• Home
 • »
 • News
 • »
 • vijayapura
 • »
 • Vijayapura: ಸರ್ಕಾರಿ ಅಧಿಕಾರಿಗಳು ಸಮಸ್ಯೆ ನೀಡುತ್ತಿದ್ದಾರೆಯೇ? ದೂರು ನೀಡಲು ಇಲ್ಲಿದೆ ಅವಕಾಶ!

Vijayapura: ಸರ್ಕಾರಿ ಅಧಿಕಾರಿಗಳು ಸಮಸ್ಯೆ ನೀಡುತ್ತಿದ್ದಾರೆಯೇ? ದೂರು ನೀಡಲು ಇಲ್ಲಿದೆ ಅವಕಾಶ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಾಮಾನ್ಯವಾಗಿ ಸರಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕಾದರೆ ಅನಗತ್ಯ ಅಲೆದಾಟ ತಪ್ಪಿದ್ದಲ್ಲ. ಲಂಚಗುಳಿತನ, ಆಮಿಷದ ಹೊರತು ಕೆಲಸ ಕಾರ್ಯಗಳು ಸುಲಭವಾಗಿ ನಡೆಯದು. ಇಂತಹ ಸಮಸ್ಯೆಗಳಿಂದ ಬೇಸತ್ತಿದ್ದರೆ ಹೀಗೆ ದೂರು ನೀಡಬಹುದಾಗಿದೆ.

 • Share this:

  ವಿಜಯಪುರ ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ವಿನಾ ಕಾರಣ ಕೆಲಸದಲ್ಲಿ ವಿಳಂಬ, ನೀಡಬೇಕಾದ ಸವಲತ್ತುಗಳಿಗೆ ಅಲೆದಾಟ ಮಾಡಿಸುತ್ತಿದ್ದರೆ ಅಂತಹ ಅಧಿಕಾರಿ, ನೌಕರರ ವಿರುದ್ಧ ನೀವು ಸುಲಭವಾಗಿ ದೂರು ನೀಡಬಹುದು. ಸಾರ್ವಜನಿಕರಿಗೆ ಎಂದೇ ಈ ಅವಕಾಶವನ್ನು ವಿಜಯಪುರದ  ಲೋಕಾಯುಕ್ತ (Vijayapura Lokayukta) ಅಧಿಕಾರಿಗಳು ಕಲ್ಪಿಸಿಕೊಡುತ್ತಿದ್ದಾರೆ. ಹಾಗಿದ್ರೆ ಸರಕಾರಿ ಕಚೇರಿಗಳಲ್ಲಿ (Government Office) ವಿನಾ ಕಾರಣ ಕೆಲಸದಲ್ಲಿ ವಿಳಂಬ, ನೀಡಬೇಕಾದ ಸವಲತ್ತುಗಳಿಗೆ ಅಲೆದಾಡಿ ಸುಸ್ತಾದ ಈ ಭಾಗದ ಮಂದಿ ಮಾಡಬೇಕಾದುದು ಏನು ಅನ್ನೋದರ ಸವಿವರ ಇಲ್ಲಿದೆ ನೋಡಿ..


  ವಿಜಯಪುರ ಜಿಲ್ಲೆಯಲ್ಲೂ ಇಂತಹ ಚಟುವಟಿಕೆಯಿಂದಾಗಿ ಬೇಸತ್ತು ಹೋಗಿದ್ದರೆ, ಯಾರೇ ಇರಬಹುದು ಅಂತಹವರ ವಿರುದ್ಧ ದೂರು ನೀಡಲು ಅವಕಾಶವೊಂದನ್ನು ವಿಜಯಪುರ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಕಲ್ಪಿಸಿಕೊಡುತ್ತಿದ್ದಾರೆ. ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಆಯೋಜಿಸಲಾಗಿದೆ.


  ಈ ಸಮಸ್ಯೆಗಳಿಂದ ಬೇಸತ್ತಿದ್ದೀರೇ?
  ಸಾಮಾನ್ಯವಾಗಿ ಸರಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕಾದರೆ ಅನಗತ್ಯ ಅಲೆದಾಟ ತಪ್ಪಿದ್ದಲ್ಲ. ಲಂಚಗುಳಿತನ, ಆಮಿಷದ ಹೊರತು ಕೆಲಸ ಕಾರ್ಯಗಳು ಸುಲಭವಾಗಿ ನಡೆಯದು. ಇಂತಹ ಸಮಸ್ಯೆಗಳಿಂದ ಬೇಸತ್ತಿದ್ದರೆ ಹೀಗೆ ದೂರು ನೀಡಬಹುದಾಗಿದೆ.


  ಯಾರೆಲ್ಲ ದೂರು ನೀಡಬಹುದು? ಹೇಗೆ ನೀಡುವುದು?
  ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿನಾ ಕಾರಣ ವಿಳಂಬ ಹಾಗೂ ಇನ್ನಿತರೆ ತೊಂದರೆ ಅನುಭವಿಸುತ್ತಿರುವ ಯಾರೇ ಆಗಲಿ ದೂರು ನೀಡಬಹುದಾಗಿದೆ.


  ನಿಮಗೆ ಯಾರಿಂದ ಸಮಸ್ಯೆ ಆಗಿದೆ?
  ಸಾರ್ವಜನಿಕರು ಯಾವ ಅಧಿಕಾರಿ ಅಥವಾ ನೌಕರನಿಂದ ತೊಂದರೆಗೆ ಒಳಗಾಗಿದ್ದೀರಿ ಅನ್ನೋದನ್ನು ಕುಂದು ಕೊರತೆ ಸಭೆಗೆ ಹಾಜರಾಗಿ ದೂರುಗಳನ್ನು ಫಾರ್ಮ್ ನಂ 1 ಹಾಗೂ 2ರ ಪತ್ರದಲ್ಲಿ ನೀಡಬಹುದಾಗಿದೆ.


  ಸ್ಥಳದಲ್ಲಿಯೇ ಸಿಗಲಿದೆ ಪರಿಹಾರ!
  ನೀವು ಯಾವ ಅಧಿಕಾರಿ, ನೌಕರರ ವಿರುದ್ಧ ದೂರು ನೀಡುತ್ತೀರೋ ಅಂತಹ ಅಧಿಕಾರಿ ಮತ್ತು ನೌಕರರ ವಿರುದ್ಧ ಅರ್ಜಿ ನೀಡಿದ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಯೋಗದೊಂದಿಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು.


  ದೂರು ಇತ್ಯರ್ಥ ಆಗದೇ ಇದ್ದರೆ ಏನು ಮಾಡಲಾಗುತ್ತೆ?
  ಒಂದು ವೇಳೆ ನೀವು ನೀಡಿದ ನಿಮ್ಮ ಸಮಸ್ಯೆ ಕುರಿತ ದೂರು ಇತ್ಯರ್ಥವಾಗದೇ ಇದ್ದಲ್ಲಿ ಅಂತಹ ದೂರುಗಳನ್ನು ನಿಗದಿತ ನಮೂನೆಯಲ್ಲಿ ಸ್ವೀಕರಿಸಿ ಅವುಗಳನ್ನು ಗೌರವಾನ್ವಿತ ಲೋಕಾಯುಕ್ತರಿಗೆ ಕಳುಹಿಸಲಾಗುತ್ತದೆ. ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬಹುದಾದ ಕಚೇರಿಯ ದೂರವಾಣಿ ಸಂಖ್ಯೆಗಳು ಇಲ್ಲಿದೆ: 08352-255333/257786 


  ಯಾವ ದಿನಾಂಕ? ಯಾವ ತಾಲೂಕು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು?
  ಜೂನ್ 20: ಬೆಳಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಇಂಡಿಯ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.


  ಜೂನ್ 22: ಬೆಳಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಖ್ಯ ಕಚೇರಿ ಮೊದಲನೇ ಮಹಡಿ ಸಭಾಂಗಣ ವಿಜಯಪುರದಲ್ಲಿ ಕುಂದು ಕೊರತೆ ಸಭೆ ನಡೆಯಲಿದೆ.


  ಇದನ್ನೂ ಓದಿKolhar Curd: ಕೋಲಾರ ಅಲ್ಲ ಕೋಲ್ಹಾರ! ಇಲ್ಲಿಯ ಗಟ್ಟಿ ಮೊಸರ ರುಚಿಗೆ ಮಾರುಹೋಗಿ ಬನ್ನಿ!


  ಜೂನ್ 24: ಬೆಳಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಸವನಬಾಗೇವಾಡಿಯ ತಾಲೂಕು ಪಂಚಾಯತ್ ಕಚೇರಿ ಸಭಾಭವನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.   ಈ ಅವಕಾಶವನ್ನು ಸಾರ್ವಜನಿಕರು ಅಂದರೆ ನೀವು ಸಹ ಬಳಸಿಕೊಳ್ಳಬಹುದಾಗಿದೆ.


  ಇದನ್ನೂ ಓದಿ: Snake Rescue Team: ಹಾವು ಕಂಡರೆ ಹೆದರಬೇಡಿ, ನಮಗೆ ಫೋನ್ ಮಾಡಿ! ಮೂವರು ಯುವಕರ ಈ ತಂಡ ಹೀಗಂತಿದೆ


  Vijayapura Lokayukta
  ವಿಜಯಪುರ ಲೋಕಾಯುಕ್ತ ಕಚೇರಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಈ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ?
  ಲೋಕಾಯುಕ್ತ ಡಿಎಸ್​ಪಿ ಅರುಣ ಬಿ. ನಾಯಕ, ಪೊಲೀಸ್ ನಿರೀಕ್ಷಕರಾದ ಆನಂದ ಟಕ್ಕನ್ನವರ, ಗುರುನಾಥ ಚವ್ಹಾಣ್ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.


  ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ

  Published by:guruganesh bhat
  First published: