Yalaguresh Temple: ಯಲಗೂರೇಶ್ವರ ಕಾರ್ತಿಕೋತ್ಸವ; ಹಲವು ವಿಶಿಷ್ಟ ಕಾರ್ಯಕ್ರಮಗಳ ಸಂಭ್ರಮ

ಯಲಗೂರೇಶ್ವರ

ಯಲಗೂರೇಶ್ವರ

ಏಳೂರ ಒಡೆಯ ಈ ಯಲಗೂರೇಶನ ಕಾರ್ತಿಕೋತ್ಸವ ಪ್ರತಿ ವರ್ಷದಂತೆ ಈ ವರ್ಷವು ಸಹ ಬಹಳಷ್ಟು ವಿಜೃಂಭಣೆಯಿಂದ ಜರುಗಲಿದೆ.

  • News18 Kannada
  • 2-MIN READ
  • Last Updated :
  • Bijapur, India
  • Share this:

    ವಿಜಯಪುರ: ಬಾಗಲಕೋಟೆ (Bagalkot News) ಮತ್ತು ವಿಜಯಪುರ (Vijayapura News) ಈ ಅವಳಿ ಜಿಲ್ಲೆಯಲ್ಲಿಯೇ ಹೆಚ್ಚು ಭಕ್ತರನ್ನ ಹೊಂದಿರುವ ಯಲಗೂರೇಶನ ಕಾರ್ತಿಕೋತ್ಸವ (Yalaguresh Kartik Utsav) ಫೆಬ್ರವರಿ 11 ರಂದು ಜರುಗಲಿದೆ. ಪ್ರತಿ ವರ್ಷದಂತೆ ಈ ವರ್ಷವು ಅತಿ ವಿಜೃಂಭಣೆಯಿಂದ ಕಾರ್ತಿಕೋತ್ಸವವವನ್ನು (Kartik Utsav) ನಡೆಸಲಾಗುವುದಾಗಿ ದೇವಸ್ಥಾನ ಕಮೀಟಿ ಮಾಹಿತಿ ನೀಡಿದೆ.


    ಈ ಕಾರ್ಯಕ್ರಮಗಳೆಲ್ಲಾ ಇರಲಿವೆ!
    ಫೆಬ್ರವರಿ 11 ರಂದು ಬೆಳಗ್ಗೆ ಯಲಗೂರೇಶನ ಮೂರ್ತಿಗೆ ಅಭಿಷೇಕ, ಮಹಾ ನೈವೇದ್ಯದ ಬಳಿಕ ದಿಂಡಿನ ಸ್ಪರ್ಧೆ ಜರುಗಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ ಇರಲಿದೆ. ರಾತ್ರಿ 8 ಗಂಟೆಗೆ ಹರಿದಾಸ ಕೀರ್ತನೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ.


    ನಾಟಕ ಪ್ರದರ್ಶನ
    ಫೆಬ್ರವರಿ 12 ರಂದು ವನಹಳ್ಳಿ ಕುದುರೆ ಕುಣಿತ, ಗೊಂಬೆಗಳ ಕುಣಿತ ಇರಲಿದೆ. 5 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ. ರಾತ್ರಿ 8 ಗಂಟೆಗೆ ಹೊಂಡ ಪೂಜೆ ಜರುಗಲಿದೆ. ರಾತ್ರಿ 10.30ಕ್ಕೆ "ತಾಳಿ ಹರಿಯಲಿಲ್ಲ ಶೀಲ ಉಳಿಯಲಿಲ್ಲ" ನಾಟಕ ನಡೆಯಲಿದೆ.


    ಜಂಗಿ ಕುಸ್ತಿಯೂ ಇರಲಿದೆ
    ಫೆಬ್ರವರಿ  13 ಸಾಯಂಕಾಲ ನಾಲ್ಕು ಗಂಟೆಗೆ ಜಂಗಿ ಕುಸ್ತಿ ಇರುತ್ತದೆ. ಮಹಿಳಾ ಮತ್ತು ಪುರುಷ ಕುಸ್ತಿಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ರಾತ್ರಿ 10.30ಕ್ಕೆ "ಮಗ ಹೋದರೂ ಮಾಂಗಲ್ಯ ಬೇಕು" ಎಂಬ ಸಾಮಾಜಿಕ ನಾಟಕ ಇರಲಿದೆ.




    ಟಗರಿನ ಕಾಳಗದ ರೋಚಕತೆ
    ಫೆಬ್ರವರಿ 14 ಬೆಳಗ್ಗೆ 10.30 ಕ್ಕೆ 60 ಎಚ್.ಪಿ.ಒಳಗಡೆ ಟ್ರಾಕ್ಟರ್ ಜಗ್ಗುವ ಸ್ಪರ್ಧೆ ಜರುಗುತ್ತದೆ.
    ಫೆಬ್ರವರಿ 15 ರಂದು ಸಂಜೆ 6 ಗಂಟೆಗೆ ಟಗರಿನ ಕಾಳಗವನ್ನ ಏರ್ಪಡಿಸಲಾಗಿದ್ದು ರಾಜ್ಯದ ಹಲವಾರು ಜಿಲ್ಲೆಗಳಿಂದ ಸಾಕಷ್ಟು ಜನರು ಈ ಸ್ಪರ್ಧೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.


    ಇದನ್ನೂ ಓದಿ: Bagalkote: ಹೆದ್ದಾರಿಯಲ್ಲಿ ಉರುಳು ಸೇವೆ ಮಾಡುತ್ತಾ ವಿಠ್ಠಲನ ಸನ್ನಿಧಾನಕ್ಕೆ ಹೊರಟ ಭಕ್ತ!


    ಪುಟ್ಟಿಗಾಡಿ ಸ್ಪರ್ಧೆ
    ಫೆಬ್ರವರಿ 16 ಸಾಯಂಕಾಲ 6 ಗಂಟೆಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಪುಟ್ಟಿಗಾಡಿ ಸ್ಪರ್ಧೆಯನ್ನ ಆಯೋಜಿಸಲಾಗಿದೆ. ಕೇವಲ 2 ನಿಮಿಷ ಸಮಯಾವಕಾಶವಿರುತ್ತದೆ. ಫೆಬ್ರವರಿ 17 ರಂದು ಬೆಳಗ್ಗೆ ಉತ್ಸಾಹಿ ಯುವಕರಿಂದ ಹಗ್ಗಜಗ್ಗಾಟ ಸ್ಪರ್ಧೆ ನಡೆಯುತ್ತದೆ.


    ಫೆಬ್ರವರಿ 18 ರಂದು ಒಂದು ಕುದುರೆ, ಒಂದು ಎತ್ತಿನ ಗಾಡಿ ಸ್ಪರ್ಧೆ ಜರುಗಲಿದೆ. ರಾತ್ರಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.


    ಇದನ್ನೂ ಓದಿ: Viral Video: 5 ಲಕ್ಷಕ್ಕೆ ಖರೀದಿಸಿದ್ದ ಎತ್ತು 14 ಲಕ್ಷಕ್ಕೆ ಮಾರಾಟ!


    ಏಳೂರ ಒಡೆಯ ಈ ಯಲಗೂರೇಶನ ಕಾರ್ತಿಕೋತ್ಸವ ಪ್ರತಿ ವರ್ಷದಂತೆ ಈ ವರ್ಷವು ಸಹ ಬಹಳಷ್ಟು ವಿಜೃಂಭಣೆಯಿಂದ ಜರುಗಲಿದೆ. ಸಪ್ತ ಗ್ರಾಮಗಳಾದ ಯಲಗೂರು, ಮಸೂತಿ, ಬೂದಿಹಾಳ, ಕಾಶಿನಕುಂಟಿ, ಅರಳಲದಿನ್ನಿ ನಾಗಸಂಪಿಗೆ, ಚಂದ್ರಗಿರಿ ಈ ಊರುಗಳ ಸಮಸ್ತ ಗುರು ಹಿರಿಯರು ಜಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಅಷ್ಟೇ ಅಲ್ಲದೇ,  ಹೊರ ರಾಜ್ಯಗಳಿಂದಲು ಸಾಕಷ್ಟು ಜನ ಆಗಮಿಸಿ ಈ ಯಲಗೂರೇಶನ ಆಶೀರ್ವಾದವನ್ನ ಪಡೆಯಲಿದ್ದಾರೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು