ವಿಜಯಪುರ: ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಅದಾಲತ್ ನಡೆಸುವ ಕುರಿತು, ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರಿ ಮಾಡಲು ವಿಜಯಪುರ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ. ಅದರಂತೆ ವಿಜಯಪುರ ಜಿಲ್ಲೆಯಲ್ಲಿ (Vijayapura News) ಅರ್ಹ ಫಲಾನುಭವಿಗಳಿಗೆ ಈ ಪಿಂಚಣಿ ಸೌಲಭ್ಯ ದೊರೆಯಲಿ ಎಂಬ ಹಿನ್ನೆಲೆಯಲ್ಲಿ ಪಿಂಚಣಿ ಅದಾಲತ್ಗಳನ್ನು (Pension Adalat) ಹೆಚ್ಚಿನ ಸ್ಥಳಗಳಲ್ಲಿ ಹಾಗೂ ಹೆಚ್ಚು ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗದ ಜನರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಹಾಗಾದರೆ ವಿಜಯಪುರ ಜಿಲ್ಲೆಯ ಯಾವ ಗ್ರಾಮಗಳಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ? ವಿವರ ಇಲ್ಲಿದೆ.
ಜುಲೈ 2ರಂದು ಬೆಳಗ್ಗೆ 11 ಗಂಟೆಗೆ ಒಟ್ಟು 14 ಗ್ರಾಮಗಳಲ್ಲಿ ಪಿಂಚಣಿ ಅದಾಲತ್ ನಡೆಸಲು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಆದೇಶಿಸಿದ್ದಾರೆ. ಪಿಂಚಣಿ ಅದಾಲತ್ನಲ್ಲಿ ಪರಿಗಣಿಸಬೇಕಾದ ಗ್ರಾಮಗಳ ಸಂಪೂರ್ಣ ಪಿಂಚಣಿದಾರರ ಮಾಹಿತಿಯೊಂದಿಗೆ ಹಾಜರಾಗಬೇಕು.
ಪಿಂಚಣಿ ಅದಾಲರ್ ನಡೆಯುವ ಗ್ರಾಮಗಳು
ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮ, ಇಂಡಿ ತಾಲ್ಲೂಕಿನ ತಾವರಖೇಡ ಗ್ರಾಮ, ವಿಜಯಪುರ ತಾಲೂಕಿನ ಶಿವಣಗಿ, ಬಬಲೇಶ್ವರ ತಾಲೂಕಿನ ಇವಣಗಿ ಗ್ರಾಮ, ತಿಕೋಟಾ ತಾಲೂಕಿನ ಅಳಗಿನಾಳ ಗ್ರಾಮ, ಬಸವನ ಬಾಗೇವಾಡಿ ತಾಲೂಕಿನ ಸಾಲವಾಡಗಿ ಗ್ರಾಮ, ನಿಡಗುಂದಿ ತಾಲೂಕಿನ ಬೇನಾಳ ಗ್ರಾಮ, ಮುದ್ದೇಬಿಹಾಳ ತಾಲೂಕಿನ ಜೈನಾಪುರ ಗ್ರಾಮ, ತಾಳಿಕೋಟೆಯ ಶರಣ ಸೋಮನಾಳ ಗ್ರಾಮ, ಇಂಡಿ ತಾಲೂಕಿನ ನಾದ ಕೆ.ಡಿ ಗ್ರಾಮ, ಕೊಲ್ಹಾರ ತಾಲೂಕಿನ ಮಲಘಾಣ ಗ್ರಾಮ, ಚಡಚಣ ತಾಲೂಕಿನ ಗೋಡಿಹಾಳ ಗ್ರಾಮಗಳಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ.
ದಿನಾಂಕ: ಜುಲೈ 2 ಸಮಯ: ಬೆಳಗ್ಗೆ 11 ಗಂಟೆಗೆ
ಜುಲೈ 2ರಂದು ಬೆಳಗ್ಗೆ 11 ಗಂಟೆಗೆ ಪಿಂಚಣಿ ಅದಾಲತ್ ನಡೆಯಲಿದೆ. ಅಂದು ಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ವಿಜಯಪುರ ಜಿಲ್ಲೆಯ ಸಾರ್ವನಿಕರಿಗೆ ಮನವಿ ಮಾಡಿದ್ದಾರೆ.
ಅಧಿಕಾರಿಗಳು ಭಾಗಿ
ಅಂದು ಪಿಂಚಣಿ ಅದಾಲತ್ ನಡೆಯುವ ವೇಳೆ ಸ್ಥಳೀಯ ಗ್ರಾಮಲೆಕ್ಕಿಗರು, ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕೆಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜುಲೈ 2ರಂದು ಪಿಂಚಣಿ ಅದಾಲತ್ ಜರುಗಿಸಿದ ಬಗ್ಗೆ ಅಂದೇ ಸಂಜೆ 6 ಗಂಟೆಯೊಳಗಾಗಿ ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ನಿಗದಿಪಡಿಸಿದ ನಮೂನೆಯಲ್ಲಿ ಮಾಹಿತಿಯನ್ನು ಸಲ್ಲಿಸಬೇಕು ಎಂದು ಸಹಾಯಕ ಆಯುಕ್ತರು ಮತ್ತು ಎಲ್ಲ ತಹಸೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.