• Home
  • »
  • News
  • »
  • vijayapura
  • »
  • Vijayapura: ರೈತರೇ, ಈಕೂಡಲೇ ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ; ವಿವರ ಇಲ್ಲಿದೆ

Vijayapura: ರೈತರೇ, ಈಕೂಡಲೇ ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ; ವಿವರ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಗದಿತ ಗುರಿಗಿಂತ ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ ಮುಖಾಂತರ ಸಹಾಯಧನ ವಿತರಣೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ! ಹಾಗಾದರೆ ಹೇಗೆ ಅರ್ಜಿ ಸಲ್ಲಿಸುವುದು? ವಿವರ ಇಲ್ಲಿದೆ.

  • Share this:

    ವಿಜಯಪುರ : 2022-23ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆ ಆಯ್ಕೆಯಾಗಿದೆ. ಆದ್ದರಿಂದ ದ್ರಾಕ್ಷಿ, ದಾಳಿಂಬೆ, ಡ್ರಾಗನ್ ಮತ್ತು ನುಗ್ಗೆ ಬೆಳೆಗಳಿಗೆ ಸಹಾಯಧನಕ್ಕೆ ಅರ್ಜಿ ಅರ್ಹ ಫಲಾನುಭವಿ ರೈತರಿಂದ ಅರ್ಜಿ (Subsidy To Farmers)  ಆಹ್ವಾನಿಸಿದ್ದು, ಎಲ್ಲ ವರ್ಗದ ರೈತರಿಗೆ ದ್ರಾಕ್ಷಿ ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೇರ್​ಗೆ ರೂ.50,000, ದಾಳಿಂಬೆ ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೇರ್​ಗೆ ರೂ. 28,402,  ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೇರ್​ಗೆ ರೂ.30,000 ಮತ್ತು ನುಗ್ಗೆ ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೇರ್​ಗೆ ರೂ. 54,535 ಸಹಾಯಧನ ನೀಡಲಾಗುವುದು.  ವಿಜಯಪುರ ಜಿಲ್ಲೆಯ (Vijayapura) ರೈತರು ಹೇಗೆ ಈ ಸಹಾಯಧನ ಪಡೆಯುವುದು? ಮಾಹಿತಿ ಇಲ್ಲಿದೆ. 

    ಸಹಾಯಧನದ ಹೆಸರುದ್ರಾಕ್ಷಿ, ದಾಳಿಂಬೆ, ಡ್ರಾಗನ್ ಮತ್ತು ನುಗ್ಗೆ ಬೆಳೆಗಳಿಗೆ ಸಹಾಯಧನ
    ಯಾವ ಜಿಲ್ಲೆ?ವಿಜಯಪುರ
    ಹೆಚ್ಚಿನ ಮಾಹಿತಿಗೆ94489 99232
    ಸಂಪರ್ಕಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ

    ಇದನ್ನೂ ಓದಿ: Tibetan Camp: ಉತ್ತರ ಕನ್ನಡದ ಮಿನಿ ಟಿಬೆಟ್! ಒಳಗೆ ಏನೇನಿದೆ? ವೀಡಿಯೋ ನೋಡಿ


    ವಿಜಯಪುರ ಜಿಲ್ಲೆಯ ಆಸಕ್ತಿಯುಳ್ಳ ರೈತರು ತಮ್ಮ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಮಾಹಿತಿ ಪಡೆದು ನಿಗದಿತ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳಾದ ಪಹಣಿ, ಬ್ಯಾಂಕ್ ಖಾತೆ ಹಾಗೂ ಆಧಾರ್ ದಾಖಲೆಗಳ ಝರಾಕ್ಸ್ ಪ್ರತಿ ಲಗತ್ತಿಸಿ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದೆ.


    ಲಾಟರಿ ಮುಖಾಂತರ ಫಲಾನುಭವಿಗಳ ಆಯ್ಕೆ


    ಒಬ್ಬ ರೈತ ಫಲಾನುಭವಿಗೆ ಗರಿಷ್ಠ 1.00 ಹೆಕ್ಟೇರ್, ಕನಿಷ್ಠ 0.20 ಹೆಕ್ಟೇರ್​ಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಹೊಸದಾಗಿ ನಾಟಿ ಮಾಡಿರುವ ತೋಟಗಳಿಗೆ ಮಾತ್ರ ಸಹಾಯಧನ ನೀಡಲು ಪರಿಗಣಿಸಲಾಗುವುದು. ನಿಗದಿತ ಗುರಿಗಿಂತ ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.


    ಇದನ್ನೂ ಓದಿ: Uttara Kannada: ಮಳೆರಾಯನಿಗೆ ಸವಾಲೊಡ್ಡಿದ ಕಾರವಾರದ ಯುವಕರು!


    ಹೆಚ್ಚಿನ ಮಾಹಿತಿಗಾಗಿ ರೈತರ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 94489 99232 ಈ ದೂರವಾಣಣಿ ಸಂಖ್ಯೆಗೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: