• Home
 • »
 • News
 • »
 • vijayapura
 • »
 • Vijayapura: ವಿಜಯಪುರದ ಈ ಗಾರ್ಡ​ನ್​ಗೆ ಬಂದ್ರೆ ನೀವು ನೀವಾಗಿರಲ್ಲ!

Vijayapura: ವಿಜಯಪುರದ ಈ ಗಾರ್ಡ​ನ್​ಗೆ ಬಂದ್ರೆ ನೀವು ನೀವಾಗಿರಲ್ಲ!

X
ಇಲ್ಲಿ ಉದ್ಯಾನವನದ ಸೌಂದರ್ಯ ನೋಡಿ

"ಇಲ್ಲಿ ಉದ್ಯಾನವನದ ಸೌಂದರ್ಯ ನೋಡಿ"

ಬಸವ ಉದ್ಯಾನವನದ ಮಹಾದ್ವಾರವೇ ನಿಮ್ಮನ್ನ ಪ್ರೀತಿಯಿಂದ ಸ್ವಾಗತಿಸುತ್ತದೆ. ಜೊತೆಗೆ ಉದ್ಯಾನದ ತುಂಬೆಲ್ಲ ಅರಳಿ ನಿಂತಿರುವ ಅಷ್ಟೂ ಹೂವುಗಳು ಮನಸ್ಸಿಗೆ ಮುದ ನೀಡುತ್ತವೆ. 

 • Share this:

  ವಿಜಯಪುರ: ಕಲರ್ ಕಲರ್ ದಾಸವಾಳ, ಗುಲಾಬಿ ಹೀಗೆ ನಾನಾ ಅಲಂಕಾರಿಕ ಹೂವುಗಳು, ದೂರದಿಂದಲೇ ಚಿತ್ತಾಕರ್ಷಕವಾಗಿ ಕೈ ಬೀಸಿ ಕರೆಯೋ ಈಶ್ವರ.. ಮನಸ್ಸಿನ ಬೇಗುದಿಯನ್ನ ದೂರ ಮಾಡಲು ಹೇಳಿಟ್ಟಂತಹ ಜಾಗವಿದು. ಇದುವೇ ಜಿಲ್ಲೆಯ ವಿಜಯಪುರ ಜಿಲ್ಲೆಯ (Vijayapura) ನಿಡಗುಂದಿ ಪಟ್ಟಣದ ಹೊರವಲಯದಲ್ಲಿರುವ ಬಸವ ಉದ್ಯಾನವನ. ಈ ಉದ್ಯಾನವನದಲ್ಲಿರುವ ಸುಮಾರು 35 ಅಡಿ ಎತ್ತರದ ಶಿವನ ಮೂರ್ತಿ (Shiva Statue) ಎಲ್ಲರನ್ನು ಒಂದು ಕ್ಷಣ ಮಂತ್ರ ಮುಗ್ಧನನ್ನಾಗಿಸುತ್ತದೆ. ಶಾಂತಚಿತ್ತನಾಗಿ ಧ್ಯಾನಸ್ಥನಾದ ಶಿವನು ತನ್ನ ಭಕ್ತರ ಪ್ರೀತಿಗೆ ಪಾತ್ರನಾಗುತ್ತಾನೆ. ಶಿವ ತಾನೆಷ್ಟೇ ಶಾಂತಚಿತ್ತನಾದರೂ ತಾನು ಹಾಸಿಕೊಂಡಿರುವ ಹುಲಿ ಚರ್ಮದ ಹೊದಿಕೆಯಂತೂ ಉಗ್ರ ರೂಪಿಯಂತಿದೆ.


  ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ 2.30 ಕೋಟಿ ರೂಪಾಯಿ ವೆಚ್ಚದಲ್ಲಿ 6.21 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಈ ಉದ್ಯಾನವಿದೆ. ನಿಡಗುಂದಿ ಪಟ್ಟಣದಿಂದ ಆಲಮಟ್ಟಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಈ ಉದ್ಯಾನವನವನ್ನ ನೀವು ಕಾಣಬಹುದು.


  ಪ್ರೀತಿಯ ಸ್ವಾಗತ ಸಿಗೋದು ಪಕ್ಕಾ!
  ಬಸವ ಉದ್ಯಾನವನದ ಮಹಾದ್ವಾರವೇ ನಿಮ್ಮನ್ನ ಪ್ರೀತಿಯಿಂದ ಸ್ವಾಗತಿಸುತ್ತದೆ. ಜೊತೆಗೆ ಉದ್ಯಾನದ ತುಂಬೆಲ್ಲ ಅರಳಿ ನಿಂತಿರುವ ಅಷ್ಟೂ ಹೂವುಗಳು ಮನಸ್ಸಿಗೆ ಮುದ ನೀಡುತ್ತವೆ.


  ಇದನ್ನೂ ಓದಿ: Betel Leaf Farming: ವೀಳ್ಯದೆಲೆಯಿಂದ ಕೈತುಂಬಾ ಲಾಭ! ಇದು ವಿಜಯಪುರ ರೈತರ ಸಕ್ಸಸ್ ಸ್ಟೋರಿ


  ಅಧಿಕಾರಿಗಳ ಸಾಥ್
  ನಿಡಗುಂದಿ ಪಟ್ಟಣದಲ್ಲಿ ಉದ್ಯಾನವನ ಇಲ್ಲದ್ದನ್ನ ಮನಗಂಡ ಅಧಿಕಾರಿಗಳು, ಜನಪ್ರತಿನಿಧಿಗಳ ಆಸಕ್ತಿ ಮೇರೆಗೆ ಈ ಉದ್ಯಾನ ಮೈದಳೆದಿದೆ. ಇಲ್ಲಿನ ಜನರಿಗೆ ನಿತ್ಯ ವಾಕಿಂಗ್ ಸಮಸ್ಯೆಯಾಗುತ್ತಿತ್ತು ಹೀಗಾಗಿ KBJNL ಅಧಿಕಾರಿಗಳು ವಾಕಿಂಗ್ ಪಾಥ್ ಕೂಡ ನಿರ್ಮಿಸಲು ಮುಂದಾಗಿದ್ದಾರೆ.


  ಇದನ್ನೂ ಓದಿ: Vijayapura: ಇದು ಪೊಲೀಸ್ ಸ್ಟೇಷನ್ ಅಂದ್ರೆ ನೀವು ನಂಬೋದೇ ಇಲ್ಲ!


  ಉದ್ಯಾನ ಓಪನ್ ಇರೋ ಸಮಯದ ವಿವರ ಇಲ್ಲಿದೆ
  ಈ ಉದ್ಯಾನವನವು ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಆರು ಗಂಟೆವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಒಟ್ಟಿನಲ್ಲಿ ಬಸವ ಉದ್ಯಾನವನ ದಿನವಿಡೀ ಕೆಲಸದ ಜಂಜಾಟದಲ್ಲಿ ಬ್ಯುಸಿ ಇದ್ದವರಿಗೆ ಸಾಯಂಕಾಲವಾಗುತ್ತಲೇ ಶಿವನ ಮುಂದೆ ಧ್ಯಾನಸ್ಥನಾಗಲು ಅವಕಾಶ ಕೊಡ್ತಿದೆ..


  ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: