• Home
  • »
  • News
  • »
  • vijayapura
  • »
  • Vijayapura: ಹುಲ್ಲುಲಗೋ..ಸಲಾಂಭ್ರಿಗೋ! ಉತ್ತರ ಕರ್ನಾಟಕದಲ್ಲಿ ಚರಗ ಹಬ್ಬದ ಸ್ಪೆಷಲ್ ಇದು

Vijayapura: ಹುಲ್ಲುಲಗೋ..ಸಲಾಂಭ್ರಿಗೋ! ಉತ್ತರ ಕರ್ನಾಟಕದಲ್ಲಿ ಚರಗ ಹಬ್ಬದ ಸ್ಪೆಷಲ್ ಇದು

ಇಲ್ಲಿದೆ ನೋಡಿ ವಿಡಿಯೋ

"ಇಲ್ಲಿದೆ ನೋಡಿ ವಿಡಿಯೋ"

ಬಳಿಕ ಪಾಂಡವರ ದ್ಯೋತಕವಾಗಿ 5 ಕಲ್ಲುಗಳನ್ನಿರಿಸಿ ಪೂಜೆ ಸಲ್ಲಿಸ್ತಾರೆ. ಹೊಲದ ನಾಲ್ಕು ಸುತ್ತ ಆಹಾರ ಚೆಲ್ಲುವಾಗ ಮುಂದೆ ಒಬ್ರು ನೀರನ್ನು ಸಿಂಪಡಿ ಹುಲ್ಲುಲಗೋ ಅಂತ ಕೂಗ್ತಾರೆ. ಆವಾಗ್ಲೇ ಹಿಂದಿನಿಂದ ಇಬ್ರು ಸಲಾಂಭ್ರಿಗೋ ಎಂದು ಆಹಾರ ಎಸೀತಾರೆ.

  • Share this:

    ವಿಜಯಪುರ: ಸಿಂಗಾರಗೊಂಡ ಎತ್ತಿನಗಾಡಿ. ಎಲ್ಲಿಗೋ ಹೊರಟಂತಿರೋ ಪಯಣ. ಹೊಲದ ಬದಿ ಮನೆ ಮಂದಿ, ಸಂಬಂಧಿಕರೆಲ್ಲ ಊಟ ಮಾಡೋ ಸಂಭ್ರಮ.. ಇದನ್ನೆಲ್ಲ ನೋಡ್ತಾ ಇವ್ರೇನಾದ್ರೂ ಪ್ರವಾಸಕ್ಕೆ ಹೊರಟಿದ್ದೀರಾ ಅಂತ ನೀವೇನಾದರೂ ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪು. ಈ ಎಲ್ಲ ಚೆಂದದ ದೃಶ್ಯ ಕಂಡು ಬಂದಿದ್ದು ವಿಜಯಪುರದ ಸೀಗೆ ಹುಣ್ಣಿಮೆ (Seege Hunnime)  ಚರಗ ಹಬ್ಬದಲ್ಲಿ. ಇಂತಹ ವಿಶಿಷ್ಟ ಆಚರಣೆಗೂ ಒಂದು ವಿಶೇಷತೆಯಿದೆ. ಅನ್ನ ನೀಡಿ ಸಾಕಿ ಸಲಹುವ ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸೋದೆ ಈ ಹಬ್ಬದ ಪ್ರಮುಖ ಉದ್ದೇಶ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ (North Karnataka Villages)  ಹಿಂದಿನ ಕಾಲದಿಂದ್ಲೂ ಈ ಸಂಪ್ರದಾಯವನ್ನ ರೈತರು ಆಚರಿಸ್ತಿದ್ದಾರೆ. ಬೆಳೆ ಬೆಳೆದು ನಿಂತಿರುವ ಸಂದರ್ಭದಲ್ಲಿ ಭೂಮಿಗೆ ಪೂಜೆ (Bhumi Pooja) ಮಾಡಿ ವಂದಿಸಲಾಗ್ತದೆ. ಇದನ್ನೇ ಚರಗ ಹಬ್ಬ ಎಂದು ಕರೆಯಲಾಗ್ತದೆ.


    ಚರಗ ಹಬ್ಬ ಅಂದ್ರೆ ಭೂತಾಯಿಗೆ ನೈವೇದ್ಯ ಅರ್ಪಿಸೋದಾಗಿದೆ. ಆ ದಿನ ಮನೆ ಮಂದಿ, ಕುಟುಂಬಿಕರು, ಸ್ನೇಹಿತರೆಲ್ಲ ತಮ್ಮ ಹೊಲದತ್ತ ತೆರಳುತ್ತಾರೆ. ಅಲ್ಲಿಗೆ ಹೋಗಿ ನಳನಳಿಸುತ್ತಿರುವ ಬೆಳೆಯ ನಾಲ್ಕು ಬದಿಗಳಿಗೂ ವಿವಿಧ ಖಾದ್ಯಗಳನ್ನ ಚೆಲ್ಲಲಾಗ್ತದೆ.


    ಇದನ್ನೂ ಓದಿ: Vijayapura: ವಿಜಯಪುರದ ಈ ಗಾರ್ಡ​ನ್​ಗೆ ಬಂದ್ರೆ ನೀವು ನೀವಾಗಿರಲ್ಲ!


    ಪಾಂಡವರ ದ್ಯೋತಕವಾಗಿ 5 ಕಲ್ಲಿಗೆ ಪೂಜೆ
    ಬಳಿಕ ಪಾಂಡವರ ದ್ಯೋತಕವಾಗಿ 5 ಕಲ್ಲುಗಳನ್ನಿರಿಸಿ ಪೂಜೆ ಸಲ್ಲಿಸ್ತಾರೆ. ಹೊಲದ ನಾಲ್ಕು ಸುತ್ತ ಆಹಾರ ಚೆಲ್ಲುವಾಗ ಮುಂದೆ ಒಬ್ರು ನೀರನ್ನು ಸಿಂಪಡಿ ಹುಲ್ಲುಲಗೋ ಅಂತ ಕೂಗ್ತಾರೆ. ಆವಾಗ್ಲೇ ಹಿಂದಿನಿಂದ ಇಬ್ರು ಸಲಾಂಭ್ರಿಗೋ ಎಂದು ಆಹಾರ ಎಸೀತಾರೆ.


    ಇದನ್ನೂ ಓದಿ: Betel Leaf Farming: ವೀಳ್ಯದೆಲೆಯಿಂದ ಕೈತುಂಬಾ ಲಾಭ! ಇದು ವಿಜಯಪುರ ರೈತರ ಸಕ್ಸಸ್ ಸ್ಟೋರಿ


    ಹೊಲದಲ್ಲೇ ಕುಳಿತು ರುಚಿರುಚಿ ಊಟ
    ಹೊಲದಲ್ಲಿರುವ ಬೆಳೆಯ ಮಧ್ಯೆ ಇರುವ ಬನ್ನಿ ಮರಕ್ಕೆ ಕುಟುಂಬದ ಹಿರಿಯರು ಪೂಜೆ ಸಲ್ಲಿಸುತ್ತಾರೆ, ಬಳಿಕ ಮೊದಲೇ ಮನೆಯ ಹೆಂಗಸರು ಮಾಡಿ ತಂದ ರುಚಿ ರುಚಿಯಾದ ಆಹಾರವನ್ನ ಹೊಲದ ಪಕ್ಕದಲ್ಲೇ ಕೂತು ಸವಿಯುತ್ತಾರೆ. ಸೀಗೆ ಹುಣ್ಣಿಮೆ ಹಬ್ಬದ ಸಡಗರ ಸಂಭ್ರಮಕ್ಕೆ ಈ ಆಚರಣೆಗಳು ಮೆರಗು ನೀಡಿವೆ.


    ವರದಿ: ಪ್ರಶಾಂತ ಹೂಗಾರ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: