Vijayapura News: ಖೇಲೋ ಇಂಡಿಯಾ ಕೇಂದ್ರಕ್ಕೆ ಸೈಕ್ಲಿಂಗ್ ತರಬೇತುದಾರರಾಗಿ; ಈಗಲೇ ಹೀಗೆ ಅರ್ಜಿ ಹಾಕಿ

ಸೈಕ್ಲಿಂಗ್ ಕ್ರೀಡೆಯಲ್ಲಿ ತರಬೇತಿ ನೀಡಿದ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಆಸಕ್ತ ಸೈಕ್ಲಿಂಗ್ ತರಬೇತುದಾರರು ಕ್ರೀಡಾಪಟುಗಳು ಈ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಿಜಯಪುರ : ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಭಾರತದಾದ್ಯಂತ ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಿ ತಳಮಟ್ಟದಲ್ಲಿ ಪರಿಣಾಮಕಾರಿಯಾದ ವೈಜ್ಞಾನಿಕ ಕ್ರೀಡಾ ತರಬೇತಿಯನ್ನು ನೀಡಿ ಅಂತರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಹೊರತರಲು ಉದ್ದೇಶಿಸಿದೆ. ಅದರಂತೆ ವಿಜಯಪುರ ಜಿಲ್ಲೆಗೆ (Vijayapura News) ಸೈಕ್ಲಿಂಗ್ ಕ್ರೀಡೆಗೆ ಸಣ್ಣ ಖೇಲೋ ಇಂಡಿಯಾ ಕೇಂದ್ರವನ್ನು (Khelo India Centre) ಮಂಜೂರು ಮಾಡಲಾಗಿದೆ. ಈ ಖೇಲೋ ಇಂಡಿಯಾ ಕೇಂದ್ರಕ್ಕೆ ಒಬ್ಬ ಸೈಕ್ಲಿಂಗ್ ತರಬೇತಿದಾರರು /ಕ್ರೀಡಾಪಟುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೇಗೆ ಅರ್ಜಿ ಸಲ್ಲಿಸುವುದು? ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಇರಬೇಕು? ಹೇಗೆ ಅರ್ಜಿ ಸಲ್ಲಿಸುವುದು? ಎ್ಲ ವಿವರ ಇಲ್ಲಿದೆ.   ಹುದ್ದೆಯ ಹೆಸರುಸೈಕ್ಲಿಂಗ್ ತರಬೇತಿ
  ಸ್ಥಳಖೇಲೋ ಇಂಡಿಯಾ ಕೇಂದ್ರ, ವಿಜಯಪುರ
  ವಿದ್ಯಾರ್ಹತೆಸೈಕ್ಲಿಂಗ್ ಅನುಭವ
  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಜುಲೈ 07
  ಸಂಪರ್ಕ ಮಾಹಿತಿದೂರವಾಣಿ ಸಂಖ್ಯೆ: 08352-251085 ಹಾಗೂ 9480886555

  ಅರ್ಜಿ ಸಲ್ಲಿಸಲು ಕ್ರೀಡಾಪಟುಗಳು ಹೊಂದಿರಬೇಕಾದ ಅರ್ಹತೆಗಳು
  ವಿಜಯಪುರ ಜಿಲ್ಲೆಯವರಾಗಿರಬೇಕು, ನಿರುದ್ಯೋಗಿಯಾಗಿರಬೇಕು, ಈ ಮೊದಲು ಭಾರತ ಸರ್ಕಾರದಿಂದ ನಿಯೋಜಿಸಲ್ಪಟ್ಟ ತಂಡವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ವಿಜೇತರಾಗಿರಬೇಕು ಅಥವಾ ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿರುವ ಅಧಿಕೃತ ಕ್ರೀಡಾ ಫೆಡರೇಶನ್ ಆಯೋಜನೆ ಮಾಡುವ ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ವಿಜೇತರಾಗಿರಬೇಕು.

  ಸೈಕ್ಲಿಂಗ್ ಕ್ರೀಡೆಯಲ್ಲಿ ತರಬೇತಿ ನೀಡಿದ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಆಸಕ್ತ ಸೈಕ್ಲಿಂಗ್ ತರಬೇತುದಾರರು ಕ್ರೀಡಾಪಟುಗಳು ಈ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 07 

  ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!

  ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ:
  ಕಚೇರಿಯ ದೂರವಾಣಿ ಸಂಖ್ಯೆ: 08352-251085 ಹಾಗೂ 9480886555 ಇವರನ್ನು ಸಂಪರ್ಕಿಸಬಹುದು.

  ಇದನ್ನೂ ಓದಿ: Belagavi: 3 ಬಣ್ಣಗಳಾಗಿ ಬದಲಾಗುತ್ತೆ ಪಾರ್ಶ್ವನಾಥ ತೀರ್ಥಂಕರರ‌ ಪ್ರತಿಮೆ! ಮೂರ್ತಿಯ ಮೇಲಿದೆ ಕನ್ನಡ ಶಾಸನ

  ಹೆಚ್ಚಿನ ಸಂಪರ್ಕಕ್ಕಾಗಿ ವಿಳಾಸ
  ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರು ಅವರು ಎಂದು ಅವರು ಪ್ರಕಟಣೆ ತಿಳಿಸಿದ್ದಾರೆ.


  ವರದಿ ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ.
  Published by:guruganesh bhat
  First published: