Vijayapura News: ವಿಜಯಪುರದ ರೈತರೇ, ನಿಮ್ಮನ್ನೇ ಹುಡುಕಿ ಬಂದಿದೆ ಈ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಹೊಸದಾಗಿ ನಾಟಿ ಮಾಡಿರುವ ತೋಟಗಳಿಗೆ ಮಾತ್ರ ಸಹಾಯಧನ ನೀಡಲು ಪರಿಗಣಿಸಲಾಗುವುದು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

  • Share this:
    ವಿಜಯಪುರ :2022-23ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆ (Vijayapura District) ಆಯ್ಕೆಯಾಗಿದೆ. ಆದ್ದರಿಂದ ದ್ರಾಕ್ಷಿ, ದಾಳಿಂಬೆ, ಡ್ರಾಗನ್ ಮತ್ತು ನುಗ್ಗೆ ಬೆಳೆಗಳಿಗೆ ಸಹಾಯಧನಕ್ಕೆ  (Subsidy For Farmers) ಅರ್ಜಿ ಅರ್ಹ ಫಲಾನುಭವಿ ರೈತರಿಂದ ಅರ್ಜಿ ಆಹ್ವಾನಿಸಿದ್ದು, ಎಲ್ಲ ವರ್ಗದ ರೈತರಿಗೆ ದ್ರಾಕ್ಷಿ ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೇರ್​​ಗೆ ರೂ.50,000, ದಾಳಿಂಬೆ ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೇರ್​​ಗೆ ರೂ. 28,402, ಡ್ರಾಗನ್ ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೇರ್​​ಗೆ ರೂ.30,000 ಮತ್ತು ನುಗ್ಗೆ ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೇರ್​​ಗೆ ರೂ. 54,535 ಸಹಾಯಧನ ನೀಡಲಾಗುವುದು.

    ವಿಜಯಪುರ ಜಿಲ್ಲೆಯ ಆಸಕ್ತಿಯುಳ್ಳ ರೈತರು ತಮ್ಮ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಮಾಹಿತಿ ಪಡೆದು ನಿಗದಿತ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳಾದ ಪಹಣಿ, ಬ್ಯಾಂಕ್ ಖಾತೆ ಹಾಗೂ ಆಧಾರ್ ದಾಖಲೆಗಳ ಝರಾಕ್ಸ್ ಪ್ರತಿ ಲಗತ್ತಿಸಿ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದೆ.

    ಒಬ್ಬ ರೈತ ಫಲಾನುಭವಿಗೆ ಗರಿಷ್ಠ 1.00 ಹೇ. ಕನಿಷ್ಠ 0.20 ಹೇ. ಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಹೊಸದಾಗಿ ನಾಟಿ ಮಾಡಿರುವ ತೋಟಗಳಿಗೆ ಮಾತ್ರ ಸಹಾಯಧನ ನೀಡಲು ಪರಿಗಣಿಸಲಾಗುವುದು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

    ಹೆಚ್ಚಿನ ಮಾಹಿತಿಗೆ ಈ ನಂಬರ್​ಗೆ ರೈತರು ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. 94489 99232 .

    ಇದನ್ನೂ ಓದಿ:  Krishna River Origin Video: ಕೃಷ್ಣಾ ನದಿ ಉಗಮದ ಅಪರೂಪದ ವಿಡಿಯೋ ಇಲ್ಲಿದೆ, ಕಣ್ತುಂಬಿಸಿಕೊಳ್ಳಿ!

    ನಿಗದಿತ ಗುರಿಗಿಂತ ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.

    Vijayapura: ಸೈನಿಕನ ಸೈಕಲ್ ಯಾತ್ರೆ! ಬೆಂಗಳೂರು ಟು ಕಾರ್ಗಿಲ್ ಪಯಣ ಹೀಗಿತ್ತು ನೋಡಿ

    ಅರ್ಜಿ ಸಲ್ಲಿಸಲು ಆಗಸ್ಟ್ 25 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತರ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
    Published by:guruganesh bhat
    First published: