Vijayapura News: ಮಹಿಳೆಯರೇ, ಕೋಳಿಮರಿಗಳನ್ನು ನೀಡುತ್ತೆ ಸರ್ಕಾರ! ಹೀಗೆ ಅರ್ಜಿ ಸಲ್ಲಿಸಿ

ಇಲಾಖೆಯು ತಿಕೋಟ ತಾಲೂಕಿನ 106 ಮಹಿಳೆಯರಿಗೆ ಕೋಳಿ ಮರಿಗಳನ್ನು ವಿತರಿಸಲು ನಿರ್ಧರಿಸಿದೆ. ಸರ್ಕಾರದ ಆದೇಶದನ್ವಯ ಎಲ್ಲ ವರ್ಗದ ಮಂದಿಗೂ ಮೀಸಲಾತಿ ಆಧಾರದಲ್ಲಿ ಕೋಳಿ ಮರಿಗಳನ್ನು ವಿತರಿಸಲಾಗುವುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಿಜಯಪುರ: ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ವಿಜಯಪುರ ತಿಕೋಟ ತಾಲೂಕಿನ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ವತಿಯಿಂದ ಪಶು ಆಸ್ಪತ್ರೆಗಳ ಮೂಲಕ ಮಹಿಳೆಯರಿಗೆ ಕೋಳಿ ಮರಿಗಳನ್ನು (Chicken Cub) ನೀಡಲು ನಿರ್ಧರಿಸಲಾಗಿದೆ. ನಿಗದಿತ ಸಂಖ್ಯೆಯ ಕೋಳಿ ಮರಿಗಳನ್ನು ನೀಡುವ ಮೂಲಕ ಮಹಿಳೆಯರಿಗೆ ಉದ್ಯೋಗ ಕಟ್ಟಿಕೊಡುವ ಜೊತೆಗೆ ಸಾರ್ವಜನಿಕರಿಗೆ ಪೌಷ್ಟಿಕ ಆಹಾರ ಒದಗಿಸುವ ಗುರಿಯನ್ನು ಪಶುಪಾಲನಾ ಇಲಾಖೆಯು (Department of Animal Husbandry) ಹೊಂದಿದೆ. ಹಾಗಿದ್ರೆ, ಕೋಳಿ ಮರಿಗಳನ್ನು ಪಡೆಯಲು ವಿಜಯಪುರ ಜಿಲ್ಲೆಯ (Vijayapura News) ತಿಕೋಟ ತಾಲೂಕಿನ ಮಹಿಳೆಯರು ಏನು ಮಾಡಬೇಕು? ಯಾವೆಲ್ಲ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರು? ಈ ಎಲ್ಲದರ ಮಾಹಿತಿ ಇಲ್ಲಿದೆ.

    ಫಲಾನುಭವಿಗಳ ಆಯ್ಕೆ ಹೀಗೆ
    ಅರ್ಹ ಫಲಾನುಭವಿಗಳನ್ನು ವಿವಿಧ ಆಯಾಮಗಳಿಂದ ಆಯ್ಕೆ ಮಾಡಲು ಇಲಾಖೆಯು ನಿರ್ಧರಿಸಿದೆ. ಹಾಗಾಗಿ ಈ ಕೆಳಗಿನಂತೆ ಅರ್ಹ ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಲಿದೆ.


    1. ಬಡತನ ರೇಖೆಗಿಂತ ಕೆಳಗಿರುವ ರೈತ ಮಹಿಳೆಯರು
    2. ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರು
    3. ಪ್ರಾಥಮಿಕ ಕೋಳಿ ಸಹಕಾರ ಸಂಘಗಳಲ್ಲಿರುವ ಮಹಿಳಾ ಸದಸ್ಯರು
    4. ರೈತ ಉತ್ಪಾದಕ ಸಂಸ್ಥೆಯ ಸದಸ್ಯೆಯರು

    106 ಮಂದಿಗಷ್ಟೇ ಅವಕಾಶ
    ಇಲಾಖೆಯು ತಿಕೋಟ ತಾಲೂಕಿನ 106 ಮಹಿಳೆಯರಿಗೆ ಕೋಳಿ ಮರಿಗಳನ್ನು ವಿತರಿಸಲು ನಿರ್ಧರಿಸಿದೆ. ಸರ್ಕಾರದ ಆದೇಶದನ್ವಯ ಎಲ್ಲ ವರ್ಗದ ಮಂದಿಗೂ ಮೀಸಲಾತಿ ಆಧಾರದಲ್ಲಿ ಕೋಳಿ ಮರಿಗಳನ್ನು ವಿತರಿಸಲಾಗುವುದು.

    ಮೀಸಲಾತಿ ಹೀಗಿರಲಿವೆ
    ಸಾಮಾನ್ಯ ವರ್ಗ – 82
    ಪರಿಶಿಷ್ಟ ಜಾತಿ – 16
    ಪರಿಶಿಷ್ಟ ಪಂಗಡ – 04
    ಅಲ್ಪಸಂಖ್ಯಾತ – 04

    ಎಷ್ಟೆಷ್ಟು ಕೋಳಿ ಮರಿ?
    ಅರ್ಹ ಫಲಾನುಭವಿ ಮಹಿಳೆಯರಿಗೆ ತಲಾ 20ರಂತೆ ಕೋಳಿ ಮರಿಗಳನ್ನು ವಿತರಿಸಲಾಗುವುದು.

    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
    ಅರ್ಜಿದಾರರು ಸೂಕ್ತ ದಾಖಲೆಗಳೊಂದಿಗೆ ಜೂನ್ 30ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕಿದೆ.

    ಇದನ್ನೂ ಓದಿ: Madhavananda Prabhu: ಬ್ರಿಟೀಷರ ಎದೆ ನಡುಗಿಸಿದ್ದ ವಿಜಯಪುರದ ಸಂತ! 27 ಬಾರಿ ಜೈಲುವಾಸ ಅನುಭವಿದ್ದ ಮಾಧವಾನಂದ ಪ್ರಭು

    ಅರ್ಜಿ ಸಲ್ಲಿಕೆ ಎಲ್ಲಿ? ಹೇಗೆ?
    ಆಸಕ್ತ ಮಹಿಳಾ ಅರ್ಜಿದಾರರು ತಿಕೋಟ ತಾಲೂಕಿನ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ತೆರಳಿ ಅರ್ಜಿಯನ್ನ ಪಡೆದು ಭರ್ತಿ ಮಾಡಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ
    ಆಸಕ್ತ ಮಹಿಳೆಯರು ಯಾವುದೇ ಹೆಚ್ಚಿನ ಮಾಹಿತಿಗಾಗಿ 08352-264516, 9945959704 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

    ಇದನ್ನೂ ಓದಿ: Almatti: ಆಲಮಟ್ಟಿಯಲ್ಲಿ ಮಾಯಾಲೋಕ! ಇಲ್ಲಿದೆ ನೋಡಿ ವಿಡಿಯೋ

    ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಮಹಿಳೆಯರಿಗೆ ಕೋಳಿ ಮರಿಗಳನ್ನು ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆಯು ಕೋಳಿ ಮರಿಗಳನ್ನು ನೀಡಲು ನಿರ್ಧರಿಸಿದೆ. ತಲಾ ಒಬ್ಬೊಬ್ಬ ಮಹಿಳೆಯರಿಗೆ 20 ಮರಿಗಳಂತೆ 106 ಮಹಿಳಾ ಫಲಾನುಭವಿಗಳಿಗೆ ಕೋಳಿ ಮರಿಗಳನ್ನು ನೀಡಲಿದೆ.
    Published by:guruganesh bhat
    First published: