• Home
  • »
  • News
  • »
  • vijayapura
  • »
  • Kho Kho Tournament: ಮಂಡ್ಯ ಬಾಲಕಿಯರು, ಮೈಸೂರು ಬಾಲಕರು ಖೋ ಖೋದಲ್ಲಿ ರಾಜ್ಯಕ್ಕೇ ಫಸ್ಟ್

Kho Kho Tournament: ಮಂಡ್ಯ ಬಾಲಕಿಯರು, ಮೈಸೂರು ಬಾಲಕರು ಖೋ ಖೋದಲ್ಲಿ ರಾಜ್ಯಕ್ಕೇ ಫಸ್ಟ್

ಇಲ್ಲಿ ನೋಡಿ ಖೋ ಖೋ ಆಟ

"ಇಲ್ಲಿ ನೋಡಿ ಖೋ ಖೋ ಆಟ"

ಖೋ.. ಖೋ.. ಎನ್ನುತ್ತಾ ಎದುರಾಳಿಯನ್ನ ಡೈ ಮೂಲಕ ಖೆಡ್ಡಾಕ್ಕೆ ಉರುಳಿಸುವ ದೃಶ್ಯವಂತೂ ಅಮೋಘವಾಗಿತ್ತು. ನೆರೆದಿದ್ದ ವಿದ್ಯಾರ್ಥಿಗಳೆಲ್ಲರೂ ತಮ್ಮ ತಂಡವನ್ನು ಬೆಂಬಲಿಸುತ್ತಾ, ಕ್ರೀಡಾಪಟುಗಳು ಹೆಸರಿಡಿದು ಕೂಗುತ್ತಾ ಹುರಿದುಂಬಿಸಿದ್ರು.

  • News18 Kannada
  • Last Updated :
  • Bijapur, India
  • Share this:

    ಖೋ.. ಖೋ.. ಎನ್ನುತ್ತಾ ಜಿದ್ದಿಗೆ ಬಿದ್ದ ಆಟಗಾರರು. ಮೈದಾನ ಸುತ್ತಲೂ ಘೋಷಣೆ ಕೂಗುತ್ತಾ ಬೆಂಬಲಿಸ್ತಿರೋ ವಿದ್ಯಾರ್ಥಿಗಳು. ಇದೆಲ್ಲ ಕಂಡು ಬಂದಿದ್ದು ಗುಮ್ಮಟ ನಗರಿ ವಿಜಯಪುರದಲ್ಲಿ. ಯೆಸ್, ಪದವಿಪೂರ್ವ ಕಾಲೇಜು ಹಂತದ ರಾಜ್ಯ ಮಟ್ಟದ ಖೋ ಖೋ ಕ್ರೀಡಾ ಕೂಟಕ್ಕೆ ವಿಜಯಪುರ ಸಾಕ್ಷಿಯಾಯಿತು. ವಿಜಯಪುರ ಪದವಿ ಪೂರ್ವ ಶಿಕ್ಷಣ ಇಲಾಖೆ, ಎಸ್ ಎಸ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿ ವಿಜಯಪುರದಲ್ಲಿ ನಡೆಯಿತು. ಬೇರೆ ಬೇರೆ ಜಿಲ್ಲೆಯಿಂದ ಒಟ್ಟು 33 ಬಾಲಕರ ತಂಡ, 33 ಬಾಲಕಿಯರ ತಂಡ ಭಾಗವಹಿಸಿದ್ದು, 832 ಕ್ರೀಡಾಪಟುಗಳು ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಸೆಣಸಾಟ ನಡೆಸಿದ್ರು.


    ಖೋ.. ಖೋ.. ಎನ್ನುತ್ತಾ ಎದುರಾಳಿಯನ್ನ ಡೈ ಮೂಲಕ ಖೆಡ್ಡಾಕ್ಕೆ ಉರುಳಿಸುವ ದೃಶ್ಯವಂತೂ ಅಮೋಘವಾಗಿತ್ತು. ನೆರೆದಿದ್ದ ವಿದ್ಯಾರ್ಥಿಗಳೆಲ್ಲರೂ ತಮ್ಮ ತಂಡವನ್ನು ಬೆಂಬಲಿಸುತ್ತಾ, ಕ್ರೀಡಾಪಟುಗಳು ಹೆಸರಿಡಿದು ಕೂಗುತ್ತಾ ಹುರಿದುಂಬಿಸಿದ್ರು.


    ಇದನ್ನೂ ಓದಿ: Gol Gumbaz Travel Plan: 25 ರೂಪಾಯಿಯಲ್ಲಿ ಗೋಲ್ ಗುಂಬಜ್‌ ನೋಡಿ!


    ಇದೇ ಮೊದಲ ಬಾರಿಗೆ ವಿಜಯಪುರ ನಗರದಲ್ಲಿ ಪದವಿಪೂರ್ವ ಕಾಲೇಜು ಮಟ್ಟದ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಖೋ ಖೋ ಪಂದ್ಯಾವಳಿಯನ್ನ ನಡೆಸಿದ್ದು ಕ್ರೀಡಾಸಕ್ತರಿಗೂ ಖುಷಿ ಕೊಟ್ಟಿದೆ. ಜೊತೆಗೆ, ಬೇರೆ ಬೇರೆ ಜಿಲ್ಲೆಗಳಿಂದ ಬಂದ ಕ್ರೀಡಾಳುಗಳನ್ನು ಉತ್ತಮ ರೀತಿಯಲ್ಲಿ ಉಪಚರಿಸಲಾಯಿತು. ಊಟ, ವಸತಿ ವ್ಯವಸ್ಥೆಯನ್ನು ಎರಡು ದಿನಗಳ ಕಾಲ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು.


    ಇವರೇ ನೋಡಿ ಚಾಂಪಿಯನ್ ಟೀಮ್
    ಪಂದ್ಯಾವಳಿಯಲ್ಲಿ ಮಂಡ್ಯ ಜಿಲ್ಲೆಯ ಬಾಲಕಿಯರು ಮತ್ತು ಮೈಸೂರು ಜಿಲ್ಲೆಯ ಬಾಲಕರು ಚಾಂಪಿಯನ್​ಗಳಾದ್ರು. ಒಟ್ಟಾರೆ ವಿಜಯಪುರದ ಕ್ರೀಡಾಸಕ್ತರಲ್ಲಿ ಖೋ ಖೋ ಪಂದ್ಯಾಟ ಹೊಸ ಹುರುಪು ತುಂಬಿದ್ದಂತೂ ಖರೆ!


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: