Vijayapura: ಮರಾಠ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಸವಲತ್ತು; ತಕ್ಷಣ ಅರ್ಜಿ ಸಲ್ಲಿಸಿ

ಹಾಗಾದರೆ ಏನಿದು ಯೋಜನೆ? ಈ ಯೋಜನೆಯಿಂದ ಯಾರಿಗೆಲ್ಲ ಏನೆಲ್ಲ ಸೌಲಭ್ಯ ದೊರೆಯಲಿದೆ? ಎಲ್ಲ ವಿವರ ಇಲ್ಲಿದೆ ನೋಡಿ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

    ವಿಜಯಪುರ : ಕರ್ನಾಟಕ ಮರಾಠ ಸಮುದಾಯಗಳ (Maratha Community)  ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆಹಿಂದುಳಿದ ವರ್ಗಗಳ ಪ್ರವರ್ಗ-3ಬಿ ಅಡಿಯಲ್ಲಿ 2 (ಎ) ಯಿಂದ 2 (ಎಫ್) ವರೆಗೆ ಬರುವ (ಎ) ಮರಾಠ, ಮರಾಠ, (ಬಿ) ಅರೆ ಕ್ಷತ್ರಿ ಅರೆ ಮರಾಠ, ಮರಾಠ (ಸಿ) ಆರ್ಯ ಆರ್ಯರು (ಡಿ) ಕೊಂಕಣ ಮರಾಠ (ಇ) ಕ್ಷತ್ರಿಯ ಮರಾಠ /ಕ್ಷತ್ರಿಯ ಮರಾಠ (ಎಫ್) ಕುಳವಾಡಿ ಸಮುದಾಯಗಳಿಗೆ ಸೇರಿದವರಿಂದ ವಿಜಯಪುರ ಜಿಲ್ಲೆಯಲ್ಲಿ (Vijayapura) ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಏನಿದು ಯೋಜನೆ? ಈ ಯೋಜನೆಯಿಂದ ಯಾರಿಗೆಲ್ಲ ಏನೆಲ್ಲ ಸೌಲಭ್ಯ ದೊರೆಯಲಿದೆ? ಎಲ್ಲ ವಿವರ ಇಲ್ಲಿದೆ ನೋಡಿ. 


























    ಸಾಲ, ಸಹಾಯಧನ ಸೌಲಭ್ಯದ ಹೆಸರುಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆ ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ
    ಅರ್ಹತೆಹಿಂದುಳಿದ ವರ್ಗಗಳ ಪ್ರವರ್ಗ-3ಬಿ ಅಡಿಯ ಸಮುದಾಯಗಳು
    ಹೇಗೆ ಅರ್ಜಿ ಸಲ್ಲಿಸುವುದು?ಇಲ್ಲಿ ಕ್ಲಿಕ್ ಮಾಡಿ
    ಕೊನೆ ದಿನಾಂಕಆಗಸ್ಟ್ 19
    ದೂರವಾಣಿ ಸಂಖ್ಯೆ08352-258128

    ಸಾಲ, ಸಹಾಯಧನ ಸೌಲಭ್ಯ
    ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆ ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ, ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಗಳಿಗೆ ಅನುಕೂಲತೆ ಪಡೆಯಬಹುದಾಗಿದೆ.


    ಕೌಶಲ್ಯ ತರಬೇತಿಗೂ ಅರ್ಜಿ
    ಅದಲ್ಲದೇ, ಮರಾಠ ಸಮುದಾಯದ ಯುವ ಜನತೆಯನ್ನು ಕೌಶಲ್ಯ ಅಭಿವೃದ್ಧಿ ಪಡಿಸಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರದ ಸಂಸ್ಥೆಗಳಾದ ಐಟಿಐ, ಜಿಟಿಟಿಸಿ, ಕೆಜಿಟಿಟಿಐರಲ್ಲಿ ಅಲ್ಪಾವಧಿ ಕೋರ್ಸ್​ಗಳ ಮೂಲಕ ಕೌಶಲ್ಯ ತರಬೇತಿ ನೀಡಲಾಗುವುದು.


    ಅರ್ಜಿ ಸಲ್ಲಿಕೆ ಹೇಗೆ?
    ಆಸಕ್ತ ಅರ್ಜಿದಾರರು ಆನ್​ಲೈನ್ ಮೂಲಕ ಕರ್ನಾಟಕ ಕೌಶಲ್ಯ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ವೆಬ್​ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


    ಇದನ್ನೂ ಓದಿ: Vijayapura: 75 ಕಿಲೋಮೀಟರ್, 8 ದಿನ, 10 ಸಾವಿರಕ್ಕೂ ಹೆಚ್ಚು ಜನ! ವಿಜಯಪುರದಲ್ಲಿ ವಿಶೇಷ ಪಾದಯಾತ್ರೆ!

    ಹೆಚ್ಚಿನ ಮಾಹಿತಿಗಾಗಿ
    ಅರ್ಜಿದಾರರು ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್​ನಲ್ಲಿ ವೀಕ್ಷಿಸಬಹುದಾಗಿದೆ. ವೆಬ್​ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ. ಅಥವಾ ವಿಜಯಪುರ ಜಿಲ್ಲಾ ಕಚೇರಿಯ ದೂರವಾಣಿ ಸಂಖ್ಯೆ 08352-258128 ಗೆ ಸಂಪರ್ಕಿಸಬಹುದಾಗಿದೆ.


    ಇದನ್ನೂ ಓದಿ: Vijayapura: ದುಬೈನಲ್ಲಿ ಉದ್ಯೋಗಾವಕಾಶ! ಈಗಲೇ ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ!

    ಅರ್ಜಿ ಸಲ್ಲಿಕೆ ಕೊನೆ ದಿನಾಂಕ
    ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ಆಗಸ್ಟ್ 19 ಕೊನೆಯ ದಿನವಾಗಿದೆ ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.


    ವರದಿ: ಪ್ರಶಾಂತ್ ಹೂಗಾರ್, ವಿಜಯಪುರ
    Published by:guruganesh bhat
    First published: