ವಿಜಯಪುರ: ಬರದ ನಾಡಲ್ಲಿ ತುಂಬಿದ ಕೆರೆಗಳು. ಸುತ್ತಮುತ್ತಲಿನ ಜನರಲ್ಲಿ ಮೂಡಿದೆ ಹರ್ಷ. ಊರಿಗೆ ಆಧಾರವಾದ ಕೆರೆಗಳು ಈ ಬಾರಿ ಭರ್ತಿಯಾಗಿದ್ದೇ ವಿಶೇಷ. ಮೊನ್ನೆ ಮೊನ್ನೆವರೆಗೂ ನೀರಿಲ್ಲದೇ ಬಣಗುಡುತ್ತಿದ್ದ ಕೆರೆ (Lakes In Vijayapura) ಇದೀಗ ಜಲಧಾರೆಯನ್ನೇ ಹರಿಸುತ್ತಿದೆ. ಕೆರೆಗೆ ಜೀವ ಕಳೆ ಬಂದಿದ್ದನ್ನ ನೋಡಿ, ಜನರಿಗೂ ಜೀವ ಬಂದಂತಾಗಿದೆ. ನಿಜ, ಬಾಗಲಕೋಟೆಯ (Bagalakot Lakes) ಶಿರೂರು ಗ್ರಾಮದ ಈ ಕೆರೆ (Shirur Lake) ಐತಿಹಾಸಿಕವಾಗಿಯೂ ಫೇಮಸ್. ಹಿಂದೆ ಇದೇ ನೆಲದಲ್ಲಿ ಸಾಧು ಸಂತರು ನೆಲೆಸಿದ್ರು ಅನ್ನೋ ನಂಬಿಕೆಯಿದೆ.
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಶಿರೂರಿನಲ್ಲಿ ಐತಿಹಾಸಿಕ ಕೆರೆಗಳಿದ್ದು ಕೆಲ ತಿಂಗಳುಗಳ ಹಿಂದೆ ನೀರಿಲ್ಲದೆ ಬಣಗುಡುತ್ತಿದ್ದವು. ಆದ್ರೆ ಇದೀಗ ಇಲ್ಲಿನ ಐದಾರು ಕೆರೆಗಳು ಭರ್ತಿಯಾಗಿವೆ. ಈ ಊರಿನ ಸುತ್ತಲೂ ನಾಲ್ಕೈದು ಕೆರೆಗಳಿರುವುದು ಈ ಗ್ರಾಮದ ವಿಶೇಷ.
ಈ ಕೆರೆಗಳೂ ಮೈದುಂಬಿವೆ!
ಚಾಚಿಶಟ್ಟಿ ಕೆರೆ, ದೊಡ್ಡಕೆರೆ, ಪಡಗೆರೆ, ಅಂಟವಾಳ ಕೆರೆ, ಭೊಸರೆಡ್ಡಿ ಕೆರೆ, ಶಿವನ ಕೆರೆ, ಗುಡಮಿಂಚಿ ಕೆರೆ ಹೀಗೆ ಹಲವು ಕೆರೆಗಳು ತುಂಬಿವೆ. ಅದ್ರಲ್ಲೂ ಈ ಬಾಚಿಶಟ್ಟಿ ಕೆರೆಯಂತೂ ಅಂದಾಜು 48 ಎಕರೆ ಜಾಗದಲ್ಲಿದೆ. ಇದೇ ಕೆರೆಯ ನೀರನ್ನೇ ಗ್ರಾಮದ ಜನರು ದಿನನಿತ್ಯ ಬಳಕೆ ಮಾಡ್ತಾರೆ.
ಇದನ್ನೂ ಓದಿ: Positive Story: 12 ವರ್ಷಗಳಿಂದ ಸೈಕಲ್ಲೇ ಇವರ ವಾಹನ! ಪಾಕಿಸ್ತಾನಕ್ಕೂ ಭೇಟಿ ನೀಡುವ ಆಸೆ
ಮಣ್ಣಿನಂತೆ ನೀರಿಗೂ ಕೆಂಬಣ್ಣ!
ಪಡಗೆರೆಯು ದೊಡ್ಡ ಕೆರೆಯ ಪಶ್ಚಿಮ ದಿಕ್ಕಿನಲ್ಲಿದ್ದು ದಕ್ಷಿಣಕ್ಕೆ ಗುಡ್ಡ, ಪಶ್ಚಿಮಕ್ಕೆ ರೈತರ ಭೂಮಿ ಇದೆ. ಈ ಕೆರೆಗೆ ಮಳೆಗಾಲದಲ್ಲಿ ಬೆಟ್ಟದಿಂದ ಭೈರಪ್ಪನ ಜಲಪಾತದಿಂದ ನೀರು ಹರಿದುಬಂದು ಕೆರೆ ಸೇರುತ್ತೆ. ಇದಕ್ಕೆ ಪಡಗೆರೆ ಅನ್ನಲಾಗುತ್ತೆ. ಇಲ್ಲಿರೋ ಮಣ್ಣಿನಂತೆ ನೀರೂ ಸಹ ಕೆಂಪು ಬಣ್ಣದಲ್ಲಿದೆ ಅನ್ನೋದು ವಿಶೇಷ.
ಇದನ್ನೂ ಓದಿ: Special Ghee: ಈ ತುಪ್ಪಕ್ಕೆ ಕೆಜಿಗೆ 2,500 ರೂಪಾಯಿ! ಖರೀದಿಸುವ ಮುನ್ನ ಜೇಬು ನೋಡ್ಕೊಳ್ಳಿ
ಒಟ್ಟಿನಲ್ಲಿ ಬಾಗಲಕೋಟೆ ಮಂದಿ ಕಾಪಿಟ್ಟ ಈ ಕೆರೆಗಳು, ಈ ಭಾಗದ ಮಂದಿಗೆ ಎಂದಿಗೂ ಮೋಸ ಮಾಡಿಲ್ಲ. ಕೆರೆಗಳೂ ಸಹ ಜೀವಜಲ ನೀಡಿ ಜನರನ್ನು ಸದಾ ಪೋಷಿಸಿಕೊಂಡು ಬಂದಿವೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ