Vijayapura News: ವಿಜಯಪುರದಲ್ಲಿ ಬಿಸಿಯೂಟ ಸ್ಥಗಿತ? ಗೊಂದಲ ಬೇಡ, ಇಲ್ಲಿದೆ ಅಧಿಕೃತ ಮಾಹಿತಿ

ಒಟ್ಟಿನಲ್ಲಿ ವಿದ್ಯಾರ್ಥಿಗಳಾಗಲಿ ಮಕ್ಕಳ ಪೋಷಕರಾಗಲಿ ಸುಳ್ಳು ಸುದ್ದಿಗಳಿಗೆ ಕಿವಿಗೊಡದಿರಿ.  ಶಾಲೆ ಆರಂಭವಾದಾಗಿನಿಂದ ಇಲ್ಲಿವರೆಗೂ ದಿನ ನಿತ್ಯ ಬಿಸಿಊಟ ಎಲ್ಲ ಮಕ್ಕಳಿಗೆ ನೀಡಲಾಗುತ್ತದೆ. ಎಂದಿನಂತೆ ಶಾಲಾ ಮಕ್ಕಳು ಶಾಲೆಗೆ ಆಗಮಿಸಬೇಕೆಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಿಜಯಪುರ : ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಯಾವುದೇ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಂಡಿರುವುದಿಲ್ಲ ಎಂದು ಜಿಲ್ಲಾ ಪಂಚಾಯತ್​ನ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಅಕ್ಷರ ದಾಸೋಹ ಯೋಜನೆ ವಿಭಾಗದ ಕಚೇರಿ ಪ್ರಕಟಣೆ ತಿಳಿಸಿದೆ. ಈಮೂಲಕ ವಿಜಯಪುರದಲ್ಲಿ ಬಿಸಿಯೂಟದ (Mid Day Meal) ಬಗ್ಗೆ ಹರಡಿದ್ದ ಗೊಂದಲಕ್ಕೆ ಸ್ಪಷ್ಟನೆ  ನೀಡಿದೆ.  ವಿಜಯಪುರ (Vijayapura News) ಗ್ರಾಮೀಣ ವಲಯ ಭಾಗದಲ್ಲಿ ಬರುವ ತಿಕೋಟಾ, ಬಬಲೇಶ್ವರ ಸೇರಿದಂತೆ ನಗರ ವಲಯದ ಸರಕಾರಿ ಶಾಲೆಗಳಲ್ಲಿ ಬಿಸಿ ಊಟ ಬಂದ್ ಆಗಿರುವ ಕುರಿತು ಗೊಂದಲ ಉಂಟಾಗಿತ್ತು. ಅಲ್ಲದೇ ಗ್ಯಾಸ್ ಏಜನ್ಸಿಯವರಿಗೆ 20 ಲಕ್ಷ ರೂಪಾಯಿ ಪಾವತಿಸುವ ಬಾಕಿ ಬಿಲ್ ಪಾವತಿ ಇರುವುದೆಂದು ಕೂಡ ಸುದ್ದಿ ಹಬ್ಬಿತ್ತು. ಆದರೆ ಈ ಎಲ್ಲ ಗೊಂದಲಕ್ಕೆ ಇದೀಗ ಸ್ಪಷ್ಟನೆ ದೊರೆತಿದೆ. 

    2021-22ನೇ ಆರ್ಥಿಕ ವರ್ಷದಲ್ಲಿ 31-ಮಾರ್ಚ 2022ರ ವರೆಗಿನ ಗ್ಯಾಸ್ ಏಜನ್ಸಿಯವರು ಸಲ್ಲಿಸಿದ ಎಲ್ಲ ಬಿಲ್ಲುಗಳನ್ನು ಪಾವತಿಸಲಾಗಿದೆ. 13-06-2022ರಂದು ಸರ್ಕಾರದ ಆದೇಶದಂತೆ 2022-23ನೇ ಸಾಲಿನ ಆರ್ಥಿಕ ವರ್ಷದ ಮುಂಗಡ ಹಣವನ್ನು ಜಿಲ್ಲಾ ಪಂಚಾಯತ್ ವತಿಯಿಂದ  ವಿಜಯಪುರ ಜಿಲ್ಲೆಯ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಯ ಡಿಡಿಓಗಳಿಗೆ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಗ್ಯಾಸ್ ಏಜನ್ಸಿಯವರಿಗೆ ಏಪ್ರಿಲ್ 2022 ರಿಂದ ಇಲ್ಲಿಯವರೆಗಿನ ಬಾಕಿ ಇರುವ ಬಿಲ್ಲುಗಳನ್ನು ಪಾವತಿಸಲು ಸೂಚಿಸಲಾಗಿದೆ.

    ಗ್ಯಾಸ್ ಪೂರೈಕೆಗೆ ಅಡೆತಡೆ ಇಲ್ಲ
    ಗ್ಯಾಸ್ ಏಜನ್ಸಿಯವರು ಸಹ ಯಾವುದೇ ಅಡೆ-ತಡೆಗಳಿಲ್ಲದಂತೆ ಗ್ಯಾಸ್​ಗಳನ್ನು ಎಲ್ಲ ಶಾಲೆಗಳಿಗೆ ಸರಬರಾಜು ಮಾಡವುದಾಗಿ ಭರವಸೆ ನೀಡಿರುತ್ತಾರೆ. ಮತ್ತು ಗ್ಯಾಸ್ ಏಜೆನ್ಸಿಯವರು ಗ್ಯಾಸ್​ಗಳನ್ನು ಶಾಲೆಗಳಿಗೆ ಸರಬರಾಜು ಮಾಡುತ್ತಿದ್ದಾರೆ.

    ಇದನ್ನೂ ಓದಿ: Kittur Rani Chennamma: ಕಿತ್ತೂರು ರಾಣಿ ಚೆನ್ನಮ್ಮ ಜನ್ಮಸ್ಥಳ ಪಾಳುಬಿದ್ದಿದೆ! ಇಲ್ಲಿದೆ ನೋಡಿ ವಿಡಿಯೋ


    ಬಿಸಿಯೂಟ ಯೋಜನೆ ಸ್ಥಗಿತಗೊಂಡಿಲ್ಲ
    ವಿಜಯಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯಾವುದೇ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಂಡಿರುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಕಾರ್ಯಾಲಯದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಅಕ್ಷರ ದಾಸೋಹ ಯೋಜನೆ ವಿಭಾಗದ ಪ್ರಕಟಣೆಯಲ್ಲಿ ತಿಳಿಸಿದೆ.

    ಇದನ್ನೂ ಓದಿ: Vijayapura Jaggery Tea: ಕುಡಿದೋನೆ ಬಲ್ಲ ವಿಜಯಪುರ ಬೆಲ್ಲದ ಚಹಾದ ಸ್ವಾದ! ವಿಡಿಯೋ ನೋಡಿ

    ಒಟ್ಟಿನಲ್ಲಿ ವಿದ್ಯಾರ್ಥಿಗಳಾಗಲಿ ಮಕ್ಕಳ ಪೋಷಕರಾಗಲಿ ಸುಳ್ಳು ಸುದ್ದಿಗಳಿಗೆ ಕಿವಿಗೊಡದಿರಿ.  ಶಾಲೆ ಆರಂಭವಾದಾಗಿನಿಂದ ಇಲ್ಲಿವರೆಗೂ ದಿನ ನಿತ್ಯ ಬಿಸಿಊಟ ಎಲ್ಲ ಮಕ್ಕಳಿಗೆ ನೀಡಲಾಗುತ್ತದೆ. ಎಂದಿನಂತೆ ಶಾಲಾ ಮಕ್ಕಳು ಶಾಲೆಗೆ ಆಗಮಿಸಬೇಕೆಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

    ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ
    Published by:guruganesh bhat
    First published: