Vijayapura News: ವಿಜಯಪುರದ ನಾಗರಿಕರೇ, ಊರಲ್ಲೇ ಇದೆ ಉತ್ತಮ ಕೆಲಸ! ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ
ಯಾರೆಲ್ಲ ಈ ಕೆಲಸಕ್ಕೆ ಅರ್ಜಿ ಹಾಕಬಹುದು? ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆಗಳೇನು? ಅಭ್ಯರ್ಥಿಗಳ ಅಗತ್ಯ ಶೈಕ್ಷಣಿಕ ಅರ್ಹತೆಗಳೇನು? ಕೆಲಸ ಹೇಗಿರುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲ ಮಾಹಿತಿ ಇಲ್ಲಿದೆ ನೋಡಿ.
ವಿಜಯಪುರದ ಸಾರ್ವಜನಿಕರೇ, ನಿಮಗೆ ನಿಮ್ಮ ಊರಲ್ಲೇ ಇದ್ದು ಕೆಲಸ ನಿರ್ವಹಿಸುವ ಆಸಕ್ತಿ ಉತ್ಸಾಹ ಇದೆಯೇ? 2022-23ನೇ ಸಾಲಿಗೆ ಸಮನ್ವಯ ಶಿಕ್ಷಣ ಚಟುವಟಿಕೆಗಳು ಅಂದರೆ, ವಿಶೇಷ ಚೇತನ ಮಕ್ಕಳಿಗೆ ಬೋಧನೆ (Specially Abled Children Teaching) ಹಾಗೂ ಸಂಬಂಧಿಸಿದ ಇತರೆ ಚಟುವಟಿಕೆಗಳ ಅನುಷ್ಠಾನ ಮಾಡಲು ನೇರ ಗುತ್ತಿಗೆ ಮೂಲಕ ವಿಜಯಪುರ ಜಿಲ್ಲೆಯ (Vijayapura) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾರೆಲ್ಲ ಈ ಕೆಲಸಕ್ಕೆ ಅರ್ಜಿ ಹಾಕಬಹುದು? ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆಗಳೇನು? ಅಭ್ಯರ್ಥಿಗಳ ಅಗತ್ಯ ಶೈಕ್ಷಣಿಕ ಅರ್ಹತೆಗಳೇನು? ಕೆಲಸ ಹೇಗಿರುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲ ಮಾಹಿತಿ ಇಲ್ಲಿದೆ ನೋಡಿ.
ಕೆಲಸದ ಹೆಸರು
ವಿಶೇಷ ಚೇತನ ಮಕ್ಕಳಿಗೆ ಬೋಧನೆ, ಚಟುವಟಿಕೆಗಳ ಅನುಷ್ಠಾನ
ಕೆಲಸದ ಸ್ಥಳ
ವಿಜಯಪುರ
ವಿದ್ಯಾರ್ಹತೆ
ಸಮನ್ವಯ ಶಿಕ್ಷಣದ ವಿಶೇಷ ಡಿ.ಇಡಿ, ಬಿ.ಇಡಿ
ವಯೋಮಿತಿ
60 ವರ್ಷ
ದೂರವಾಣಿ ಸಂಖ್ಯೆ
9972785052
ಸಂಪರ್ಕ ವಿಳಾಸ
ವಿಜಯಪುರ ಉಪನಿರ್ದೇಶಕರು (ಆಡಳಿತ) ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ-ಕರ್ನಾಟಕ ವಿಜಯಪುರ
ಯಾರು ಅರ್ಜಿ ಸಲ್ಲಿಸಬಹುದು? ವಿಶೇಷ ಶಿಕ್ಷಕರ (BEIRT) ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಲು ಸಮನ್ವಯ ಶಿಕ್ಷಣದ ವಿಶೇಷ ಡಿ.ಇಡಿ, ಬಿ.ಇಡಿ ವಿದ್ಯಾರ್ಹತೆ ಹೊಂದಿದ 60 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಡಿ.ಇಡಿ ಹಾಗೂ ಬಿ.ಇಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಕ್ಷಣವೇ ನೇರ ಗುತ್ತಿಗೆ ಮೂಲಕ ನಡೆಯಲಿರುವ ನೇಮಕಾತಿಯಲ್ಲಿ ಭಾಗವಹಿಸಬಹುದಾಗಿದೆ.
ಅರ್ಜಿ ಸಲ್ಲಿಕೆಗೆ ನಾಳೆ ಕೊನೆಯ ದಿನ
ಆಸಕ್ತ ಅಭ್ಯರ್ಥಿಗಳು ಜೂನ್ 16ರ ಸಾಯಂಕಾಲ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕಿದೆ.
ಅರ್ಜಿ ಸಲ್ಲಿಸಬೇಕಿರುವ ವಿಳಾಸ ಇಲ್ಲಿದೆ ವಿಜಯಪುರ ಉಪನಿರ್ದೇಶಕರು (ಆಡಳಿತ) ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ-ಕರ್ನಾಟಕ ವಿಜಯಪುರ
ಅರ್ಜಿ ಸಲ್ಲಿಸಲು ಈ ಕಚೇರಿಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9972785052 ಸಂಪರ್ಕ ವಿಳಾಸ: ಉಪನಿರ್ದೇಶಕರು, (ಆಡಳಿತ) ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಎಸ್.ಎಸ್.ಕೆ ವಿಜಯಪುರ ಅವರು ತಿಳಿಸಿದ್ದಾರೆ.
ವಲಯವಾರು ಖಾಲಿ ಹುದ್ದೆಗಳ ಮಾಹಿತಿಯನ್ನು ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ-ಕರ್ನಾಟಕ ವಿಜಯಪುರ ಜಿಲ್ಲಾ ಕಚೇರಿಯ ನೋಟಿಸ್ ಬೋರ್ಡ್ ಗೆ ಲಗತ್ತಿಸಿದೆ ಎಂದು ಮಾಹಿತಿ ನೀಡಲಾಗಿದೆ. ಜಿಲ್ಲಾ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ವಯೋಮಿತಿ ಎಷ್ಟಿರಬೇಕು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 60 ವಯಸ್ಸಿನ ಒಳಗಿನವರಾಗಿರಬೇಕು.
ವಿದ್ಯಾರ್ಹತೆ ಎಷ್ಟಿರಬೇಕು? ವಿಶೇಷ ಚೇತನ ಮಕ್ಕಳಿಗೆ ಬೋಧನೆ ಹಾಗೂ ಸಂಬಂಧಿಸಿದ ಇತರೆ ಚಟುವಟಿಕೆಗಳ ಅನುಷ್ಠಾನ ಮಾಡಲು ನೇರ ಗುತ್ತಿಗೆ ಮೂಲಕ ಕೆಲಸ ನಿರ್ವಹಿಸುವ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಡಿ.ಇಡಿ, ಬಿ.ಇಡಿ ಉತ್ತೀರ್ಣರಾಗಿರಬೇಕು.
ಈ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಆಯ್ಕೆಯಾದ ಬಳಕ ಜಿಲ್ಲೆಯ ವಲಯವಾರು ಖಾಲಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ತವ್ಯಕ್ಕೆ ನಿಯೋಜನೆಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೇಕೆ ತಡ? ಈಗಲೇ ಅರ್ಜಿ ಹಾಕಿ, ಆಲ್ ದಿ ಬೆಸ್ಟ್!