• Home
 • »
 • News
 • »
 • vijayapura
 • »
 • Vijayapura: ಕಾಳಿಕಾ ಕ್ಷೇತ್ರದಲ್ಲಿ ವಿಶ್ವಕರ್ಮ ಮಹೋತ್ಸವ; ಇಲ್ಲಿದೆ ವಿವರ

Vijayapura: ಕಾಳಿಕಾ ಕ್ಷೇತ್ರದಲ್ಲಿ ವಿಶ್ವಕರ್ಮ ಮಹೋತ್ಸವ; ಇಲ್ಲಿದೆ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 12 ಜನರಿಗೆ ಸಾಧಕ ಪ್ರಶಸ್ತಿ ಹಾಗೂ ವಿಶ್ವಕರ್ಮ ಸಮಾಜದ 12 ಗಣ್ಯ ಸಾಧಕರಿಗೆ “ವಿಶ್ವಕರ್ಮ ಭೂಷಣ” ಪ್ರಶಸ್ತಿ ಪ್ರದಾನ ನಡೆಯಲಿದೆ.

 • News18 Kannada
 • Last Updated :
 • Bijapur, India
 • Share this:

  ಬಾಗಲಕೋಟೆ : ವಿಶ್ವಕರ್ಮ ಜನಾಂಗದ (Vishwakarma Community) ಕುಲದೇವತೆ ಶ್ರೀ ಕಾಳಿಕಾದೇವಿಯ ಕ್ಷೇತ್ರವಾದ ಸವದತ್ತಿ ತಾಲೂಕಿನ ಶಿರಸಂಗಿಯಲ್ಲಿ ಇದೇ ನವೆಂಬರ್ 22 ಹಾಗೂ 23 ರಂದು 22ನೇ ವಿಶ್ವಕರ್ಮ ಮಹೋತ್ಸವ ಜರುಗಲಿದೆ. ಎರಡು ದಿನಗಳ ಈ ಮಹೋತ್ಸವದಲ್ಲಿ ಧಾರ್ಮಿಕ ಸಭೆ, ವಿಶ್ವಕರ್ಮರ ಪಂಚ ಕೌಶಲ್ಯಗಳಲ್ಲಿ ಸಾಧನೆ ಮಾಡಿದ ಸಾಧಕರ ಸನ್ಮಾನ, ಸಮಾಜದ 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, “ವಿಶ್ವಕರ್ಮ” ಸೇವಾ ಭೂಷಣ ಪ್ರಶಸ್ತಿ, ಕಲಾ ಪ್ರದರ್ಶನ, ಕಾರ್ತಿಕ ದೀಪೋತ್ಸವ ಹಾಗೂ ಆಕರ್ಷಕ ಸಿಡಿಮದ್ದು ಪ್ರದರ್ಶನದಂಥ ಕಾರ್ಯಕ್ರಮಗಳು ಜರುಗಲಿವೆ.


  ಮಹೋತ್ಸವದ ಮೊದಲ ದಿನವಾದ ನವೆಂಬರ್ 22 ರಂದು ಬೆಳಿಗ್ಗೆ ಸಂಸ್ಥೆಯ ಅಧ್ಯಕ್ಷರಿಂದ ಶ್ರೀ ವಿಶ್ವಕರ್ಮ ಧ್ವಜಾರೋಹಣ, ಕ್ಷೇತ್ರದೇವತೆ ಶ್ರೀ ಕಾಳಿಕಾ ದೇವಿಗೆ ಅಭಿಷೇಕ, ಪೂಜೆ ಹಾಗೂ ಭಕ್ತಾದಿಗಳಿಂದ ಕಾಣಿಕೆಗಳ ಅರ್ಪಣೆ ನಡೆಯಲಿದೆ.


  ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ
  ಬೆಳಗ್ಗೆ 10:30ಕ್ಕೆ ಕಲಾ ಪ್ರದರ್ಶನದ ಉದ್ಘಾಟನೆಯನ್ನು ಚೆನೈನ ವೈದಿಕ ಕಲಾ, ವಿಜ್ಞಾನ ಹಾಗೂ ತಂತ್ರಜ್ಞಾನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ.ಕನಕರಾಜು ಧರ್ಮಪುರಿ ಅವರು ನೆರವೇರಿಸಲಿದ್ದಾರೆ. ಜೊತೆಗೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.


  ಸಾಯಂಕಾಲ 4 ಗಂಟೆಗೆ ಶಿರಸಂಗಿ ಗ್ರಾಮದಲ್ಲಿ ವಿಶ್ವಕರ್ಮ ಪ್ರಬುವಿನ ಪಂಚಲೋಹ ಮೂರ್ತಿಯ ಭವ್ಯ ಮೆರವಣಿಗೆ ಜರುಗಲಿದ್ದು, ಸುಮಂಗಲಿಯರಿಂದ ಪೂರ್ಣಕುಂಭ ಮೆರವಣಿಗೆ ಹಾಗೂ ವಾದ್ಯ ಮೇಳಗಳು ನಡೆಯಲಿದೆ. ಸಂಜೆ 6-30ಕ್ಕೆ ದೀಪೋತ್ಸವ ಹಾಗೂ ಸಿಡಿಮದ್ದು ಪ್ರದರ್ಶನ, 7 ಗಂಟೆಗೆ ಮಹಾ ಪ್ರಸಾದ ದಾನಿಗಳ ಸನ್ಮಾನ ಮತ್ತು ವಿವಿಧ ಕಲಾ ತಂಡಗಳಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಲಿದೆ.


  ಇದನ್ನೂ ಓದಿ: Travel Plan: ರಾಮಾಯಣದ ಸೀತೆ, ಶ್ರೀರಾಮ, ಲಕ್ಷ್ಮಣ, ಹನುಮರನ್ನು ಮೀಟ್ ಮಾಡಿ!


  ಸಾಧಕರಿಗೆ ಪ್ರಶಸ್ತಿ
  ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 12 ಜನರಿಗೆ ಸಾಧಕ ಪ್ರಶಸ್ತಿ ಹಾಗೂ ವಿಶ್ವಕರ್ಮ ಸಮಾಜದ 12 ಗಣ್ಯ ಸಾಧಕರಿಗೆ “ವಿಶ್ವಕರ್ಮ ಭೂಷಣ” ಪ್ರಶಸ್ತಿ ಪ್ರದಾನ ನಡೆಯಲಿದೆ. ಮೈಸೂರಿನ ಸ್ವರ್ಣ ಹಾಗೂ ರಜತ ಮೂರ್ತಿ ಶಿಲ್ಪಿ ಶ್ರೀನಿವಾಸ ಚನ್ನಪ್ಪ ಆಚಾರ್ಯ ಅವರಿಗೆ ವಿಶ್ವಶಿಲ್ಪಿ ಡಂಕಣಾಚಾರ್ಯ ಪ್ರಶಸ್ತಿ, ಧಾರವಾಡದ ಶ್ರೀ ಶಿವಣ್ಣ ಬಡಿಗೇರ ಅವರಿಗೆ ವಿಶ್ವಕರ್ಮ ಸಮಾಜ ಸೇವಾ ಭೂಷಣ ಪ್ರಶಸ್ತಿ, ನೀಡಲಾಗುತ್ತದೆ.


  ಇದನ್ನೂ ಓದಿ: Startup Success Story: ವಿಜಯಪುರದಲ್ಲಿ ರೇಷ್ಮೆ ಕ್ರಾಂತಿ! ರಾಮನಗರಕ್ಕೆ ಸಖತ್ ಪೈಪೋಟಿ


  ಡಾ. ಕೆ.ಪಿ. ಈರಣ್ಣ (ವಿಶ್ವಕರ್ಮ ಇತಿಹಾಸ-ಸಂಶೋಧನೆ), ಶ್ರೀಮತಿ ಕೃಷ್ಣವೇಣಿ, ಬೆಂಗಳೂರು (ಶಿಕ್ಷಣ), ಮಾನಯ್ಯ ನಾ ಬಡಿಗೇರ, ಕಲಬುರ್ಗಿ (ಶಿಲ್ಪಕಲೆ), ಸಾಂಬಯ್ಯ ಆಚಾರ್ಯ, ಆಂಧ್ರಪ್ರದೇಶ (ಲೋಹಶಿಲ್ಪ), ಪಂ ರವೀಂದ್ರ ಯಾವಗಲ್ಲ, ಹುಬ್ಬಳ್ಳಿ (ಸಂಗೀತ), ಡಾ. ವೃಷಭೇಂದ್ರಾಚಾರ್ ಅರ್ಕಸಾಲಿ, ಕಾನಾ ಹೊಸಳ್ಳಿ (ಸಾಹಿತ್ಯ-ಸಂಶೋಧನೆ), ಬಸವರಾಜ ಬಡಿಗೇರ, ಬೆಂಗಳೂರು (ರಥಶಿಲ್ಪ), ರಮೇಶ ಯರಕದವರ, ಕಣದಾಳ (ಲೋಹಶಿಲ್ಪ), ಶ್ರೀಮತಿ ಭಾರತಿ ಟಂಕಸಾಲಿ, ವಿಜಯಪುರ (ಸಮಾಜ ಸೇವೆ), ಡಾ. ವಿರೂಪಾಕ್ಷ ಬಡಿಗೇರ, ಧಾರವಾಡ (ಸಂಸ್ಕೃತಿ ಪ್ರಸಾರ) ಪ್ರಶಸ್ತಿ ಪ್ರದಾನ ನಡೆಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.


  ವರದಿ: ಪ್ರಶಾಂತ ಹೂಗಾರ, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: