• Home
  • »
  • News
  • »
  • vijayapura
  • »
  • Vijayapura: ವರ್ಷದ 6 ತಿಂಗಳು ಮಾತ್ರ ಇವರು ರೈತರು!

Vijayapura: ವರ್ಷದ 6 ತಿಂಗಳು ಮಾತ್ರ ಇವರು ರೈತರು!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಹೀಗೆ ಗುಳೆ ಹೊರಡೋದರಿಂದ ಅವರ ಜೊತೆಗೆ ಮರಿ, ಮಕ್ಕಳೆಲ್ಲರನ್ನೂ ಕರೆದೊಯ್ತಾರೆ. ಮನೆಗೆ ಬೀಗ ಹಾಕಿ ಬೇರೆ ರಾಜ್ಯ ಸೇರ್ತಾರೆ.

  • Share this:

    ವಿಜಯಪುರ: ಲೋಡುಗಟ್ಟಲೆ ವಿಧವಿಧದ ಹಣ್ಣು, ತರಕಾರಿ. ಜಮೀನಿನಲ್ಲಿ ಅರಳಿನಿಂತು ಮುಗುಳ್ನಗುತ್ತಿರೋ ಸೇವಂತಿಗೆ. ಇದು ವಿಜಯಪುರದ (Vijayapura) ಕೂಡಗಿ ತಾಂಡಾದ (Kudgi Tanda) ದೃಶ್ಯ. ಆದ್ರೆ ಇದನ್ನ ನೋಡೋಕೆ ಸಿಗೋದು ವರ್ಷದ 6 ತಿಂಗಳಷ್ಟೇ! ಆ ನಂತರ ಇಲ್ಲಿ ಯಾವ ತರಕಾರೀನೂ ಇರಲ್ಲ.. ಹೀಗೆ ನಳನಳಿಸುತ್ತಿರೋ ಸೇವಂತಿಗೆನೂ ಇರಲ್ಲ! ಓ.. ಅದೆಲ್ಲವೂ ಮಾರಾಟವಾಗುತ್ತೆ ಅಂತಾನ ನಿಮ್ ಪ್ರಶ್ನೆ? ಹಂಗಲ್ಲ, ಇಲ್ಲಿನ ಜನರೂ ಆ ಟೈಮಿಗೆ ಇಲ್ಲಿ ಇರೋದೇ ಇಲ್ಲ ಅನ್ನೋದೆ ಈ ಸ್ಟೋರಿಯ ಅಸಲಿಯತ್ತು.


    ಹೂ, ಹಣ್ಣು, ತರಕಾರಿ ಕೃಷಿ ಮಾಡೋ ಇವರು ಈ ತಾಂಡಾದಲ್ಲಿರುವ ಮೂಲ ನಿವಾಸಿಗಳು ಲಂಬಾಣಿ ಜನಾಂಗದವರು. ವಿಜಯಪುರ ಜಿಲ್ಲೆಯಲ್ಲಿ ನೂರಾರು ತಾಂಡಾಗಳಿವೆ, ಅದರಲ್ಲಿ ಕೆಲ ನಿವಾಸಿಗಳು ಬರಗಾಲ ಬಂದ್ರೆ ಮನೆಮಠ ಬಿಟ್ಟು ಬೇರೆ ರಾಜ್ಯಗಳಿಗೆ ಗುಳೆ ಹೋಗ್ತಾರೆ. ಬಣ್ಣಬಣ್ಣದ ಹೂವುಗಳಿಂದ ಗಮನ ಸೆಳೆಯುವ ಈ ಕೂಡಗಿ ತಾಂಡಾ ಗ್ರಾಮಸ್ಥರು ಈ ಊರಲ್ಲಿ ಕೇವಲ 6 ತಿಂಗಳು ಮಾತ್ರ ಜೀವನ ನಡೆಸ್ತಾರೆ.


    ಉಳಿದ 6 ತಿಂಗಳ ಜೀವನ ಎಲ್ಲಿ ಹೇಗೆ?
    ಇನ್ನಾರು ತಿಂಗಳು ಗೋವಾ, ಮಹಾರಾಷ್ಟ್ರ, ತಮಿಳುನಾಡು ಸೇರಿ ನಾನಾ ರಾಜ್ಯಗಳಿಗೆ ಗುಳೆ ಹೋಗ್ತಾರೆ. ಗಾರೆ ಕೆಲಸ, ಬಾವಿ ತೋಡೋದು, ಬೃಹತ್ ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿ, ಮತ್ತೆ ಆರು ತಿಂಗಳು ಗ್ರಾಮಕ್ಕೆ ಮರಳಿ ಕೃಷಿ ಜೀವನ ನಡೆಸ್ತಾರೆ.


    ಇದನ್ನೂ ಓದಿ: Bagalakote Viral Video: ಕೃಷ್ಣಾ ನದಿಯಲ್ಲಿ ಟ್ರ್ಯಾಕ್ಟರ್ ತೇಲುತ್ತೆ! ಕಬ್ಬು ಅತ್ತಂದಿತ್ತ ದಾಟುತ್ತೆ!


    ಒಂದರ್ಥದಲ್ಲಿ ಇವರಿಗೆ ಬದುಕಿನ ಕಲೆ ಚೆನ್ನಾಗಿಯೇ ಗೊತ್ತಿದೆ ಅನ್ನಬಹುದು. ತಾವು ಬೆಳೆಯುವ ಹೂಕೃಷಿಗಳಲ್ಲಿಯೇ ಈ ಹಳದಿ ಸೇವಂತಿಗೆ ಹೆಚ್ಚು ಲಾಭದಾಯಕವಂತೆ. ಕಡಿಮೆ ಖರ್ಚಲ್ಲಿ ಅಧಿಕ ಇಳುವರಿ ನೀಡೋದು ಈ ಹೂವಿನ ಹೆಗ್ಗಳಿಕೆ. ಆದ್ರೂ ಸಹ ಆರು ತಿಂಗಳು ಕೃಷಿ ಭೂಮಿಯಲ್ಲಿ, ಇನ್ನಾರು ತಿಂಗಳು ಬೇರೆ ಯಾರದ್ದೋ ಭೂಮಿಯಲ್ಲಿ ಕೂಲಿಯಾಳುಗಳಾಗಿರ್ತಾರೆ.


    ಇದನ್ನೂ ಓದಿ: North Karnataka: ಉತ್ತರ ಕರ್ನಾಟಕ ಮೊದಲು ಹೇಗಿತ್ತು? ತಿಳಿಯೋಕೆ ಇಲ್ಲಿಗೆ ಬರ್ಲೇಬೇಕು!


    ಹೂವಿನಂತಿರೊ ಮಕ್ಕಳ ಶಿಕ್ಷಣ ಮುದುಡದಿರಲಿ
    ಹೀಗೆ ಗುಳೆ ಹೊರಡೋದರಿಂದ ಅವರ ಜೊತೆಗೆ ಮರಿ, ಮಕ್ಕಳೆಲ್ಲರನ್ನೂ ಕರೆದೊಯ್ತಾರೆ. ಮನೆಗೆ ಬೀಗ ಹಾಕಿ ಬೇರೆ ರಾಜ್ಯ ಸೇರ್ತಾರೆ. ಇದೆಲ್ಲವೂ ಹೂವಿನಂತಿರೊ ಮಕ್ಕಳ ಶಿಕ್ಷಣವನ್ನು ಬಾಡಿ ಹೋಗುವಂತೆ ಮಾಡುತ್ತೆ. ಹೀಗಾಗಿ ಜಿಲ್ಲಾಡಳಿತ ಇಂತಹ ತಾಂಡಾಗಳ ಬಗ್ಗೆ ಗಮನಹರಿಸುವ ಅನಿವಾರ್ಯತೆಯೂ ಇದೆ.


    ವರದಿ : ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: