ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಿಎಲ್ಡಿಇ ಫಾರ್ಮಸಿ ಮಹಾವಿದ್ಯಾಲಯ ವಿಜಯಪುರದ ಸಂಯುಕ್ತಾಶ್ರಯದಲ್ಲಿ ಇದೇ ಡಿಸೆಂಬರ್ 6 ರಂದು ವಿಜಯಪುರ ನಗರದ ಫ.ಗು.ಹಳಕಟ್ಟಿ ಸ್ಮಾರಕ ಭವನದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ (Yuva Jantosava) ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹಾಗಾದರೆ ವಿಜಯಪುರ ಜಿಲ್ಲೆಯ (Vijayapura News) ಯುವಜನೋತ್ಸವದಲ್ಲಿ ಏನೆಲ್ಲ ಸ್ಪರ್ಧೆಗಳಿರುತ್ತವೆ? ಯಾರೆಲ್ಲ ಭಾಗವಹಿಸಬಹುದು? ಎಲ್ಲ ವಿವರ ಇಲ್ಲಿದೆ ನೋಡಿ.
ಏನೆಲ್ಲ ಸ್ಪರ್ಧೆಗಳಿರುತ್ತವೆ ಇಲ್ಲಿದೆ ನೋಡಿ
ವಿಜಯಪುರ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ ಗುಂಪು ಸ್ಪರ್ಧೆಗಳು, ಏಕಾಂತ ನಾಟಕ (ಕನ್ನಡ, ಇಂಗ್ಲೀಷ್ ಮತ್ತು ಹಿಂದಿ), ಶಾಸ್ತ್ರೀಯ ಗಾಯನ ( ಕರ್ನಾಟಕ, ಹಿಂದೂಸ್ತಾನಿ ಸಂಗೀತ ), ಸಿತಾರ್, ಕೊಳಲು ವಾದನ, ವೀಣೆ, ತಬಲಾ ವಾದನ ಹಾಗೂ ಮೃದಂಗ ಕಲೆ ಸೇರಿದಂತೆ ವೈಯಕ್ತಿಕ ಸ್ಪರ್ಧೆಗಳು ಮತ್ತು ಭರತನಾಟ್ಯ, ಓಡಿಸ್ಸಿ, ಮಣಿಪುರಿ, ಕೂಚುಪುಡಿ, ಕಥಕ್, ಹಾರ್ಮೋನಿಯಂ, ಗಿಟಾರ್ ಹಾಗೂ ಆಶು ಭಾಷಣ ಸ್ಪರ್ಧೆ (ಕನ್ನಡ, ಹಿಂದಿ ಅಥವಾ ಇಂಗ್ಲೀಷ್), ಶಾಸ್ತ್ರೀಯ ನೃತ್ಯ ಸ್ಪರ್ಧೆಗಳನ್ನು ನಗರದಲ್ಲಿ ಆಯೋಜಿಸಲಾಗಿದೆ.
ಈ ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಚಿಸುವ ಕಲಾವಿದರು ಮತ್ತು ಸ್ಪರ್ಧಿಗಳು ಡಿಸೆಂಬರ್ 3 ರೊಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, ವಿಜಯಪುರ ಇವರಲ್ಲಿ ಕಲಾವಿದರು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರನ್ನು ನೊಂದಾಯಿಸಿಕೊಳ್ಳಬೇಕಿದೆ.
ಇದನ್ನೂ ಓದಿ: Vijayapura: ನಷ್ಟವಾಯ್ತೆಂದು ಎದೆಗುಂದಲಿಲ್ಲ ಈ ರೈತ, ಚೆಂಡು ಹೂವಿನಿಂದ ಗೊಬ್ಬರ!
ಕಲಾವಿದರಿಗೆ ಸಂಭಾವನೆ
ಭಾಗವಹಿಸುವ ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ, ಉಟೋಪಹಾರ ವ್ಯವಸ್ಥೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಅತ್ಯುತ್ತಮ ಕಲಾವಿದರನ್ನು ಆಯ್ಕೆ ಮಾಡಿ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ನಿಯೋಜಿಸಲಾಗುತ್ತದೆ.
ಇದನ್ನೂ ಓದಿ: Startup Success Story: ವಿಜಯಪುರದಲ್ಲಿ ರೇಷ್ಮೆ ಕ್ರಾಂತಿ! ರಾಮನಗರಕ್ಕೆ ಸಖತ್ ಪೈಪೋಟಿ
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08352-251085 ಈ ಸಂಖ್ಯೆಗೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಪ್ರಶಾಂತ ಹೂಗಾರ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ