದು ದೆಹಲಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಸದ್ಯ ಈ ರೈಲು ಆರಂಭವಾಗಿದ್ದು. ಈ ಎರಡು ಜಿಲೆಯ ಪ್ರಯಾಣಿಕರಿಗೆ ಅನುಕೂಲವಾಗಿದೆ.


    ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: