• Home
  • »
  • News
  • »
  • vijayapura
  • »
  • Special Ghee: ಈ ತುಪ್ಪಕ್ಕೆ ಕೆಜಿಗೆ 2,500 ರೂಪಾಯಿ! ಖರೀದಿಸುವ ಮುನ್ನ ಜೇಬು ನೋಡ್ಕೊಳ್ಳಿ

Special Ghee: ಈ ತುಪ್ಪಕ್ಕೆ ಕೆಜಿಗೆ 2,500 ರೂಪಾಯಿ! ಖರೀದಿಸುವ ಮುನ್ನ ಜೇಬು ನೋಡ್ಕೊಳ್ಳಿ

X
ಅಬ್ಬಾ! ಎಷ್ಟು ಕಾಸ್ಟ್ಲಿ ಈ ತುಪ್ಪ

"ಅಬ್ಬಾ! ಎಷ್ಟು ಕಾಸ್ಟ್ಲಿ ಈ ತುಪ್ಪ"

ಅಶ್ವಿನಿ ಅವರು ತಯಾರಿಸೋ ತುಪ್ಪವನ್ನು ತಗೆಯಲು ಯಾವುದೇ ಮಷಿನ್ ಬಳಸೋದಿಲ್ಲ. ಬದಲಾಗಿ ಸಾಂಪ್ರದಾಯಕ ವಿಧಾನವಾದ ಕಡಗೋಲಿನಿಂದ ಬೆಣ್ಣೆ ತೆಗೆಯುತ್ತಾರೆ. ಹೀಗಾಗಿ ಹೆಚ್ಚು ಸ್ವಾದವಾದ ತುಪ್ಪ ದೊರೆಯುತ್ತೆ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ತುಪ್ಪ ಬೇಕಾ ತುಪ್ಪ ಅಂತಾ ನೀವೇನಾದ್ರೂ ಇಲ್ಲಿ ಕೇಳಿದ್ರೆ ಮೊದಲು ಜೇಬು ನೋಡಿಕೊಳ್ಬೇಕು! ಏಕಂದ್ರೆ ಇದು ಅಂತಿಂತ ತುಪ್ಪವಲ್ಲ, ಅಪ್ಪಟ ಬಂಗಾರದಂತ ತುಪ್ಪ! ಬಂಗಾರವನ್ನೂ ಮೀರಿಸುವ ಬೆಲೆ ಈ ತುಪ್ಪದ್ದು. ಸಾಮಾನ್ಯ ಜನರ ಪಾಲಿಗಿದು ಬಿಸಿ ತುಪ್ಪವಾದ್ರೂ (Ghee Price) ಒಮ್ಮೆ ಖರೀದಿಸಿದರೆ ಆಗೋ ಬದಲಾವಣೆಯೇ ಬೇರೆ.  ಈ ದುಬಾರಿ ತುಪ್ಪದ (Costly Ghee) ತಯಾರಕಿ ಈ ಅಶ್ವಿನಿ ಚಂದ್ರಶೇಖರ ರೆಡ್ಡಿ. ವಿಜಯಪುರ ಜಿಲ್ಲೆಯ (Vijayapura News) ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರು. ಓದಿದ್ದು ಬಿ.ಎ. ಬಿ.ಎಡ್. ಅಶ್ವಿನಿ ಪತಿ ಚಂದ್ರಶೇಖರ್ ರೆಡ್ಡಿ ಹೆಸ್ಕಾಂ ಅಧಿಕಾರಿ. ಮದುವೆಯಾದ ಬಳಿಕ ಅಶ್ವಿನಿ ಸರ್ಕಾರಿ ನೌಕರಿ ಬೆನ್ನತ್ತದೇ ಮುಖ ಮಾಡಿದ್ದು ಕೃಷಿಯತ್ತ.


    ವಿಜಯಪುರದ ಕೃಷಿ ವಿಶ್ವವಿದ್ಯಾಲಯದಲ್ಲಿ ಹೈನುಗಾರಿಕೆ ತರಬೇತಿಯನ್ನ ಪಡೆದುಕೊಂಡ ಇವರು ಪತಿಯ ಸಹಾಯದಿಂದ ಸ್ವದೇಶಿ ತಳಿಯ ಗೀರ್ ಆಕಳನ್ನ ಗುಜರಾತ್ನಿಂದ ಖರೀದಿಸಿ ತಂದಿದ್ರು. ಹೀಗೆ ಒಂದು ಗಿರ್ ಆಕಳಿನಿಂದ ಶುರುವಾದ ಗೋ ಸಾಕಾಣಿಕೆ ಇಂದು 40 ದಾಟಿದೆ.


    ದಿನಕ್ಕೆ 40 ರಿಂದ 50 ಲೀಟರ್ ಹಾಲು ಉತ್ಪಾದನೆ
    ಈ ಆಕಳುಗಳಿಂದ ಕರೆಯೋ ಹಾಲಿನಿಂದ ಮೊಸರು, ಮಜ್ಜಿಗೆ, ತುಪ್ಪ ತಯಾರಿಸ್ತಾರೆ. ಜೊತೆಗೆ ಗೋಮೂತ್ರವನ್ನೂ ಮಾರಾಟ ಮಾಡ್ತಾರೆ. ದಿನವೊಂದಕ್ಕೆ 40 ರಿಂದ 50 ಲೀಟರ್ ಹಾಲು ಉತ್ಪಾದಿಸುವ ಇವರು, ಅದರಲ್ಲಿ ಶೇ.75 ರಷ್ಟು ತುಪ್ಪ ತೆಗೆದು ಮಾರುತ್ತಾರೆ.


    ಒಂದು ಕೆಜಿ ತುಪ್ಪದ ಬೆಲೆ 2,500 ರೂಪಾಯಿ!
    ವಿಶೇಷ ಅಂದ್ರೆ, ಇವರಲ್ಲಿ ಸಿಗುವ ಒಂದು ಕೆಜಿ ತುಪ್ಪದ ಬೆಲೆ 2500 ರೂಪಾಯಿ! ಹೌದು, ಈ ಗಿರ್ ತಳಿಯ ಆಕಳಿನ ಹಾಲು, ತುಪ್ಪಕ್ಕೆ ಸಖತ್ ಡಿಮ್ಯಾಂಡ್ ಇರೋದ್ರಿಂದಲೇ ಈ ರೇಟು. ಹಾಗಾಗಿ ಎರಡೂವರೆ ಸಾವಿರ ತೆತ್ತಾದರೂ ಹಲವು ಕಾಯಿಲೆಗಳಿಗೆ ರಾಮಬಾಣವಾದ ಈ ತುಪ್ಪ ಖರೀದಿಗೆ ಜನ ಬರ್ತಾರೆ. ಹೀಗೆ ಹೈನುಗಾರಿಕೆ ಮೂಲಕ ಅಶ್ವಿನಿ ರೆಡ್ಡಿ ಅವರು ಲಕ್ಷಾಂತರ ರೂಪಾಯಿ ಆದಾಯ ಗಳಿಸ್ತಿದ್ದಾರೆ.


    ಕಡೆಗೋಲಿನಿಂದ ಬೆಣ್ಣೆ ತೆಗೆಯುತ್ತಾರೆ!
    ಇನ್ನು ಅಶ್ವಿನಿ ಅವರು ತಯಾರಿಸೋ ತುಪ್ಪವನ್ನು ತಗೆಯಲು ಯಾವುದೇ ಮಷಿನ್ ಬಳಸೋದಿಲ್ಲ. ಬದಲಾಗಿ ಸಾಂಪ್ರದಾಯಕ ವಿಧಾನವಾದ ಕಡಗೋಲಿನಿಂದ ಬೆಣ್ಣೆ ತೆಗೆಯುತ್ತಾರೆ. ಹೀಗಾಗಿ ಹೆಚ್ಚು ಸ್ವಾದವಾದ ತುಪ್ಪ ದೊರೆಯುತ್ತೆ.


    ಹಲವು ಪ್ರಾಣಿ ಪಕ್ಷಿಗಳನ್ನೂ ಆಶ್ರಯದಾತೆ
    ಅಷ್ಟೇ ಅಲ್ದೇ, ಬಾತುಕೋಳಿ, ಟರ್ಕಿ, ಜವಾರಿ, ಗಿಣಿಯಾ ಪೌಲ್, ಗಿರಿರಾಜ ಕೋಳಿಗಳು, ಮುಧೋಳ ಶ್ವಾನ ಸೇರಿದಂತೆ ಪಾರಿವಾಳವನ್ನ ಸಾಕ್ತಿದ್ದಾರೆ. ಒಟ್ಟಿನಲ್ಲಿ ಹಲವಾರು ಜನ ಯುವಕ, ಯುವತಿಯರು ಸರ್ಕಾರಿ ನೌಕರಿ ಎಂದು ಕುಳಿತವರಿಗೆ ಅಶ್ವಿನಿ ಅವರ ಹೈನುಗಾರಿಕೆಯ ಆದಾಯ ನಿಜಕ್ಕೂ ಹೆಮ್ಮೆಪಡುವಂತೆ ಮಾಡ್ತಿದೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು