ವಿಜಯಪುರ: ಸ್ವ ಉದ್ಯೋಗದ ಕನಸು ಕಾಣುತ್ತಿರುವ ಮಹಿಳೆಯರಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಸಹಾಯಧನದ (ಸಬ್ಸಿಡಿ) ಮೂಲಕ ಸಾಲ ಸೌಲಭ್ಯವನ್ನು ಕಲ್ಪಿಸುತ್ತಿದೆ. ವಿಜಯಪುರ ಜಿಲ್ಲೆಯ (Vijayapura News) ಆಸಕ್ತ ಬಡ ವರ್ಗದ ಮಹಿಳೆಯರು ಈ ಕೆಳಗಿನ ವಿವರದಂತೆ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸ್ವ-ಉದ್ಯೋಗದ ಕನಸು ಕಾಣುತ್ತಿರುವ ಮಹಿಳೆಯರಿಗೆ ಸಹಾಯಧನದ ಮೂಲಕ ಸಾಲ ಸೌಲಭ್ಯ (Loan Facility) ಕಲ್ಪಿಸುತ್ತಿದೆ. ಕೂಡಲೇ ಆಸಕ್ತ ಮಹಿಳೆಯರು ಸರಕಾರದ ‘ಉದ್ಯೋಗಿನಿ ಯೋಜನೆಯಡಿ ಬ್ಯಾಂಕ್ನಿಂದ ಸಾಲಕ್ಕಾಗಿ ಅರ್ಜಿ (Bank Loan) ಸಲ್ಲಿಸಬಹುದಾಗಿದೆ. ಹೇಗೆ ಅರ್ಜಿ ಸಲ್ಲಿಸುವುದು? ಯಾರಿಗೆ ಅರ್ಜಿ ಸಲ್ಲಿಸುವುದು? ಯಾರೆಲ್ಲ ಈ ಯೋಜನೆಯ ಅಡಿ ಅರ್ಜಿ ಸಲ್ಲಿಸಬಹುದು? ಎಲ್ಲ ವಿವರ ಇಲ್ಲಿದೆ.
ವಯೋಮಿತಿ ಎಷ್ಟು?
ಆಸಕ್ತ ಮಹಿಳಾ ಅರ್ಜಿದಾರರ ವಯೋಮಿತಿ ಕನಿಷ್ಟ 18, ಗರಿಷ್ಟ 55 ವರ್ಷ ಒಳಗಿನವರಾಗಿರಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಮಹಿಳಾ ಅಭ್ಯರ್ಥಿಗಳು ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ‘ಉದ್ಯೋಗಿನಿ‘ ಯೋಜನೆ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ, ನಂತರ ಅದೇ ಕಚೇರಿಗೆ ತಲುಪಿಸಬೇಕು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ಜುಲೈ 4 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿರುತ್ತದೆ.
ಆದಾಯ ಮಿತಿ
ಅರ್ಜಿದಾರರ ವಾರ್ಷಿಕ ಆದಾಯ ಮಿತಿಯು 1.50 ಲಕ್ಷಕ್ಕಿಂತ ಮೀರಿರಬಾರದು.
ಇದನ್ನೂ ಓದಿ: Vijayapura: ಪ್ಲಾಸ್ಟಿಕ್, ಮದ್ಯದ ಬಾಟಲಿ ಹೆಕ್ಕಿದ ಸ್ವಾಮೀಜಿ! ವಿಡಿಯೋ ನೋಡಿ
ಲಗತ್ತಿಸಬೇಕಾದ ದಾಖಲೆಗಳು
ಅರ್ಜಿದಾರರು ಕಡ್ಡಾಯವಾಗಿ ಈ ಕೆಳಗಿನ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ.
1. ಎಸ್ಎಸ್ಎಲ್ಸಿ (SSLC) ಅಂಕಪಟ್ಟಿ
2. ಚುನಾವಣೆ ಗುರುತಿನ ಚೀಟಿ
3. ಪಡಿತರ ಚೀಟಿ
4. ಆಧಾರ್ ಕಾರ್ಡ್
5. ಆದಾಯ ಪ್ರಮಾಣ ಪತ್ರ (ಆದಾಯ ಮಿತಿ ₹1.50ಲಕ್ಷ )
6. ವಿಧವೆಯರು ಆಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ
7. ನವೆಂಬರ್ 1, 2021ರ ನಂತರ ಗ್ರಾಮ ಲೆಕ್ಕಾಧಿಕಾರಿ ಅವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ
8. ಎಸ್.ಟಿ., ಎಸ್.ಸಿ. ಅರ್ಜಿದಾರರು ಜಾತಿ ಪ್ರಮಾಣ ಪತ್ರ
9. ಬ್ಯಾಂಕ್ ಪಾಸ್ ಪುಸ್ತಕ
ಹೀಗೆ ಎಲ್ಲ ದಾಖಲೆಗಳ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಈಗಲೇ ಅರ್ಜಿ ಸಲ್ಲಿಸಿ, ಸಾಲ ಸೌಲಭ್ಯ ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ