ಬಾಗಲಕೋಟೆ: 5 ಲಕ್ಷಕ್ಕೆ ಖರೀದಿ ಮಾಡಿದ್ದ ಎತ್ತೊಂದು (Ox) ಬರೋಬ್ಬರಿ 14 ಲಕ್ಷಕ್ಕೆ ಮಾರಾಟವಾದ ಅಚ್ಚರಿಯ ಘಟನೆ ನಡೆದಿದೆ. ಕೇವಲ ಎರಡೂವರೆ ವರ್ಷಗಳಲ್ಲಿ ಈ ಎತ್ತು ತನ್ನ ಮಾಲೀಕನಿಗೆ ಸುಮಾರು 3 ಪಟ್ಟು ಲಾಭ ತಂದುಕೊಟ್ಟಿದೆ. ಇಂತಹ ಆಶ್ಚರ್ಯಕರ ಘಟನೆ ನಡೆದಿರೋದು (Bagalkot News) ಬಾಗಲಕೋಟೆಯಲ್ಲಿ.
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಜತೆಗೆ ಜಾನುವಾರುಗಳತ್ತ ಗಮನ ಹರಿಸಿದರೆ ಲಕ್ಷಗಟ್ಟಲೆ ಆದಾಯ ಗಳಿಸಬಹುದು ಎಂಬುದನ್ನು ರೈತರು ಸಾಬೀತು ಮಾಡುತ್ತಿದ್ದಾರೆ. ಎರಡೂವರೆ ವರ್ಷದ ಹಿಂದೆ 5 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದ ಎತ್ತು, ಈಗ ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಉದ್ಯೋಗ, ಬ್ಯುಸಿನೆಸ್ ಮಾತ್ರವಲ್ಲದೇ ಜಾನುವಾರುಗಳನ್ನು ಪೋಷಣೆ ಮಾಡಿದರೂ ಉತ್ತಮ ಆದಾಯಗಳಿಸಬಹುದು ಎಂದು ರೈತರೊಬ್ಬರು ಸಾಬೀತು ಮಾಡಿದ್ದಾರೆ.
ಇವರೇ ನೋಡಿ ಎತ್ತನ್ನು ದಾಖಲೆ ಬೆಲೆಗೆ ಮಾರಿದವರು!
ಹೌದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಕಾಶಿಲಿಂಗಪ್ಪ-ಯಮನಪ್ಪ ಗಡದಾರ ಕುಟುಂಬದ ಎತ್ತು ದಾಖಲೆ ಬೆಲೆಗೆ ಮಾರಾಟವಾಗಿದೆ.
ಖರೀದಿ ಮಾಡಿದವರಾದ್ರೂ ಯಾರು?
ಬರೋಬ್ಬರಿ 14 ಲಕ್ಷ ರೂಪಾಯಿಗೆ ಎತ್ತು ಮಾರಾಟವಾಗಿದ್ದು, ರಬಕವಿ ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮದ ವಿಠ್ಠಲ ಮ್ಯಾಗಾಡಿ ಎಂಬ ರೈತ 14 ಲಕ್ಷ ರೂಪಾಯಿಗೆ ಎತ್ತನ್ನು ಖರೀದಿ ಮಾಡಿದ್ದಾರೆ.
ಇದನ್ನೂ ಓದಿ: Vijayapura Airport: ಉತ್ತರ ಕರ್ನಾಟಕದ ಜನತೆಗೆ ಖುಷಿ ಸುದ್ದಿ! ಇನ್ನೊಂದೇ ತಿಂಗಳಲ್ಲಿ ಹೊಸ ವಿಮಾನ ನಿಲ್ದಾಣ ಶುರು
ಅಂದಹಾಗೇ, ಕಳೆದ ಎರಡೂವರೆ ವರ್ಷದ ಹಿಂದೆ ಗಡದಾರ ಕುಟುಂಬ ಈ ಎತ್ತನ್ನು 5 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು. ಈಗ ಇದೇ ಎತ್ತು 14 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
50 ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಗೆದ್ದಿರುವ ಎತ್ತು
ಇದುವರೆಗೂ ಈ ಎತ್ತು ಬರೋಬ್ಬರಿ 50ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಜಯಗಳಿಸಿದೆ. ಎತ್ತು ಜಯಿಸಿದ ಬಹುಮಾನಗಳಲ್ಲಿ 6 ಬೈಕ್, 5 ತೊಲೆ ಬಂಗಾರ, 12 ಲಕ್ಷ ರೂಪಾಯಿ ನಗದು ಸೇರಿದೆ.
ಇದನ್ನೂ ಓದಿ: Vijayapura: ಈ ರೈತರಿಗೆ ಇಬ್ಬನಿಯೇ ಆಧಾರ! ಭರವಸೆಯ ಕನಸು ಬಿತ್ತಿದ ಹವಾಮಾನ
ಕುಟುಂಬದ ಓರ್ವ ಸದಸ್ಯನಂತೆ ಎತ್ತನ್ನು ಸಾಕಿದ್ದ ಗಡದಾರ ಕುಟುಂಬ, ಇಂದು ಮಾರಾಟವಾದ ಎತ್ತಿಗೆ ಆರತಿ ಎತ್ತಿ, ಗುಲಾಲ್ ಎರಚಿ ಬೀಳ್ಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ