Vijayapura: ಉತ್ತರ ಕರ್ನಾಟಕದಲ್ಲಿ ಈ ಪಾಸಿಟಿವ್ ವಿಷಯಕ್ಕೆ ವಿಜಯಪುರವೇ ಫಸ್ಟ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಂಚೆ ಕಚೇರಿಯಲ್ಲಿರುವ ಬ್ಯಾಂಕಿಂಗ್ ಸೌಲಭ್ಯಗಳನ್ನ ಜನರಿಗೆ ತಲುಪಿಸುವ ಅಂಚೆ ಇಲಾಖೆಯ ಪ್ರಯತ್ನ ವಿಜಯಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಕಾರಗೊಂಡಿದೆ.

  • News18 Kannada
  • 3-MIN READ
  • Last Updated :
  • Bijapur, India
  • Share this:

    ವಿಜಯಪುರ: ಲಗು ಬಗೆಯ ಚಟುವಟಿಕೆ, ಥಂಬ್, ಸ್ಕ್ಯಾನ್ ಮಾಡುವಲ್ಲಿ ನಿರತರಾಗಿರುವ ಸಿಬ್ಬಂದಿ. ಅಂಚೆ ಇಲಾಖೆ ತುಂಬಾ ಖಾತೆ ತೆರೆ (Indian Post) ತೆರೆಯಲು ಪ್ರೋತ್ಸಾಹ. ಗುಮ್ಮಟ ನಗರಿಯಲ್ಲಿ (Vijayapura News) ದಾಖಲೆ ಬರೆಯಿತು ಅಂಚೆ ಇಲಾಖೆ!


    ದಾಖಲೆ ಬರೆದ ಉಳಿತಾಯ ಖಾತೆ!
    ದೇಶದಾದ್ಯಂತ ಭಾರತೀಯ ಅಂಚೆ ಇಲಾಖೆಯೆ ಹಮ್ಮಿಕೊಂಡಿದ್ದ ಒಂದೇ ದಿನದಲ್ಲಿ ಒಂದು ಕೋಟಿ ಖಾತೆ ಪ್ರಾರಂಭಿಸುವ ಅಭಿಯಾನದಲ್ಲಿ ವಿಜಯಪುರ ಅಂಚೆ ವಿಭಾಗವು ಉತ್ತರ ಕರ್ನಾಟಕ ವಲಯದಲ್ಲಿ ಅತೀ ಹೆಚ್ಚು ಉಳಿತಾಯ ಖಾತೆ ತೆರೆದಿದೆ. 26,612 ಖಾತೆಗಳನ್ನು ತೆರೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿದೆ.


    ಗ್ರಾಮೀಣ ಜನರ ಸ್ಪಂದನೆ
    ವಿಜಯಪುರ ಜಿಲ್ಲೆಯ ನಿಡಗುಂದಿ, ಕೊಲ್ಹಾರ, ಬಸವನಬಾಗೇವಾಡಿ, ಮುದ್ದೇಬಿಹಾಳ, ತಿಕೋಟಾ, ಬಬಲೇಶ್ವರ, ಇಂಡಿ ಈ ತಾಲೂಕಿನ ಎಲ್ಲ ಅಂಚೆ ಕಚೇರಿಯಲ್ಲಿ ಸಾವಿರಾರು ಜನ ಗ್ರಾಮಸ್ಥರು ಸಮೀಪದ ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆಯನ್ನ ತೆಗೆದಿದ್ದಾರೆ. ಆರ್ ಡಿ, ಟಿಡಿ, ಎಂಐಎಸ್, ಪಿಪಿಎಫ್, ಸುಕನ್ಯಾ ಸಮೃದ್ಧಿ, ಕಿಸಾನ್ ವಿಕಾಸ್ ಪತ್ರ ಹೀಗೆ ಹತ್ತಾರು ಉಳಿತಾಯ ಯೋಜನೆಗಳಲ್ಲಿ ಸಾರ್ವಜನಿಕರು ಖಾತೆ ತೆರೆದರು.




    ಇದನ್ನೂ ಓದಿ: Vijayapura: ಏಳೂರ ಒಡೆಯ ಯಲಗೂರೇಶ್ವರನ ಪ್ರಸಾದಕ್ಕಾಗಿ ಸುಡು ಬಿಸಿಲನ್ನೂ ಲೆಕ್ಕಿಸದ ಭಕ್ತರು!


    ವಿಜಯಪುರವೇ ನಂ.1
    ಮಕ್ಕಳಿಂದ ಹಿಡಿದು ಮಹಿಳೆಯರು, ಹಿರಿಯರು ಕೂಡಾ ತಮಗೆ ಸೂಕ್ತವೆನಿಸುವ ಖಾತೆ ತೆರೆದು ಪಾಸ್​ಬುಕ್​ ಪಡೆದರು. ಬಾಗಲಕೋಟೆ ಹಾಗೂ ಬೆಳಗಾವಿ ವಿಭಾಗಗಳು ವಿಜಯಪುರದ ನಂತರದ ಸ್ಥಾನ ಪಡೆದವು. ವಿಶೇಷವಾಗಿ ಗ್ರಾಮೀಣ ಭಾಗದ ಮಂದಿ ವಿಶೇಷ ಆಸಕ್ತಿಯಿಂದ ಖಾತೆಗಳನ್ನ ತೆರೆದರು.


    ಇದನ್ನೂ ಓದಿ: Vijayapura: ಇಂಡಿಗೆ ಬಂತು ರಾಷ್ಟ್ರೀಯ ಹೆದ್ದಾರಿ, ಎಲ್ಲಿಂದ ಎಲ್ಲಿಗೆ ಸಂಪರ್ಕ ಕಲ್ಪಿಸುತ್ತೆ ಈ ನ್ಯಾಷನಲ್ ಹೈವೇ?


    ಒಟ್ಟಿನಲ್ಲಿ ಅಂಚೆ ಕಚೇರಿಯಲ್ಲಿರುವ ಬ್ಯಾಂಕಿಂಗ್ ಸೌಲಭ್ಯಗಳನ್ನ ಜನರಿಗೆ ತಲುಪಿಸುವ ಅಂಚೆ ಇಲಾಖೆಯ ಪ್ರಯತ್ನ ವಿಜಯಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಕಾರಗೊಂಡಿದೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: