• Home
  • »
  • News
  • »
  • vijayapura
  • »
  • Vijayapura: ನೀವು ಹಸು ಸಾಕುತ್ತೀರೇ? ಈಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ

Vijayapura: ನೀವು ಹಸು ಸಾಕುತ್ತೀರೇ? ಈಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹೇಗೆ ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು? ಹೇಗೆ ಅರ್ಜಿ ಸಲ್ಲಿಸುವುದು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ನೋಡಿ ವಿವರ.

  • Share this:

    ವಿಜಯಪುರ:  ಸರ್ಕಾರ ವಿವಿಧ ಯೋಜನೆಗಳನ್ನು ಕೃಷಿಕರಿಗೆ, ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸುವವರಿಗೆ ಎಂದೇ ಹಮ್ಮಿಕೊಳ್ಳುತ್ತದೆ. ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ  ಸರ್ಕಾರ ಮನವಿ ಮಾಡುತ್ತಲೇ ಇರುತ್ತದೆ. ಆದರೆ ಮಾಹಿತಿಯ ಕೊರತೆಯಿಂದ ಸರ್ಕಾರಿ ಯೋಜನೆಗಳ (Karnataka Government Schemes) ಕುರಿತು ಮಾಹಿತಿಯೇ ಅಗತ್ಯವುಳ್ಳ ಸಾರ್ವಜನಿಕರಿಗೆ ತಲುಪುವುದಿಲ್ಲ. ಆದರೆ ಸರ್ಕಾರದ ವಿವಿಧ ಯೋಜನೆಗಳ ಮೇಲೆ ಒಂದು ಕಣ್ಣಿಟ್ಟರೆ ಕೃಷಿಕರು, ಕೃಷಿ ಸಂಬಂಧಿತ ಚಟುವಟಿಕೆ (Agriculture Activities)  ನಡೆಸುವವರು ಇನ್ನಷ್ಟು ಚೆನ್ನಾಗಿ ಬೆಳೆಯಬಹುದು. ಇಂತಹುದೇ ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ಯೋಜನೆಯೊಂದರ ಮಾಹಿತಿ ಇಲ್ಲಿದೆ ನೋಡಿ.


    ವಿಜಯಪುರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ತಾಲೂಕಾ ಆಡಳಿತ ಕಚೇರಿ ವತಿಯಿಂದ 2021-22 ನೇ ಸಾಲಿನಲ್ಲಿ ರಾಷ್ಟೀಯ ಕೃಷಿ ವಿಕಾಸ ಯೋಜನೆಯಡಿ ಅಭಿವೃದ್ಧಿ ಕಾರ್ಯಕ್ರಮದಡಿ ಆಕಳುಗಳಿಗೆ ನೆಲಹಾಸುಗಳ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪಶುಸಂಗೋಪನೆಯಲ್ಲಿ ನಿರತರಾದವರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಆದರೆ ಹೇಗೆ ಅರ್ಜಿ ಸಲ್ಲಿಸುವುದು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ನೋಡಿ ವಿವರ. ಈಗಲೇ ಅರ್ಜಿ ಸಲ್ಲಿಸಿ.


    ಯಾರು ಅರ್ಜಿ ಸಲ್ಲಿಸಬಹುದು?
    ವಿಜಯಪುರ ತಾಲೂಕಿನಲ್ಲಿ 29 ಸಾಮಾನ್ಯ ವರ್ಗದ, 7 ಪರಿಶಿಷ್ಟ ಜಾತಿಯ, ಹಾಗೂ 01 ಪರಿಶಿಷ್ಟ ಪಂಗಡದ ಒಟ್ಟು 37 ರೈತರಿಗೆ  2021-22 ನೇ ಸಾಲಿನಲ್ಲಿ ರಾಷ್ಟೀಯ ಕೃಷಿ ವಿಕಾಸ ಯೋಜನೆಯಡಿ ಅಭಿವೃದ್ಧಿ ಕಾರ್ಯಕ್ರಮದಡಿ ಆಕಳುಗಳಿಗೆ ನೆಲಹಾಸುಗಳ ವಿತರಣೆ ಮಾಡಲಾಗುತ್ತದೆ. ಆಸಕ್ತ ಫಲಾನುಭವಿಗಳು ಕಡ್ಡಾಯವಾಗಿ ಎರಡು ಜಾನುವಾರುಗಳನ್ನು ಹೊಂದಿರಬೇಕು.  ಓರ್ವ ಫಲಾನುಭವಿಯು ಎರಡು ಆಕಳುಗಳಿಗೆ ನೆಲಹಾಸುಗಳನ್ನು ವಿತರಿಸುವ ಘಟಕಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.


    ಅರ್ಜಿ ಆಯ್ಕೆ ಹೇಗೆ ಮಾಡಲಾಗುತ್ತದೆ?
    ಫಲಾನುಭವಿಗಳನ್ನು ಆಯಾ ವಿಧಾನಸಭಾ ಕ್ಷೇತ್ರಕ್ಕೆ ವಿಂಗಡಿಸಿದ ಗುರಿಯ ಅನ್ವಯ ಸಂಬಂಧಪಟ್ಟ ಶಾಸಕರ ಅಧ್ಯಕ್ಷತೆಯಲ್ಲಿರುವ ಸಮಿತಿಯಿಂದ ಆಯ್ಕೆ ಮಾಡಲಾಗುತ್ತದೆ. ಆಸಕ್ತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಬಹುದಾಗಿದೆ. ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಇಲ್ಲ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಕೆಗೆ ಈ ಕಚೇರಿಗೆ ಸ್ವತಃ ರೈತರೇ ಬರಬೇಕಿದೆ.


    ಏನೆಲ್ಲ ದಾಖಲೆ ಅಗತ್ಯವಿದೆ?
    ಅರ್ಜಿಯನ್ನು ಭರ್ತಿ ಮಾಡಲು ಫಲಾನುಭವಿಯ ಬಳಿ ರಾಸು ಇರುವ ಕುರಿತು ಪಶುವೈದ್ಯಾಧಿಕಾರಿಗಳಿಂದ ದೃಢೀಕರಣ ಪತ್ರ ಬೇಕೆ ಬೇಕು. ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ, ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರಗಳನ್ನು ಲಗತ್ತಿಸಿ, ಜೂನ್ 24ನೇ ತಾರೀಖಿನೊಳಗೆ ಕಚೇರಿಗೆ ಸಲ್ಲಿಸಬೇಕು.


    ಇದನ್ನೂ ಓದಿ: Snake Rescue Team: ಹಾವು ಕಂಡರೆ ಹೆದರಬೇಡಿ, ನಮಗೆ ಫೋನ್ ಮಾಡಿ! ಮೂವರು ಯುವಕರ ಈ ತಂಡ ಹೀಗಂತಿದೆ


    ಯಾವ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು?
    ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರು, ತಾಲೂಕಾ ಆಡಳಿತ ಕಛೇರಿ ವಿಜಯಪುರ.


    ಸಂಪರ್ಕ ಸಂಖ್ಯೆ: 7676823987


    ಇದನ್ನೂ ಓದಿ: Vijayapura Tourist Places: ಈಗಲೇ ವಿಜಯಪುರಕ್ಕೆ ಬನ್ನಿ, ಇವುಗಳನ್ನು ನೋಡಲು ಎರಡು ಕಣ್ಣು ಸಾಲಲ್ಲ!


    ಒಟ್ಟಿನಲ್ಲಿ 2021-22 ನೇ ಸಾಲಿನಲ್ಲಿ ರಾಷ್ಟೀಯ ಕೃಷಿ ವಿಕಾಸ ಯೋಜನೆಯಡಿ ಅಭಿವೃದ್ಧಿ ಕಾರ್ಯಕ್ರಮದಡಿ ಆಕಳುಗಳಿಗೆ ನೆಲಹಾಸುಗಳ ವಿತರಣೆ ಮಾಡುತ್ತಿರುವುದು ಈ ಭಾಗದ ರೈತರಿಗೆ ಸಂತಸದ ಸಂಗತಿ. ಅರ್ಹ ಪಲಾನುಭವಿಗಳು ಅಗತ್ಯ ದಾಖಲೆಯೊಂದಿಗೆ ಇದೇ ತಿಂಗಳು 24 ರೊಳಗಾಗಿ ಅರ್ಜಿ ಸಲ್ಲಿಸಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಪ್ರಯೋಜನೆಯನ್ನು ಅರ್ಹ ಪಲಾನುಭವಿಗಳು ಪಡೆದುಕೊಳ್ಳುವಂತೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


    ವರದಿ: ಪ್ರಶಾಂತ ಹೂಗಾರ್, ವಿಜಯಪುರ

    Published by:guruganesh bhat
    First published: