Vijayapura Jaggery Tea: ಕುಡಿದೋನೆ ಬಲ್ಲ ವಿಜಯಪುರ ಬೆಲ್ಲದ ಚಹಾದ ಸ್ವಾದ! ವಿಡಿಯೋ ನೋಡಿ

X
ನೀವೂ ಸವಿದುನೋಡಿ!

"ನೀವೂ ಸವಿದುನೋಡಿ!"

ಸಕ್ಕರೆ ಎಷ್ಟು ಸಿಹಿಯೋ, ಆರೋಗ್ಯಕ್ಕೆ ಅಷ್ಟೇ ಅಪಾಯಕಾರಿ ಕೂಡಾ. ಹಾಗಾಗಿ ವಿಜಯಪುರದ ಮಂದಿ ಇದೀಗ ಬೆಲ್ಲ ಚಹಾದ ಮೊರೆ ಹೋಗಿದ್ದಾರೆ. ಪದವೀಧರ ಯುವಕರಿಬ್ಬರ ಈ ಬೆಲ್ಲ ಚಹಾ ಸ್ಟಾಲ್ ವಿಶೇಷತೆ ಏನು ಅನ್ನೋದನ್ನ ನೀವೇ ತಿಳ್ಕೊಳ್ಳಿ.

  • Share this:

ವಿಜಯಪುರ: ಸಾಮಾನ್ಯವಾಗಿ ನಾವೆಲ್ಲ ಸಕ್ಕರೆ ಚಹಾ ಹೀರ್ತೀವಿ.. ಆದರೆ ಇಲ್ಲೊಂದು ಕ್ಯಾಂಟೀನ್ ನಲ್ಲಿ ಬೆಲ್ಲ ಚಹಾನೇ ಫೇಮಸ್.. ಆರೋಗ್ಯಕ್ಕೂ ಅಷ್ಟೇ ಆರಾಮದಾಯಕ.. ಹಾಗಾಗಿ ವಿಜಯಪುರದ (Vijayapura) ಮಹಾತ್ಮ ಗಾಂಧಿ ರಸ್ತೆಯ ಜೋಳದ ಮಾರುಕಟ್ಟೆಯಲ್ಲಿ ಈ ಬೆಲ್ಲದ ಚಹಾ ಅಂಗಡಿ (Vijayapura Jaggery Tea) ಕಾಣಬಹುದು. ಈ ಚಹಾದ ಸ್ವಾದ ವಿಜಯಪುರದ ಜನರ ನಾಲಿಗೆ ರುಚಿಯನ್ನು ತಣಿಸುತ್ತಿದೆ. ಅದರಲ್ಲೂ ಸ್ವಲ್ಪ ಮಳೆ, ಸ್ವಲ್ಪ ಚಳಿ ಇದ್ದರೆ ನಮ್ಮ ಜೋಡಿಗೆ ಚಹಾ ಬೇಕೇಬೇಕು. ಆದರೆ ನಮಗೆ ಗೊತ್ತಿಲ್ಲದೆ ಸಕ್ಕರೆ ಚಹಾ ನಮ್ಮ ದೇಹಕ್ಕೆ ಅಪಾಯಕಾರಿಯೂ ಹೌದು. ಆದರೆ ಸಾವಯವ ಬೆಲ್ಲದ ಚಹಾ ಹಾಗಲ್ಲ, ದೇಹದಲ್ಲಿ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಒದಗಿಸುತ್ತದೆ. ಚಹಾ ಕುಡಿದ ಮೇಲೆ ಮನಸ್ಸಿಗೆ ಒಂದು ರೀತಿಯ ಉಲ್ಲಾಸ ಮತ್ತು ದೇಹಕ್ಕೆ ಆರಾಮದಾಯಕ ಅನುಭವ ನೀಡುತ್ತದೆ.


ಉನ್ನತ ವ್ಯಾಸಂಗ ಪಡೆದ ಯುವಕರ ಟೀ ಸ್ಟಾಲ್
ಇಂತಹ ಪರಿಶುದ್ಧ ಬೆಲ್ಲದ ಚಹಾ ಸಿಗುವ ಜಾಗರಿ ಟೇಲ್ಸ್ ಬೆಲ್ಲ ಚಹಾದ ಅಂಗಡಿಯನ್ನು ಯುವಕರಾದ ಎಂಬಿಎ ಪದವೀಧರ ಪ್ರದೀಪ್ ಗದ್ದಗಿಮಠ, ಎಂಟೆಕ್ ಓದಿದ ಗೌರಿಶಂಕರ್ ಚಿಕ್ಕಮಠ ನಡೆಸುತ್ತಿರುವುದು ವಿಶೇಷ.  ಈ ಯುವಕರು ಉನ್ನತ ವ್ಯಾಸಂಗ ಪಡೆದರೂ ಏಕೆ ಚಹಾ ಅಂಗಡಿ ಇಟ್ಟರು? ಪ್ರಶ್ನೆ ಮೂಡುವುದು ಸಹಜ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಲು ಇಬ್ಬರಿಗೂ ಇಷ್ಟ ಇಲ್ಲವಂತೆ. ಹೀಗಾಗಿ ಸ್ವಂತ ಉದ್ಯೋಗ ನಡೆಸಲು ಯೋಚಿಸಿದಾಗ ಹೊಳೆದದ್ದೇ ಬೆಲ್ಲದ ಚಹಾ ಅಂಗಡಿ!.


ಫುಲ್ ಪೇಮಸ್! ಸೂಪರ್ ಚಹಾ
ಇವರ ಅಂಗಡಿ ಇದೀಗ ಫುಲ್ ಫೇಮಸ್ ಆಗಿದೆ. ಬೆಲ್ಲದ ಅಂಗಡಿಯ ಸುಮಾರು 15 ಶಾಖೆಗಳೂ ಸಹ ಉತ್ತಮ ವ್ಯವಹಾರ ಕುದುರಿಸುತ್ತಿದೆ. ತರಕಾರಿ, ಜೋಳ, ಹೂವು, ಹಣ್ಣು ಖರೀದಿಸಲು ಮಾರುಕಟ್ಟೆಗೆ ಬಂದ ಜನ ಬೆಲ್ಲದ ಚಹಾ ಮಿಸ್ ಮಾಡೋದೇ ಇಲ್ಲ.

ಬೆಲ್ಲ ಚಹಾಕ್ಕೆ ಮೊರೆ
ಸಕ್ಕರೆ ಹಾಕಿದ ಚಹಾ ಕುಡಿಯೋದನ್ನ ನಿಲ್ಲಿಸಿ, ಬೆಲ್ಲದ ಚಹಾ ಸವಿಯಲು ಆರಂಭಿಸಿದ್ದಾರೆ ವಿಜಯಪುರದ ಮಂದಿ. ಸಕ್ಕರೆ ಹಾಖಿದ ಚಹಾದಿಂದ ಎದುರಾಗಬಹುದಾದ ಅಡ್ಡ ಪರಿಣಾಮದ ಬಗ್ಗೆ ಗ್ರಾಹಕರು ತಿಳಿದುಕೊಳ್ಳುತ್ತಿದ್ದಾರೆ. ಪುಣೆ ಮೂಲದ ಈ ಜಾಗರಿ ಟೇಲ್ಸ್ ಸಂಸ್ಥೆಯನ್ನು ಅಧಿಕೃತವಾಗಿ ರಾಜ್ಯದಲ್ಲಿ ಈ ಪದವೀಧರು ಯುವಕರು ಸೇರಿಕೊಂಡು ಮಾಡಿದ್ದಾರೆ.


ಪ್ರದೀಪ್ ಗದ್ದಗಿಮಠ:  8892311936
ಗೌರಿಶಂಕರ್ ಚಿಕ್ಕಮಠ : 8660938052


ಇದನ್ನೂ ಓದಿ: Belagavi Police Museum: ಬೆಳಗಾವಿ ಪೊಲೀಸ್ ಮ್ಯೂಸಿಯಂ ನೋಡಿದ್ದೀರಾ? ವಿಡಿಯೋ ನೋಡಿ!


ಎಲ್ಲೆಲ್ಲಿ ಸಿಗುತ್ತೆ ಗೊತ್ತೇ?
ವಿಜಯಪುರ ನಗರದ ಟೂರಿಸ್ಟ್ ಹೋಟೆಲ್ ಹತ್ತಿರದ ಪೋಸ್ಟ್ ಆಫೀಸ್, ಜಲನಗರ, ಸ್ಯಾಟಲೈಟ್ ಬಸ್ ನಿಲ್ದಾಣ, ಬೆಂಗಳೂರು ಬೈಪಾಸ್, ಭಾರತ ಸ್ವಿಮ್ಮಿಂಗ್ , ಪೂಲ್ನ ಹುಬ್ಬಳ್ಳಿ ರೋಡ್, ಇಟಗಿ ಪೆಟ್ರೋಲ್ ಪಂಪ್, ಅಲ್ ಅಮಿನಾ ಮೆಡಿಕಲ್ ಕಾಲೇಜ್ ಆವರಣ, ಕೃಷಿ ಉತ್ಪನ್ನ ಮಾರುಕಟ್ಟೆ ರೋಡ್, ಇಂಡಿ ಬೈ ಪಾಸ್ ಸೇರಿದಂತೆ ಜಿಲ್ಲೆಯ ತಿಕೋಟಾ, ಬಿಜ್ಜರಗಿ, ದೇವರಹಿಪ್ಪರಗಿ, ಕಣ್ಣೂರ ಸೇರಿದಂತೆ ಹಲವೆಡೆ ಚಹಾದ ಅಂಗಡಿಗಳು ಲಭ್ಯವಿವೆ.


Jaggery Tea Vijayapura
ಬೆಲ್ಲದ ಚಹಾ ಸವಿಯಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

top videos


    ಇದನ್ನೂ ಓದಿ: Vijayapura: ಬದುಕು ಬದಲಿಸಿದ ಕೊರೊನಾ! ಲಕ್ಷ ಲಕ್ಷ ಸಂಪಾದಿಸುತ್ತಿರುವ ವಿಜಯಪುರ ಯುವಕ

    ಒಟ್ಟಿನಲ್ಲಿ ವಿಜಯಪುರ ನಗರದಾದ್ಯಂತ ಇದೀಗ ಬೆಲ್ಲದ ಚಹಾ ಸುವಾಸನೆ ಬೀರುತ್ತಿದೆ. ಇದರ ಸ್ವಾದ ಹೀರಿದವನು ಮತ್ತೆ ಮತ್ತೆ ಬೆಲ್ಲದ ಚಹಾವನ್ನೇ ಹಂಬಲಿಸುತ್ತಿರೋದು ಸುಳ್ಳಲ್ಲ.


    ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ

    First published: