ವಿಜಯಪುರ: ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತಿರುವ ದ್ವಿಋತು ಬೆಳೆಗಳ (Agriculture Tips) ಸಂರಕ್ಷಿಸಲು ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ದಿನಾಂಕ ನವೆಂಬರ್ 30 ರಿಂದ ಡಿಸೆಂಬರ್ 5ರವರೆಗೆ ನೀರು ಪೂರೈಸುವ ಕುರಿತು ಮಾಹಿತಿ (Tips To Farmers) ನೀಡಲಾಗಿದೆ. ಈ ಕುರಿತು ಭೀಮರಾಯನಗುಡಿ ಕೆಬಿಜೆನ್ನೆಲ್ ಮುಖ್ಯ ಅಭಿಯಂತರರು ಮಂಗಳವಾರ ತಿಳಿಸಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು, ನಾನಾ ರೈತ ಸಂಘಟನೆಗಳು, ಜನಪ್ರತಿನಿಗಳ ಹಾಗೂ ಸಮಿತಿಯ ಮುಖಂಡರುಗಳ ಕೋರಿಕೆಗೆ ಸ್ಪಂದಿಸಿ ರೈತರಿಗೆ ಅನುಕೂಲ ಮಾಡುವ ಹಿತದೃಷ್ಟಿಯಿಂದ ಐಸಿಸಿ ಅಧ್ಯಕ್ಷರಾದ ಸಚಿವ ಸಿ.ಸಿ.ಪಾಟೀಲ ಅವರೊಂದಿಗೆ ಚರ್ಚಿಸಿ ಮುಂಗಾರು ಹಂಗಾಮಿನಲ್ಲಿ ಹಾಲಿ ಬೆಳೆದು ನಿಂತಿರುವ ದ್ವಿ-ಋತು ಬೆಳೆಗಳನ್ನು ಸಂರಕ್ಷಿಸಲು ಆರು ದಿನಗಳವರೆಗೆ ನೀರನ್ನು ಪೂರೈಸಲಾಗುವುದು ಎಂದು ತಿಳಿಸಲಾಗಿದೆ. ಈ ನೀರನ್ನು ಕೇವಲ ಬೆಳೆದು ನಿಂತಿರುವ ದ್ವಿ-ಋತು ಬೆಳೆಗಳಿಗೆ ಮಾತ್ರ ಉಪಯೋಗಿಸುವಂತೆ ಕೃಷಿಕರಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Bagalakote: ಕಾಯಿನ್ ಬಾಕ್ಸ್ ಆದ ಹೊಟ್ಟೆ! ವೈದ್ಯರಿಂದ 187 ನಾಣ್ಯಗಳು ಹೊರಕ್ಕೆ
ಜಲಾಶಯದ ಗರಿಷ್ಠ ಮಟ್ಟ
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ 519.60 ಮೀಟರ್ ಎತ್ತರದ ಜಲಾಶಯದಲ್ಲಿ ಸದ್ಯ 123.081 TMC ನೀರು ಸಂಗ್ರಹವಾಗಿದೆ.
ಇದನ್ನೂ ಓದಿ: JCB Operating: ಉಚಿತವಾಗಿ ಜೆಸಿಬಿ ಆಪರೇಟರಿಂಗ್ ಕಲಿಯಿರಿ! ಇಲ್ಲಿ ಅರ್ಜಿ ಹಾಕಿ
ಈ ಅವಧಿಯಲ್ಲಿ ಯಾವುದೇ ಹಿಂಗಾರು ಹಂಗಾಮಿನ ಬೆಳೆಗಳ ತಯಾರಿಗೆ ಈ ನೀರನ್ನು ಉಪಯೋಗಿಸಬಾರದು. ನವೆಂಬರ್ 25 ರಂದು ಬೆಂಗಳೂರಿನಲ್ಲಿ ನಡೆದ ಐಸಿಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಡಿಸೆಂಬರ್ 12 ರಿಂದ ಕಾಲುವೆಗಳಿಗೆ ನೀರನ್ನು ಹರಿಸಲಾಗುವುದು. ರೈತರು ನೀರನ್ನು ಮಿತವಾಗಿ ಬಳಸಿ, ಸಹಕರಿಸಬೇಕು ಎಂದು ಭೀಮರಾಯನಗುಡಿ ಕೆಬಿಜೆನ್ನೆಲ್ ಮುಖ್ಯ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ