Vijayapura: ವಿದ್ಯಾರ್ಥಿಗಳೇ, ಕೊರೊನಾದಿಂದ ಆದ ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಅವಕಾಶ!

ಜೂನ್ 23 ಮತ್ತು ಜೂನ್ 24ರಂದು ಬೆಳಗ್ಗೆ 9.30ಕ್ಕೆ ವಿವಿಧ ಪ್ರದೇಶಗಳಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆ ನಡೆಯಲಿರುವ ಸ್ಥಳ ಮತ್ತು ಕ್ರೀಡೆಗಳ ವಿವರ ಇಲ್ಲಿದೆ ನೋಡಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ವಿಜಯಪುರ : 2022-23 ನೇ ಸಾಲಿಗೆ 8ನೇ ತರಗತಿಗೆ ಹಾಗೂ ಪ್ರಥಮ ಪಿಯುಸಿಗೆ (1st PUC Admission) ಪ್ರವೇಶ ನೀಡುವ ಸಂಬಂಧ ಕೋವಿಡ್-19 ಹಿನ್ನೆಲೆಯಲ್ಲಿ  (Covid 19) ಅವಕಾಶ ವಂಚಿತ ಮತ್ತು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಕ್ರೀಡಾಪಟುಗಳಿಗೆ ರಾಜ್ಯದ ವಿವಿಧ ಕ್ರೀಡಾ ವಸತಿ ಶಾಲೆ/ನಿಲಯಗಳಿಗೆ (Sports Hostel) ವಿಶೇಷ ಆಯ್ಕೆ ಪ್ರಕ್ರಿಯೆ ಜರುಗಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಜೂನ್ 23 ಮತ್ತು ಜೂನ್ 24ರಂದು ಬೆಳಗ್ಗೆ 9.30ಕ್ಕೆ ವಿವಿಧ ಪ್ರದೇಶಗಳಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆ ನಡೆಯಲಿರುವ ಸ್ಥಳ ಮತ್ತು ಕ್ರೀಡೆಗಳ ವಿವರ ಇಲ್ಲಿದೆ ನೋಡಿ.  ಕ್ರೀಡೆಯ ಹೆಸರುಆಯ್ಕೆ ನಡೆಯಲಿರುವ ಸ್ಥಳ
  ಅಥ್ಲೆಟಿಕ್ಸ್ ಮತ್ತು ಫುಟ್​ಬಾಲ್ಸರ್ಕಾರಿ ಕ್ರೀಡಾ ಪ್ರೌಢಶಾಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿದ್ಯಾನಗರ
  ಸೈಕ್ಲಿಂಗ್ಡಾ.ಬಿ.ಆರ್.ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ
  ಜಿಮ್ನಾಸ್ಟಿಕ್ಮಹಾತ್ಮಗಾಂಧಿ ಕ್ರೀಡಾಂಗಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಮಕೂರು
  ಹಾಕಿಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣ, ಬೆಂಗಳೂರು
  ಕುಸ್ತಿ ಮತ್ತು ಜುಡೋನೆಹರೂ ಕ್ರೀಡಾಂಗಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ


  ಫೆನ್ಸಿಂಗ್/ಆರ್ಚರಿ

  ವಾಲಿಬಾಲ್ ಬಾಸ್ಕೆಟಬಾಲ್
  ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು

  ಸರ್ಕಾರಿ ಕ್ರೀಡಾ ಪ್ರೌಢಶಾಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿದ್ಯಾನಗರ ಇಲ್ಲಿ ಅಥ್ಲೆಟಿಕ್ಸ್ ಮತ್ತು ಫುಟ್​ಬಾಲ್. ಡಾ.ಬಿ.ಆರ್.ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಇಲ್ಲಿ ಸೈಕ್ಲಿಂಗ್., ಮಹಾತ್ಮಗಾಂಧಿ ಕ್ರೀಡಾಂಗಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಮಕೂರು ಇಲ್ಲಿ ಜಿಮ್ನಾಸ್ಟಿಕ್., ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣ, ಬೆಂಗಳೂರು ಇಲ್ಲಿ ಹಾಕಿ, ನೆಹರೂ ಕ್ರೀಡಾಂಗಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ಇಲ್ಲಿ ಕುಸ್ತಿ ಮತ್ತು ಜುಡೋ., ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು ಇಲ್ಲಿ ಫೆನ್ಸಿಂಗ್/ಆರ್ಚರಿ, ವಾಲಿಬಾಲ್ ಬಾಸ್ಕೆಟಬಾಲ್ ಆಯ್ಕೆ ಪ್ರಕ್ರಿಯೆ ಎರಡು ದಿನಗಳವರೆಗೆ ನಡೆಯಲಿದೆ.

  ಇದನ್ನೂ ಓದಿ: Almatti: ಆಲಮಟ್ಟಿಯಲ್ಲಿ ಮಾಯಾಲೋಕ! ಇಲ್ಲಿದೆ ನೋಡಿ ವಿಡಿಯೋ

  ಆಸಕ್ತಿವುಳ್ಳ ಕ್ರೀಡಾಪಟುಗಳು ಎರಡು ದಿನಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ತಿಳಿಸಲಾಗಿದೆ.

  ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಮೊಬೈಲ್ ಸಂಖ್ಯೆ 9449070816/9480886555/9448234883 ಸಂಪರ್ಕಿಸಬಹುದಾಗಿದೆ.

  ಅಥವಾ ಸಂಪರ್ಕಿಸಬಹುದಾದ ವಿಳಾಸ
  ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜಯಪುರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಇದನ್ನೂ ಓದಿ: Madhavananda Prabhu: ಬ್ರಿಟೀಷರ ಎದೆ ನಡುಗಿಸಿದ್ದ ವಿಜಯಪುರದ ಸಂತ! 27 ಬಾರಿ ಜೈಲುವಾಸ ಅನುಭವಿದ್ದ ಮಾಧವಾನಂದ ಪ್ರಭು

  ರಾಜ್ಯ ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಯುವ ಕ್ರೀಡಾಪಟುಗಳಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದಿಂದ ಶಿಕ್ಷಣದ ಜೊತೆಗೆ ಉಚಿತ ಊಟ ಮತ್ತು ವಸತಿ ಇರುತ್ತದೆ ಇದರೆ ಪ್ರಯೋಜನವನ್ನು ರಾಜ್ಯದ ಯುವ ಕ್ರೀಡಾಪಟುಗಳಿಗೆ ದೊರಕಲೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಾಹಿತಿ ನೀಡಿದೆ.

  ವರದಿ – ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
  Published by:guruganesh bhat
  First published: