• ಹೋಂ
 • »
 • ನ್ಯೂಸ್
 • »
 • ವಿಜಯಪುರ
 • »
 • World Environment Day 2022: 500 ಕ್ಕೂ ಹೆಚ್ಚು ಎಕರೆ ಬರಡು ಭೂಮಿಯಲ್ಲಿ ನಡೆದ ಪವಾಡ! ವಿಜಯಪುರದ ಈ ಸುದ್ದಿಯನ್ನು ಓದಲೇಬೇಕು

World Environment Day 2022: 500 ಕ್ಕೂ ಹೆಚ್ಚು ಎಕರೆ ಬರಡು ಭೂಮಿಯಲ್ಲಿ ನಡೆದ ಪವಾಡ! ವಿಜಯಪುರದ ಈ ಸುದ್ದಿಯನ್ನು ಓದಲೇಬೇಕು

ಕರಾಡದೊಡ್ಡಿ, ಭೂತನಾಳ ಪ್ರದೇಶ

ಕರಾಡದೊಡ್ಡಿ, ಭೂತನಾಳ ಪ್ರದೇಶ

2016ರಲ್ಲಿ ಸರಿಸುಮಾರು 500 ಎಕರೆ ಪ್ರದೇಶದಲ್ಲಿ 150 ಬಗೆಯ ಸಸಿಗಳನ್ನು ನಾಟಿ ಮಾಡಲಾಗಿತ್ತು. ಸಕಾಲಕ್ಕೆ ಮಳೆ ಬಾರದ ಕಾರಣ ಬೇಸಿಗೆಯಲ್ಲಿ ಸಸಿಗಳು ಬಾಡಲಾರಂಬಿಸಿದ್ದವು. ಆರಂಭದಲ್ಲಿ ಟ್ಯಾಕ್ಟರ್ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುತ್ತಿತ್ತು. ಮುಂದೇನು ನಡೀತು? ಇಲ್ಲಿದೆ ನೋಡಿ.

 • Share this:

  ವಿಜಯಪುರ ಜಿಲ್ಲೆಗೆ ಬರಪೀಡಿತ ಜಿಲ್ಲೆಯಂದೇ (Drought Area) ಹೇಳಲಾಗುತ್ತದೆ.  ಕಳೆದ 10 ವರ್ಷಗಳಿಂದ ಈ ಜಿಲ್ಲೆ ಬರಗಾಲಕ್ಕೆ ತುತ್ತಾಗುತ್ತಿದೆ. ಇದೆಲ್ಲವನ್ನು ಮನಗಂಡ ಅರಣ್ಯ ಇಲಾಖೆ ಅಂದಾಜು 500ಕ್ಕೂ ಹೆಚ್ಚು ಎಕರೆ ಬರಡು ಭೂಮಿಯನ್ನು ಸಂಪೂರ್ಣ ಹಸಿರೀಕರಣ (Forest Department) ಮಾಡಿ ಅಚ್ಚರಿ ಮೂಡಿಸಿದೆ. ಹಾಗಾದ್ರೆ ಯಾವ ಜಿಲ್ಲೆ ಅಂತೀರಾ ಈ ಸ್ಟೋರಿ ನೋಡಿ. ವೃಕ್ಷ ಅಭಿಯಾನ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು 2016ರಲ್ಲಿ ಕೋಟಿ ವೃಕ್ಷ ಅಭಿಯಾಣವನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿ (Vijayapura) ಅರಣ್ಯವೃದ್ಧಿಗೆ ಪಣತೊಟ್ಟು ಇದಕ್ಕೆ ಅರಣ್ಯ ಇಲಾಖೆ, ಜಿಲ್ಲಾಡಳಿತ, ಸ್ವಯಂ ಸೇವಾ ಸಂಸ್ಥೆಗಳು,ವಿದ್ಯಾರ್ಥಿಗಳು, ರೈತರು ಸೇರಿದಂತೆ ಜಿಲ್ಲೆಯ ಜನರು ಈ ಅಭಿಯಾಣದಲ್ಲಿ ಕೈ ಜೋಡಿಸಿ ಕಳೆದ ವರ್ಷ ಯಶಸ್ವಿಗೊಳಿಸಿದ್ದಾರೆ.


  ವಿಜಯಪುರ ನಗರದ ಹೊರವಲಯದಲ್ಲಿರುವ ಕರಾಡದೊಡ್ಡಿ, ಭೂತನಾಳ ಕೆರೆಯ ಸುತ್ತಮುತ್ತಲು ನೂರಾರು ಎಕರೆ ಪ್ರದೇಶ ಸಂಪೂರ್ಣ ಕಲ್ಲು ಮಿಶ್ರಿತ ಬರಡು ಪ್ರದೇಶ, ಎತ್ತ ನೋಡಿದರೂ ಸಹ ಸುತ್ತಲೂ ಕಲ್ಲು ಬಂಡೆ ತಗ್ಗು ದಿನ್ನೆ ಕಾಣಿಸುತಿತ್ತು, ಒಂದೇ ಒಂದು ಗಿಡಮರವು ಕಾಣದ ಪ್ರದೇಶದಲ್ಲೀಗ ಚಿತ್ರಣವೇ ಬದಲಾಗಿದೆ.


  ಅಂದು ಸಸಿ ಇಂದು ಮರ
  ಆಲದ ಮರ. ಹೆಬ್ಬೇವು, ಅರಳಿ, ಹೊಂಗೆ, ಬೇವು, ಬಿದಿರು, ನೇರಳೆ, ಹುಣಸೆ, ರೇನ್ ಟ್ರೀ, ಹೀಗೆ ಹಲವಾರು ನಾನಾ ಜಾತಿಯ ಗಿಡ ಮರಗಳನ್ನು ನೀವಿಲ್ಲಿ ಕಾಣಬಹುದಾಗಿದೆ. ಸದ್ಯ ಬರಡು ನೆಲವನ್ನ ಪರಿವರ್ತನೆ ಮಾಡಿ ಜೀವಕಳೆ ಮೇಳೈಸಿದೆ. ಅಲ್ಲದೇ, ಎಲ್ಲ ಸಸಿಗಳು ಈಗ ಮರಗಳಾಗುವ ಹಂತದಲ್ಲಿವೆ.


  ಹನಿ ನೀರಾವರಿ ಪದ್ಧತಿ ಮೂಲಕ ನೀರು ಪೂರೈಕೆ
  2016ರಲ್ಲಿ ಸರಿಸುಮಾರು 500 ಎಕರೆ ಪ್ರದೇಶದಲ್ಲಿ 150 ಬಗೆಯ ಸಸಿಗಳನ್ನು ನಾಟಿ ಮಾಡಲಾಗಿತ್ತು. ಸಕಾಲಕ್ಕೆ ಮಳೆ ಬಾರದ ಕಾರಣ ಬೇಸಿಗೆಯಲ್ಲಿ ಸಸಿಗಳು ಬಾಡಲಾರಂಬಿಸಿದ್ದವು. ಆರಂಭದಲ್ಲಿ ಟ್ಯಾಕ್ಟರ್ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುತ್ತಿತ್ತು.


  ಇದನ್ನು ಮನಗಂಡ ಅರಣ್ಯ ಇಲಾಖೆ ಸರ್ಕಾರದ ಅನುಮತಿ ಪಡೆದು ಡ್ರಿಪ್ ಇರಿಗೇಷನ್ ಮೂಲಕ ಸಸಿಗಳಿಗೆ ನೀರನ್ನು ಪೂರೈಕೆ ಮಾಡಲಾಯಿತು. ಇದರಿಂದ ಎಲ್ಲ ಸಸಿಗಳು ಸಂಪೂರ್ಣವಾಗಿ ಬೆಳೆದು ನಿಂತಿವೆ. ಈ ಒಂದು ಹನಿ ನೀರಾವರಿ ಪದ್ದತಿಯನ್ನು ಹೊಸ ತಂತ್ರಜ್ಞಾನ ಬಳಿಸಿ ಪ್ರಯೋಗ ಮಾಡಿ ಕಾಡಿನಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿರುವುದರ ಮೂಲಕ ರಾಜ್ಯದಲ್ಲಿಯೇ ಗಮನ ಸೆಳೆದಿದೆ ಎನ್ನುತ್ತಾರೆ ಪರಿಸರ ಪ್ರೇಮಿ ಡಾ.ಮಹಾಂತೇಶ ಬಿರಾದರ.


  ಇದನ್ನೂ ಓದಿ: Kolhar Curd: ಕೋಲಾರ ಅಲ್ಲ ಕೋಲ್ಹಾರ! ಇಲ್ಲಿಯ ಗಟ್ಟಿ ಮೊಸರ ರುಚಿಗೆ ಮಾರುಹೋಗಿ ಬನ್ನಿ!


  ಹೆಸರು ಅಳಿಸಿ ಹಸಿರು ಮೂಡಿಸಿದ ಅರಣ್ಯ ಇಲಾಖೆ
  ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗದಿಂದ ಪರಿಸರವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿವರ್ಷವು ಜಿಲ್ಲೆಯ ರೈತರಿಗೆ ರಿಯಾಯಿತಿ ದರಗಳಲ್ಲಿ ಸಸಿಗಳನ್ನು ನೀಡಲಾಗುತ್ತದೆ.  ಸರ್ಕಾರದ ಬಯಲು ಪ್ರದೇಶ, ರಸ್ತೆ ಬದಿಗಳಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ಅಲಂಕಾರಿಕ ಸಸಿ ಮತ್ತು ಅರಣ್ಯ ಸಸಿಗಳನ್ನು ಇಲಾಖೆಯಿಂದ ನೆಟ್ಟು. ಅವುಗಳನ್ನು ಪಾಲನೆ ಪೋಷಣೆ ಮಾಡಲಾಗುತ್ತದೆ.


  ಇದನ್ನೂ ಓದಿ: Vijayapura: ವಿಜಯಪುರ ಜಿಲ್ಲೆಯ ಯುವಕ ಯುವತಿಯರೇ, ನಿಮ್ಮನ್ನೇ ಹುಡುಕಿ ಬಂದಿದೆ ಈ ಅವಕಾಶ!


  ಕರಾಡದೊಡ್ಡಿಯಲ್ಲಿ ಬೆಳೆಯುತ್ತಿರುವ ಮರಗಳಿಗೆ ಇಲಾಖೆಯಿಂದ 500 ಎಕರೆ ಪ್ರದೇಶಕ್ಕೆ ಸಂಪೂರ್ಣವಾಗಿ ತಂತಿ ಬೇಲಿಯನ್ನು ಹಾಕಿ ರಕ್ಷಣೆ ಮಾಡಲಾಗುತ್ತಿದೆ. ಸುಸ್ಥಿರ ಕೃಷಿ ಮತ್ತು ಆರೋಗ್ಯಯುತ ಪರಿಸರ ನಿರ್ಮಿಸುವಲ್ಲಿ ಅರಣ್ಯ ಇಲಾಖೆ ಪಾತ್ರ ಮುಖ್ಯವಾಗಿದೆ.


  ಒಟ್ಟಿನಲ್ಲಿ ಒಂದು ಕಾಲದಲ್ಲಿ ಬರದ ನಾಡಾಗಿದ್ದ ವಿಜಯಪುರ ಜಿಲ್ಲೆಯಲ್ಲಿಗ ಕಣ್ಣು ಹಾಯಿಸಿದಷ್ಟು ದೂರ ಹಚ್ಚ ಹಸಿರು ಗೋಚರವಾಗುತ್ತದೆ. ಇದಂತೂ ವಿಜಯಪುರದ ಜನರಲ್ಲಿ ಖುಷಿ ಮೂಡಿಸಿದೆ.


  ವರದಿ: ಪ್ರಶಾಂತ ಹೂಗಾರ, ವಿಜಯಪುರ

  Published by:guruganesh bhat
  First published: