ವಿಜಯಪುರ: ಲಗುಬಗೆಯಲ್ಲಿ ಆಗಮಿಸ್ತಿರೋ ಭಕ್ತರು. ಹೊಸ ವರ್ಷದ ಮೊದಲ ದಿನದಂದೇ ದೇವರ ದರ್ಶನ ಮಾಡಿ ಕಣ್ತುಂಬಿಕೊಳ್ಳ ತವಕ. 2023ರ ಮೊದಲ ದಿನದಂದೇ ಏಳೂರು ಒಡೆಯ ಯಲಗೂರು ಆಂಜನೇಯನ (Lord Hanuman) ದರ್ಶನ ಭಾಗ್ಯ ಪಡೆದು ಸಾವಿರಾರು ಭಕ್ತರು ಪುನೀತರಾದರು. ವಿಜಯಪುರ ಜಿಲ್ಲೆಯ (Vijayapura News) ನಿಡಗುಂದಿ ತಾಲೂಕಿನ ಯಲಗೂರು ಗ್ರಾಮದ ಆರಾಧ್ಯ ದೈವ (Yalaguru Anjaneya Temple) ಆಂಜನೇಯ. ಬೆಳಗ್ಗೆ ಕೃಷ್ಣಾ ನದಿಯಿಂದ (Krishna River) ನೀರು ತಂದು ದೇವರ ಮೂರ್ತಿಗೆ ಜಲಾಭಿಷೇಕವನ್ನ ಮಾಡಲಾಯಿತು.
ನಾನಾ ಪುಷ್ಪ, ಬಿಲ್ವಪತ್ರೆ, ತುಳಸಿ ಸೇರಿದಂತೆ ಹೂ ಮಾಲೆಯನ್ನ ಅಲಂಕರಿಸಲಾಗಿತ್ತು. ಭಕ್ತಾದಿಗಳ ಸಮ್ಮುಖದಲ್ಲಿ ದೇವರ ಮೂರ್ತಿಗೆ ಅಭಿಷೇಕ, ಮಹಾಮಂಗಳಾರತಿ ಸೇರಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಪ್ರತಿದಿನ 3 ಬಾರಿ ಪೂಜೆ
ವಿಜಯಪುರದ ನಿಡಗುಂದಿ ತಾಲೂಕಿನ ಈ ಆಂಜನೇಯ ಸ್ವಾಮಿಗೆ ಏಳೂರು ಒಡೆಯನೆಂದೇ ಹೇಳಲಾಗುತ್ತೆ. ಇಲ್ಲಿ ಯಲಗೂರೇಶನಿಗೆ ಪ್ರತಿನಿತ್ಯ ಮೂರು ಬಾರಿ ವಿಶೇಷ ಪೂಜೆ ನಡೆಯುತ್ತೆ.
ಇದನ್ನೂ ಓದಿ: Special Bus: ಸವದತ್ತಿ ಯಲ್ಲಮ್ಮದೇವಿ, ಬಾದಾಮಿ ಬನಶಂಕರಿ ದೇವಿ ಜಾತ್ರೆಗೆ ವಿಶೇಷ ಬಸ್
ಆಂಜನೇಯನ ದರ್ಶನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ನಸುಕಿನಲ್ಲಿ ಕಾಕಡಾರತಿ, ನಂತರ ಕೃಷ್ಣಾ ನದಿ ನೀರಿನಿಂದ ಅಭಿಷೇಕ ಹಾಗೂ ಮಹಾಪೂಜೆ ಮತ್ತು ಸಂಜೆ ಧೂಪಾರತಿ ಜರುಗುತ್ತವೆ. ಸುಮಾರು 350 ವರ್ಷಗಳ ಇತಿಹಾಸವಿರೋ ಯಲಗೂರೇಶ ಭಕ್ತರ ಕಷ್ಟಗಳನ್ನ ಪರಿಹರಿಸುವ ಪವನ ಸುತ ಎಂದೇ ಫೇಮಸ್!
ಈ ಏಳು ಊರುಗಳಲ್ಲಿ ಮತ್ತೆಲ್ಲೂ ಹನುಮ ಮಂದಿರವಿಲ್ಲ!
ಈ ಭಾಗದ ಯಲಗೂರ, ಚಂದ್ರಗಿರಿ, ಅರಳಲದಿನ್ನಿ, ಕಾಶಿನಕುಂಟಿ, ಬೂದಿಹಾಳ, ನಾಗಸಂಪಿಗೆ, ಮಸೂತಿ ಹೀಗೆ ಏಳು ಗ್ರಾಮಗಳಿಗೆ ಯಲಗೂರಪ್ಪನೇ ಒಡೆಯನಾಗಿದ್ದಾನೆ. ಸಾಮಾನ್ಯವಾಗಿ ಊರಿಗೊಂದು ಆಂಜನೇಯನ ದೇವಾಲಯವಿರುತ್ತದೆ.
ಇದನ್ನೂ ಓದಿ: Banashankari Temple: ಇವ್ರೇ ನೋಡಿ ಸಾಲುಮಂಟಪದ ಅನ್ನಪೂರ್ಣೇಶ್ವರಿಯರು!
ಆದರೆ ಇಲ್ಲಿ ಏಳೂ ಊರುಗಳಿಗೆ ಒಬ್ಬನೇ ಆಂಜನೇಯ ಎಂಬುದೇ ವಿಶೇಷ. ಇಂಥಾ ಆಂಜನೇಯನನ್ನ ಹೊಸವರ್ಷದ ದಿನದಂದು ಅಪಾರ ಸಂಖ್ಯೆಯ ಭಕ್ತರು ಈ ಏಳೂರ ಒಡೆಯನ ದರ್ಶನ ಪಡೆದು ಪುನೀತರಾದರು.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ