Vijayapura: ಕೈಬೀಸಿ ಕರೆಯುವ ಪುಟ್ಟಪುಟ್ಟ ಜಲಪಾತಗಳು! ವೀಡಿಯೋ ನೋಡಿ

ಮಾನ್ಸೂನ್ ಆರಂಭವಾಗುತ್ತಿದ್ದಂತೆಯೇ ಮಹಾರಾಷ್ಟ್ರದ ಸತಾರಾ ರಸ್ತೆ ಪ್ರೇಕ್ಷಣೀಯ ಸ್ಥಳವಾಗಿ ಬದಲಾಗುತ್ತದೆ. ಈ ರಸ್ತೆಯಲ್ಲಿ ಕಾಣಸಿಗುವ ಫಾಲ್ಸ್ ಗಳು ಒಂದಕ್ಕಿಂತ ಒಂದು ಪ್ರವಾಸಿಗರ ಮನಸೂರೆಗೊಳಿಸುತ್ತದೆ.

ಜಲಲ ಜಲಧಾರೆ

"ಜಲಲ ಜಲಧಾರೆ"

 • Share this:
  ವಿಜಯಪುರ: ನೀವು ಮಹಾರಾಷ್ಟ್ರ ಪ್ರವಾಸ ಕೈಗೊಂಡರೆ ಅಲ್ಲಿಯ ವಿವಿಧ ಜಲಪಾತಗಳನ್ನು ತಪ್ಪಿಸದೇ ವೀಕ್ಷಿಸಬೇಕು. ಸಾತಾರ ಜಿಲ್ಲೆಯಲ್ಲಿನ ಮಹಾಬಲೇಶ್ವರ ಬಳಿಯ ಜಲಪಾತಗಳನ್ನ ನೋಡಲೇಬೇಕು. ಐತಿಹಾಸಿಕ ಪ್ರಸಿದ್ಧ ಪ್ರವಾಸಿ ಸ್ಥಳವಾಗಿರುವ ಮಹಾಬಲೇಶ್ವರದ (Mahabaleshwar) ರಸ್ತೆಯಲ್ಲಿರುವ ಜಲಪಾತಗಳು ಒಂದಕ್ಕಿಂತ ಒಂದು ಸುಂದರವಾಗಿವೆ. ಮಳೆಗಾಲದಲ್ಲಿ ಪರಿಸರ ಪ್ರಿಯರು ಸಾತಾರದಿಂದ ಮಹಾಬಲೇಶ್ವರದತ್ತ ಪ್ರಯಾಣ ಆರಂಭಿಸಿದರೆ ಸಾಲು ಸಾಲು ಗುಡ್ಡ ಬೆಟ್ಟಗಳ ಸಾಲು ನಿಮ್ಮನ್ನ ಸ್ವಾಗತಿಸುತ್ತವೆ. ಹಾಗೆ ಸಾಗಿ ಹೊರಟರೆ ನಿಮಗೆ ಹತ್ತಾರು ಜಲಪಾತಗಳು ಗೋಚರವಾಗುತ್ತವೆ. ರಸ್ತೆಯುದ್ದಕ್ಕೂ ಬರುವ ಮಿನಿ ಜಲಪಾತಗಳನ್ನು ಕಣ್ತುಂಬಿಸಿಕೊಳ್ಳಬಹುದುದು.

  ಮಳೆಗಾಲದಲ್ಲಿ ಇಲ್ಲಿ ಸಾಗಿ ಬನ್ನಿ
  ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಭಾರೀ ಮಳೆಯಾಗುವ ಕಾರಣ ಕಡಿದಾದ ಬೆಟ್ಟಗಳು ಕುಸಿಯುವ ಸಂಭವವಿದೆ. ಹೀಗಾಗಿ ಕೊಂಚ ಎಚ್ಚರವನ್ನೂ ವಹಿಸಬೇಕಾಗುತ್ತದೆ.

  ಬೆಟ್ಟಗಳ ತಪ್ಪಲಲ್ಲಿ ಮಿನಿ ಜಲಪಾತಗಳು
  ಈ ಮಿನಿ ಜಲಪಾತಗಳು ಸುಮಾರು ಮೂರ್ನಾಲ್ಕು ತಿಂಗಳುಗಳ ಕಾಲ ಜೀವಂತವಾಗಿರುತ್ತವೆ. ಈ ವರ್ಷ ಹೆಚ್ಚು ಮಳೆ ಇರುವುದರಿಂದ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಜೂನ್ ತಿಂಗಳಿನಿಂದ ಈ ಜಲಪಾತಗಳಿಗೆ ಜೀವಕಳೆ ಬಂದಿದೆ. ಆಗಸ್ಟ್ ತಿಂಗಳ ಅಂತ್ಯದವರೆಗೂ ಚಂದದ ಅನುಭವ ನೀಡುತ್ತವೆ ಈ ಪುಟ್ಟ ಪುಟ್ಟ ಜಲಪಾತಗಳು. ಪರಿಸರದ ಈ ಶುಲ್ಕಗಳನ್ನು ಕಣ್ತುಂಬಿಕೊಳ್ಳಲು ಯಾವುದೇ ತರಹದ ಶುಲ್ಕ ಪಾವತಿಸಬೇಕಿಲ್ಲ.

  ದಾರಿಯಲ್ಲಿ ಹಲವು ತಿಂಡಿ ಕುರುಕಲು!
  ದಾರಿಯಲ್ಲಿ ಇಲ್ಲಿ ಕುರುಕಲು ತಿಂಡಿ, ಚಹಾ, ಕಾಫೀ, ಪಾಪ್ ಕಾರ್ನ್, ಮೆಕ್ಕೆಜೋಳ, ಶೇಂಗಾ, ತಂಪುಪಾನೀಯ ಸೇರಿ ಹಲವಾರು ತಿಂಡಿಗಳು ನಿಮಗೆ ಸವಿಯಲು ಸಿಗುತ್ತವೆ. ಈ ಜಲಪಾತಗಳತ್ತ ನೀವು ಪ್ರಯಾಣ ಮಾಡುವ ರಸ್ತೆಯಲ್ಲಿ ನಿಮಗೆ ಸಾಕಷ್ಟು ಹೊಟೇಲ್, ರೇಸ್ಟೋರೆಂಟ್ ಗಳು ಕಾಣಸಿಗುತ್ತವೆ.

  Shri Panchganga Mandir, Satara Rd, Mahabaleshwar,
  ಜಲಪಾತಗಳ ದಾರಿ! (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಇದನ್ನೂ ಓದಿ: Krishna River Origin Video: ಕೃಷ್ಣಾ ನದಿ ಉಗಮದ ಅಪರೂಪದ ವಿಡಿಯೋ ಇಲ್ಲಿದೆ, ಕಣ್ತುಂಬಿಸಿಕೊಳ್ಳಿ!

  ಸೆಲ್ಫಿಗೆ ಹೇಳಿಟ್ಟ ಸ್ಪಾಟ್
  ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನು ತಮ್ಮ ನೆನಪಿಗಾಗಿ ಹಲವಾರು ಸ್ಮರಣೀಯ ಚಿತ್ರಗಳನ್ನ ಸೆರೆ ಹಿಡಿಯಬಹುದು. ಆದ್ದರಿಂದ ನೀವು ಪ್ರವಾಸದ ಪ್ಲ್ಯಾನ್ ಮಾಡುವ ಮುನ್ನ ಕ್ಯಾಮೆರಾವನ್ನು ಎತ್ತಿಕೊಳ್ಳುವುದನ್ನ ಮರೆಯಬೇಡಿ.

  ಇದನ್ನೂ ಓದಿ:Belagavi: ಆಸ್ಪತ್ರೆ ಎಂದರೆ ಮಕ್ಕಳು ಖುಷ್! ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಏನಿದು ಜಾದೂ?

  ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಹಲವು ಭಾಗಗಳಿಂದ ಮೂರ್ನಾಲ್ಕು ದಿನ ಪ್ರವಾಸಕ್ಕೆಂದು ಬರುತ್ತಾರೆ. ನೀವು ಇಲ್ಲಿಗೆ ಭೇಟಿ ನೀಡುವುದಾದರೆ ಸ್ವಂತ ವಾಹನದಲ್ಲಿಯೇ ಬರಬೇಕು. ಇಲ್ಲಿಗೆ ಬಸ್ ಸೌಲಭ್ಯ ತೀರಾ ಕಡಿಮೆ. ಮತ್ತು ಪರಿಣತಿ ಹೊಂದಿದ ಚಾಲಕರಿದ್ದರೆ ಮಾತ್ರ ಈ ರಸ್ತೆಗಳಲ್ಲಿ ಪ್ರಯಾಣಿಸುವುದು ಸೂಕ್ತ. ಯಾಕೆಂದರೆ ಚಾಲಕ ಸ್ವಲ್ಪ ಯಾಮಾರಿದ್ರು ನೇರವಾಗಿ ಪ್ರಪಾತಕ್ಕೆ ಹೋಗೋದಂತು ಗ್ಯಾರಂಟಿ. ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿನ ಜಲಪಾತ, ದೇವಸ್ಥಾನವನ್ನ ನೋಡಿದರೆ ಏನನ್ನೋ ಜಯಿಸಿದಂತೆ, ನೋಡದಿದ್ದರೆ ಏನನ್ನೋ ಕಳೆದುಕೊಂಡಂತಾಗುತ್ತದೆ.

  ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ
  Published by:guruganesh bhat
  First published: