Bagalkote Police: ಜನರನ್ನಷ್ಟೇ ಅಲ್ಲ, ಪರಿಸರವನ್ನೂ ರಕ್ಷಿಸ್ತಾರೆ ಈ ಪೊಲೀಸ್ರು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

World Environment Day: ಪರಿಸರ ಉಳಿಸಬೇಕು ಎಂದು ಎಲ್ರೂ ಹೇಳ್ತಾರೆ. ಆದ್ರೆ ಬಾಗಲಕೋಟೆಯ ಪೊಲೀಸರು ಮಾತ್ರ ಈ ಮಾತನ್ನ ಕಾರ್ಯರೂಪಕ್ಕೆ ಇಳಿಸಿದ್ದಾರೆ.

  • Share this:

ಬಾಗಲಕೋಟೆ: ಪಾಳುಬಿದ್ದ ಗುಡ್ಡದ ನೆಲ ಈಗ ಪಶ್ಚಿಮ ಘಟ್ಟದಷ್ಟೇ (Western Ghats) ಹಸಿರು! ಒಂದೊಂದು ಹೆಜ್ಜೆಯಲ್ಲೂ ತಂಪು ಗಾಳಿಯ ನೇವರಿಕೆ, ದೇಹ ಸೇರುವ ಶುದ್ಧಗಾಳಿ. ದಾರಿಯ ಅಲ್ಲಲ್ಲಿ (World Environment Day)  ಕೈಗೆ ನಿಲುಕುವ ವಿವಿಧ ಹಣ್ಣುಗಳು. ಇಂತಹ ಅದ್ಭುತ ಪರಿಸರಕ್ಕೆ ಸಾಕ್ಷಿಯಾಗಿದೆ ಬಾಗಲಕೋಟೆ ಡಿಎಆರ್ ಪೊಲೀಸ್ (Bagalkote Police) ಕಚೇರಿ ಆವರಣ!


ಪರಿಸರ ಉಳಿಸಬೇಕು ಎಂದು ಎಲ್ರೂ ಹೇಳ್ತಾರೆ. ಆದ್ರೆ ಬಾಗಲಕೋಟೆಯ ಪೊಲೀಸರು ಮಾತ್ರ ಈ ಮಾತನ್ನ ಕಾರ್ಯರೂಪಕ್ಕೆ ಇಳಿಸಿದ್ದಾರೆ. ಬಾಗಲಕೋಟೆ ಡಿಎಆರ್ ಪೊಲೀಸ್ ಕಚೇರಿ ಆವರಣ ಸಾಕ್ಷಾತ್ ಕಾಡಿನಂತೆ ಭಾಸವಾಗುತ್ತೆ.




ಇಷ್ಟೆಲ್ಲ ಗಿಡಮರಗಳ ತಂಗುದಾಣ
ವಿಶೇಷ ಔಷಧೀಯ ಗುಣ, ಕಾಡು ಗಿಡಗಳು, ಕಾಶ್ಮೀರದಲ್ಲಿ ಬೆಳಯುವ ಆಪಲ್ ಸಹ ಇಲ್ಲಿರೋದು ವಿಶೇಷ. ಹೊರಗಡೆ ಸುಡುವ 41 ಡಿಗ್ರಿ ತಾಪಮಾನವಿದ್ರೂ ಇಲ್ಲಿ ಮಾತ್ರ 35 ಡಿಗ್ರಿಯಷ್ಟೇ ಉಷ್ಣಾಂಶವಿರುತ್ತೆ. ಬಿಸಿಲೂರಲ್ಲಿ ಮಲೆನಾಡ ವಾತಾವರಣ ಕಂಡು ಆಹಾ ಅನಿಸುತ್ತೆ.


ಇದನ್ನೂ ಓದಿ: Bagalkote News: ಈ ಗ್ರಾಮಸ್ಥರು 22 ವರ್ಷಗಳಿಂದ ಕರೆಂಟ್ ಬಿಲ್ ಕಟ್ಟಿಲ್ಲ!


3 ವರ್ಷಗಳ ಹಳೆಯ ಯೋಚನೆ
ಬಾಗಲಕೋಟೆ ಡಿಎಆರ್ ಪೊಲೀಸ್ ಕಚೇರಿ ಆವರಣದ ಕಾಡಿನ ಮಧ್ಯದಲ್ಲಿ ವಿಶ್ರಾಂತಿ ಪಡೆಯಲು ಸ್ಥಳವಿದೆ. ಪಕ್ಕದಲ್ಲೇ ಪುಟ್ಟ ಗುಡಿಯಿದೆ. ಮೂರು ವರ್ಷದ ಹಿಂದೆ ಪೊಲೀಸ್ ಕಚೇರಿ ಆವರಣದಲ್ಲಿ ಏಕೆ ಗಿಡಮರ ಬೆಳೆಸಬಾರದು ಎಂಬ ಯೋಚನೆ ಇಲ್ಲಿನ ಸಿಬ್ಬಂದಿಗೆ ಬಂದಿತ್ತು. ಅದೇ ಯೋಚನೆಯೇ ಇಂದು ಬರೋಬ್ಬರಿ 15 ಸಾವಿರ ಗಿಡಮರಗಳಿಗೆ ಆಸರೆ ನೀಡಿದೆ!




ಇದನ್ನೂ ಓದಿ: Bagalakote: ಪುರಾತನ ದೇವಾಲಯಗಳ ಕೂಟವೇ ಈ ಮಹಾಕೂಟೇಶ್ವರ!




ಸದಾಕಾಲ ಜನರ ರಕ್ಷಣೆ, ಕಾನೂನು ಸುವ್ಯವಸ್ಥೆಯಲ್ಲೇ ನಿರತರಾಗುವ ಪೊಲೀಸರು ಮನಸು ಮಾಡಿದ್ರೆ ಹೀಗೊಂದು ವಿಶಿಷ್ಟ ಕಾರ್ಯ ಮಾಡಬಹುದು ಅನ್ನೋದಕ್ಕೆ ಬಾಗಲಕೋಟೆಯ ಪೊಲೀಸರೇ ಉದಾಹರಣೆ ನೋಡಿ.


ವರದಿ: ಮಂಜುನಾಥ್ ತಲ್ವಾರ್, ನ್ಯೂಸ್ 18 ಕನ್ನಡ ಬಾಗಲಕೋಟೆ

First published: