Yellamma Temple: ಬೇಡಿದ ವರ ನೀಡುವ ತಾಯಿ ಯಲ್ಲಮ್ಮ; ಎಲ್ಲಿದೆ ದೇವಸ್ಥಾನ?

ಈ ರೇಣುಕಾ ಯಲ್ಲಮ್ಮ ದೇವಿಯ ಪವಾಡಗಳು ನಿಜಕ್ಕೂ ಅಪಾರ ಎಂದು ಜನ ನಂಬಿದ್ದಾರೆ. ಬನ್ನಿ, ನೀವೂ ದೇವಿಯ ದರ್ಶನ ಪಡೆಯಿರಿ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ವಿಜಯಪುರ: ಹಸಿರು ಬಟ್ಟೆಯಲ್ಲಿ ತೆಂಗಿನಕಾಯಿ ಕಟ್ಟಿ ಹರಕೆ ಸಲ್ಲಿಸುತ್ತಿರುವ ಭಕ್ತರು. ಶಾಂತವಾಗಿ ಹರಿಯುತ್ತಿರುವ ಕೃಷ್ಣಾ ನದಿ. ನಂಬಿಕೆಯಿಂದ ದೇವಿಗೆ ಕೈ ಮುಗಿದು ಕಾಪಾಡು ತಾಯೇ ಅನ್ನುತ್ತಿರುವ ಮಹಿಳೆಯರು ಮಕ್ಕಳು. ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ಇರೋ ಈ ಪುಣ್ಯದ ದೇಗುಲ ಪ್ರಸಿದ್ಧ ಯಲ್ಲಮ್ಮ ದೇವಸ್ಥಾನ.  ಈ ಕ್ಷೇತ್ರಕ್ಕೆ (Yellamma Temple, Vijayapura) ನೂರಾರು ವರ್ಷದ ಇತಿಹಾಸವಿದೆ. ವಿಶೇಷ ಅಂದ್ರೆ ತಮ್ಮ ಇಷ್ಟಾರ್ಥಗಳ ಬೇಡಿಕೆ ಈಡೇರಿಕೆಗೆ ಇಲ್ಲಿಗೋ ಆಗಮಿಸೋ ಭಕ್ತರು ಹಸಿರು ಬಟ್ಟೆಯಲ್ಲಿ ತೆಂಗಿನಕಾಯಿ ಕಟ್ಟಿ ಹಾಕಿ ಬಳಿಕ ಪೂಜೆ ಸಲ್ಲಿಸುತ್ತಾರೆ. ಬೇಡಿಕೆ ಈಡೇರಿದಾಗ ಮತ್ತೆ ಕ್ಷೇತ್ರಕ್ಕೆ ಬಂದು ತೆಂಗಿನಕಾಯಿಯ ಕಟ್ಟನ್ನು ಬಿಚ್ಚಿ ತೆಂಗಿನಕಾಯಿಯನ್ನು ಕೃಷ್ಣಾ ನದಿಯಲ್ಲಿ (Krishna River) ತೇಲಿಬಿಡುತ್ತಾರೆ. ಹೀಗಾಗಿಯೇ ಈ ಕ್ಷೇತ್ರವನ್ನ ಬೇಡಿದ ವರ ನೀಡುವ ದೇವಸ್ಥಾನ ಎಂದೇ ಕರೆಯಲಾಗುತ್ತದೆ.

    ಪವಾಡದ ಯಲ್ಲಮ್ಮ
    ಈ ರೇಣುಕಾ ಯಲ್ಲಮ್ಮ ದೇವಿಯ ಪವಾಡಗಳು ನಿಜಕ್ಕೂ ಅಪಾರ ಎಂದು ಜನ ನಂಬಿದ್ದಾರೆ. ಹೀಗಾಗಿ ಈ ದೇಗುಲಕ್ಕೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಸೇರಿದಂತೆ ಎಲ್ಲಾ ಕಡೆಯಿಂದ ಸಹಸ್ರಾರು ಭಕ್ತರು ದರ್ಶನ ಪಡೆಯುತ್ತಾರೆ.

    ಈ ಸೇವೆಗಳಿಗೆ ಪ್ರಸಿದ್ಧಿ
    ಪ್ರತಿ ಅಮವಾಸ್ಯೆ, ಹುಣ್ಣಿಮೆ, ಮಂಗಳವಾರ, ಶುಕ್ರವಾರ ಸಹಸ್ರಾರು ಜನರು ಇಲ್ಲಿಗೆ ಆಗಮಿಸಿ ಈ ದೇವಿಯ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗುತ್ತಾರೆ. ವಿಶೇಷವಾಗಿ ದೇವಿಯ ವಾರದಂದು ಪೂಜೆ, ಹರಕೆ, ದೀಡ್ ನಮಸ್ಕಾರ, ತಪ್ಪಲು ಸೇವೆ, ಬೇವು ಇಳಿಸುವ ಸೇವೆಯೂ ಇಲ್ಲಿ ಜರುಗುತ್ತದೆ.

    ಇದನ್ನೂ ಓದಿ: Real Bahubali Vijayapura: ಈ ಬಾಲಕ ರಿಯಲ್ ಬಾಹುಬಲಿ! ತಾಕತ್ತಿಗೆ ಬೆಚ್ಚಿಬೀಳುವಿರಿ!

    ಬೂದಿಹಾಳ ಹುಟ್ಟಿದ್ದೇ ರೋಚಕ!
    ನೂರಾರು ವರ್ಷಗಳ ಹಿಂದೆ ಈ ಗ್ರಾಮವನ್ನ ಬೂದನಗುಡಿ ಎಂದು ಕರೆಯಲಾಗುತ್ತಿ ತ್ತು. ಆಂಧ್ರಪ್ರದೇಶದ ವ್ಯಕ್ತಿ ಯಲ್ಲನಗೌಡ ಎಂಬುವರು ಈ ಗ್ರಾಮಕ್ಕೆ ಬಂದು ನೆಲೆಸಿ ದೇವಿಯ ಭಕ್ತಿಭಾವದಲ್ಲಿಯೇ ಕಾಲ ಕಳೆಯುತ್ತಿದ್ದರು. ಈ ಭಕ್ತನ ಭಕ್ತಿಗೆ ಮೆಚ್ಚಿದ ರೇಣುಕಾ ಯಲ್ಲಮ್ಮ ತಾಯಿ ಇವರಿಗೆ ದರ್ಶನ ಭಾಗ್ಯವನ್ನ ನೀಡಿದ್ರಂತೆ. ಈ ದೇವಿಯ ಅಪಾರ ಮಹಿಮೆಯನ್ನ ಕಂಡ ಜನತೆ ಅಂದಿನಿಂದ ಈ ಗ್ರಾಮಕ್ಕೆ ಯಲ್ಲಮ್ಮನ ಬೂದಿಹಾಳ ಎನ್ನತೊಡಗಿದರು ಅನ್ನೋ ಇತಿಹಾಸವಿದೆ.

    Yellamana Budihala
    ಯಲ್ಲಮ್ಮನ ದೇಗುಲಕ್ಕೆ ಹಿಗೆ ಬನ್ನಿ ( ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    ಇದನ್ನೂ ಓದಿ: Helava Community: ನಿಮ್ಮ ಅಜ್ಜ, ಮುತ್ತಜ್ಜ ಅವರಜ್ಜನ ಕಥೇನೂ ಹೇಳ್ತಾರೆ ಈ ಹೆಳವರು! ಯಾರಿವರು?

    ಜೋಗತಿಯರ ನೃತ್ಯ
    ಈ ದೇವಸ್ಥಾನದಲ್ಲಿ ಜೋಗತಿಯರು ಯಲ್ಲಮ್ಮನ ಕೊಡಹೊತ್ತು ಯಲ್ಲಮ್ಮನ ಹಾಡು ಹಾಡುತ್ತ ನೃತ್ಯ ಮಾಡಿ ದೇವಿಯ ಪವಾಡವನ್ನ ಹಾಡಿ ಹೊಗಳುತ್ತಾರೆ. ಪ್ರತಿನಿತ್ಯ ಬೆಳಗಿನ ಜಾವ ದೇವಿಗೆ ವಿಶೇಷವಾಗಿ ಬಗೆಬಗೆಯ ಹೂವಿನ ಅಲಂಕಾರ, ಪೂಜೆಗಳು ನಡೆಯುತ್ತವೆ. ಮಧ್ಯಾಹ್ನ ಯಾವುದೇ ಪೂಜೆಗಳು ನಡೆಯುವುದಿಲ್ಲ. ಬದಲಿಗೆ ಮಂಗಳಾರತಿ ನಡೆಯುತ್ತದೆ. ಸಂಜೆ ವೇಳೆಗೆ ಮತ್ತೆ ಪೂಜೆ ನಡೆಯುತ್ತದೆ. ಒಟ್ಟಿನಲ್ಲಿ ಭಕ್ತರು ಯಲ್ಲಮ್ಮನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.
    Published by:ಗುರುಗಣೇಶ ಡಬ್ಗುಳಿ
    First published: