• Home
  • »
  • News
  • »
  • vijayapura
  • »
  • Vijayapura: ಕಲಾರಸಿಕರೇ ಗಮನಿಸಿ, ವೀಣೆ, ನೃತ್ಯ, ರಸಮಂಜರಿ ಕಾರ್ಯಕ್ರಮಗಳನ್ನು ಕಣ್ತುಂಬಿಸಿಕೊಳ್ಳಿ

Vijayapura: ಕಲಾರಸಿಕರೇ ಗಮನಿಸಿ, ವೀಣೆ, ನೃತ್ಯ, ರಸಮಂಜರಿ ಕಾರ್ಯಕ್ರಮಗಳನ್ನು ಕಣ್ತುಂಬಿಸಿಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸವಿಯಲು ಯಾವುದೇ ತರಹ ಟಿಕೆಟ್ ಇರುವುದಿಲ್ಲ. ಸಂಪೂರ್ಣ ಉಚಿತವಾಗಿ ನೀವು ಈ ಸಂಗೀತ ಕಾರ್ಯಕ್ರಮ, ರಸಮಂಜರಿ, ಹಾಸ್ಯ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ  ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂಈ ಸಹ ವಿಜಯಪುರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ (Kannada And Culture Department) ಇಲಾಖೆ ವತಿಯಿಂದ ಇದೇ ನವೆಂಬರ್ 5 ರಂದು ನಗರದ ಐತಿಹಾಸಿಕ ಆನಂದ ಮಹಲ್ ಸ್ಮಾರಕದ ಆವರಣದಲ್ಲಿ ಸಂಜೆ 6:30 ಕ್ಕೆ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಮುಂದಾಗಿದೆ. ವಿಜಯಪುರ ಜಿಲ್ಲೆಯ (Vijayapura News) ಪ್ರವಾಸೋದ್ಯಮ ಬೆಳವಣಿಗೆ ಹಾಗೂ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳಿನ ಮೊದಲನೇಯ ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.


    ನವೆಂಬರ್ 5  ರಂದು ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯಪುರದ ತೇಜಶ್ವಿನಿ ದೇಶಪಾಂಡೆ ಅವರಿಂದ ವೀಣಾ ವಾದನ, ಪ್ರಶಾಂತ ಚೌಧರಿ ಅವರಿಂದ ಹಾಸ್ಯ ಚಟಾಕಿಗಳು, ಪಲ್ಲವಿ ವೇದಂಡಿ ಮತ್ತು ಸಂಗಡಿಗರಿಂದ ನೃತ್ಯ ವೈಭವ ಹಾಗೂ ಶ್ರೀಮಂತ ರಾಮಸಿಂಗ್ ಅವರಿಂದ ರಸಮಂಜರಿ ಕಾರ್ಯಕ್ರಮಗಳು ಸಂಜೆ 6:30 ರಿಂದ 9 ಗಂಟೆವರೆಗೆ ನಡೆಯಲಿವೆ.




    ಸಾರ್ವಜನಿಕರಿಗೆ ಮುಕ್ತ ಅವಕಾಶ
    ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಈ ಕಾರ್ಯಕ್ರಮ ವೀಕ್ಷಿಸಲು ಅವಕಾಶವನ್ನ ಜಿಲ್ಲಾಡಳಿತ ಮಾಡಿಕೊಟ್ಟಿದೆ. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸವಿಯಲು ಯಾವುದೇ ತರಹ ಟಿಕೆಟ್ ಇರುವುದಿಲ್ಲ. ಸಂಪೂರ್ಣ ಉಚಿತವಾಗಿ ನೀವು ಈ ಸಂಗೀತ ಕಾರ್ಯಕ್ರಮ, ರಸಮಂಜರಿ, ಹಾಸ್ಯ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.


    ಇದನ್ನೂ ಓದಿ: Bengaluru To Pune: 50 ಸಾವಿರ ಕೋಟಿಯ ಬೆಂಗಳೂರು-ಪುಣೆ ಸೂಪರ್ ಎಕ್ಸ್​ಪ್ರೆಸ್ ಹೈವೆ; ಈ ಜಿಲ್ಲೆಗಳಿಗೂ ಅನುಕೂಲ


    ಕಾರ್ಯಕ್ರಮಕ್ಕೆ ಆಗಮಿಸುವ ಕಲಾಭಿಮಾನಿಗಳಿಗೆ ವಿಶೇಷ ಸೂಚನೆ
    ಈ ಕಾರ್ಯಕ್ರಮಕ್ಕೆ ನೀವು ಕುಟುಂಬ ಸಮೇತರಾಗಿ ಆಗಮಿಸಬೇಕಾದರೆ ಸ್ವಂತ ವಾಹನದಲ್ಲಿಯೇ ಬರಬೇಕು.‌ ಈ ಕಾರ್ಯಕ್ರಮ ಸಂಜೆ‌ ಆರು ಗಂಟೆಗೆ‌ ಆರಂಭವಾಗಿ ಮಧ್ಯರಾತ್ರಿ ಒಂದು ಗಂಟೆ ವರೆಗೆ ನಡೆಯುತ್ತದೆ, ಹೀಗಾಗಿ ಕಾರ್ಯಕ್ರಮ ಮುಗಿಸಿ ವಾಪಸ್ ಮನೆಗೆ ತೆರಳಲು ಸಮಸ್ಯೆಯಾಗಬಹುದು ಎಂದು ಸೂಚನೆ ನೀಡಲಾಗಿದೆ.




    ಇದನ್ನೂ ಓದಿ: God Sanjeeva Murthy: ಕಾಣೋಕೆ ಆಂಜನೇಯನಂತಿದ್ರೂ, ಅವನಲ್ಲ! ಈತ ಸೈನಿಕರನ್ನು ಕಾಪಾಡೋ ಸಂಜೀವ ಮೂರ್ತಿ!


    ಅಂದು ಕಾರ್ಯಕ್ರಮದಲ್ಲಿ ನಗರ ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ, ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಸಿಇಒ ರಾಹುಲ್ ಸಿಂಧೆ ಸೇರಿದಂತೆ ಹಲವಾರು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: