Vijayapura: ಯಾವ್ದೂ ವೇಸ್ಟ್ ಅಲ್ಲ! ಕಸದಿಂದ ಗೊಬ್ಬರ ತಯಾರಿಸುತ್ತಿದೆ ವಿಜಯಪುರ ಪಾಲಿಕೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಗೊಬ್ಬರಕ್ಕೆ ಸಖತ್ ಡಿಮ್ಯಾಂಡ್  ಸೃಷ್ಟಿಯಾಗ್ತಿದೆ. ವಿಜಯಪುರವೊಂದೇ ಅಲ್ಲದೇ, ರಾಜ್ಯದ ನಾನಾ ಭಾಗಗಳಿಂದ ಕೃಷಿಕರು ಈ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗೊಬ್ಬರವನ್ನ ಖರೀದಿಸುತ್ತಿದ್ದಾರೆ.

  • News18 Kannada
  • 4-MIN READ
  • Last Updated :
  • Bijapur, India
  • Share this:

    ವಿಜಯಪುರ: ಕಸ ಕಡ್ಡಿಗಳನ್ನ ಬೇರ್ಪಡಿಸುತ್ತಿರೋ ಕಾರ್ಮಿಕರು, ಸಂಗ್ರಹವಾದ ವೇಸ್ಟ್​ ವಸ್ತುಗಳನ್ನ ಪುಡಿಗಟ್ಟುತ್ತಿರುವ ಮಷಿನ್. ನಿರುಪಯುಕ್ತ ವಸ್ತುಗಳೆಲ್ಲ ಮಾಯವಾಗಿ ತಯಾರಾಗ್ತಿವೆ ನೋಡಿ ಉಪಯುಕ್ತ ವಸ್ತುಗಳು! (Garbage) ಇದೆಲ್ಲವೂ ಗುಮ್ಮಟ ನಗರಿಯ (Vijayapura News) ಸ್ವಚ್ಛ ಸರ್ವೇಕ್ಷಣಾ ಸಾಧನಗೆ ಕೈಗನ್ನಡಿ ಹಿಡಿದಂತಿದೆ.


    ನಿಜ, ವಿಜಯಪುರ ಮಹಾನಗರ ಪಾಲಿಕೆಯು ತ್ಯಾಜ್ಯ ವಿಲೇವಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ನಗರದ ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆ. ನಗರದಾದ್ಯಂತ ಪ್ರತಿ ದಿನ ಕಸ ಸಂಗ್ರಹ ವಾಹನ ಮೂಲಕ ಸಂಚರಿಸೋ ಪೌರ ಕಾರ್ಮಿಕರು ಟನ್​ಗಟ್ಟಲೆ ತ್ಯಾಜ್ಯ ಸಂಗ್ರಹ ಮಾಡುತ್ತಾರೆ. ಈ ಪೈಕಿ ಕೆಲ ವಾರ್ಡ್‌ಗಳಲ್ಲಿ ಒಣ ಕಸ, ಹಸಿ ಕಸ ವಿಂಗಡಿಸಿ ಸಂಗ್ರಹ ಮಾಡಲಾಗುತ್ತಿದೆ. ಈ ಕಸ ಗೊಬ್ಬರವಾಗಿ ಪರಿವರ್ತನೆಯಾಗ್ತಿದೆ!


    ಇದನ್ನೂ ಓದಿ: Vijayapura: ಇಂಡಿಗೆ ಬಂತು ರಾಷ್ಟ್ರೀಯ ಹೆದ್ದಾರಿ, ಎಲ್ಲಿಂದ ಎಲ್ಲಿಗೆ ಸಂಪರ್ಕ ಕಲ್ಪಿಸುತ್ತೆ ಈ ನ್ಯಾಷನಲ್ ಹೈವೇ?


    31 ಎಕರೆ ವಿಸ್ತೀರ್ಣದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ
    ವಿಜಯಪುರದ ಇಂಡಿ ರಸ್ತೆಯಲ್ಲಿ 31 ಎಕರೆ ವಿಸ್ತೀರ್ಣದ ತ್ಯಾಜ್ಯ ಸಂಸ್ಕರಣಾ ಘಟಕವಿದ್ದು, ಇಲ್ಲಿ ಹಸಿಕಸವನ್ನು ಬಳಸಿಕೊಂಡು ಕಾಂಪೋಸ್ಟ್‌ ಗೊಬ್ಬರ ತಯಾರಿಸಲಾಗುತ್ತಿದೆ. ಪ್ರತಿ ದಿನ ಹತ್ತಾರು ಟನ್‌ ಗೊಬ್ಬರ ಉತ್ಪಾದಿಸಲಾಗುತ್ತಿದೆ. ಅಂದಹಾಗೆ ಈ ಗೊಬ್ಬರ 25 ಕೆಜಿ ಚೀಲಕ್ಕೆ ತಲಾ 700 ರೂ. ನಿಗದಿಪಡಿಸಲಾಗಿದೆ.




    ಇದನ್ನೂ ಓದಿ: Vijayapura: ವಿಜಯಪುರದ ಕೃಷಿಕರಿಗೆ ಮಹಾರಾಷ್ಟ್ರ ಕಾರ್ಮಿಕರ ನೆರವು!


    ಈ ಗೊಬ್ಬರಕ್ಕೆ ಸಖತ್ ಡಿಮ್ಯಾಂಡ್  ಸೃಷ್ಟಿಯಾಗ್ತಿದೆ. ವಿಜಯಪುರವೊಂದೇ ಅಲ್ಲದೇ, ರಾಜ್ಯದ ನಾನಾ ಭಾಗಗಳಿಂದ ಕೃಷಿಕರು ಈ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗೊಬ್ಬರವನ್ನ ಖರೀದಿಸುತ್ತಿದ್ದಾರೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: